Site icon Vistara News

Women’s T20 World Cup 2023: ಐಸಿಸಿ ಮಹಿಳೆಯರ ಟಿ20 ವಿಶ್ವಕಪ್​ ವೇಳಾಪಟ್ಟಿ; ಭಾರತದ ಮೊದಲ ಪಂದ್ಯ ಯಾವಾಗ?

Women’s T20 World Cup 2023

#image_title

ಕೇಪ್‌ಟೌನ್‌: ಬಹುನಿರೀಕ್ಷಿತ ವನಿತೆಯರ ಟಿ 20 ವಿಶ್ವ ಕಪ್(Women’s T20 World Cup 2023)​ ಟೂರ್ನಿ ದಕ್ಷಿಣ ಆಫ್ರಿಕಾ ಸಿಂಗರಿಸಿಕೊಂಡು ನಿಂತಿದೆ. ಫೆ.10ರಿಂದ 26ರ ತನಕ 8ನೇ ಆವೃತ್ತಿಯ ವಿಶ್ವ ಕಪ್‌ ನಡೆಯಲಿದೆ. ಒಟ್ಟು 10 ತಂಡಗಳು ಪಾಲ್ಗೊಳ್ಳಲಿರುವ ಈ ಪಂದ್ಯಾವಳಿಯ ವೇಳಾಪಟ್ಟಿ ಇಂತಿದೆ.

ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿವೆ. ಈ ಪಂದ್ಯ ಇಂದು(ಫೆ.10) ಕೇಪ್‌ಟೌನ್​ನಲ್ಲಿ ನಡೆಯಲಿದೆ ರಾತ್ರಿ 10.30 ಪಂದ್ಯ ಆರಂಭವಾಗಲಿದೆ.

ಈವರೆಗಿನ 7 ವಿಶ್ವಕಪ್‌ ಕೂಟಗಳಲ್ಲಿ ಆಸ್ಟ್ರೇಲಿಯದ ವನಿತೆಯರು 6 ಸಲ ಫೈನಲ್‌ಗೆ ಲಗ್ಗೆಯಿರಿಸಿ ಸರ್ವಾಧಿಕ 5 ಸಲ ಚಾಂಪಿಯನ್‌ ಆಗಿ ಮೂಡಿಬಂದಿದ್ದಾರೆ. ಈ ಸಲವೂ ಗೆದ್ದರೆ ಎರಡನೇ ಸಲ ಹ್ಯಾಟ್ರಿಕ್‌ ಪ್ರಶಸ್ತಿಗೆ ಭಾಜನರಾಗಲಿದ್ದಾರೆ.
ಮೇಲ್ನೋಟಕ್ಕೆ ಭಾರತ ತಂಡವೂ ಬಲಿಷ್ಠವಾಗಿಯೇ ಇದೆ. ಆದರೆ ಭಾರತ ಯಾವುದೇ ಒತ್ತಡದಿಂದ ಪಂದ್ಯವನ್ನಾಡಬಾರದು ಏಕೆಂದರೆ ಹಲವು ಟೂರ್ನಿಯಲ್ಲಿ ಭಾರತ ತಂಡ ಲೀಗ್​ಗಳಲ್ಲಿ ಉತ್ತಮ ಪ್ರದರ್ಶನ ತೋರಿ ಫೈನಲ್​ಗೆ ಲಗ್ಗೆ ಇಟ್ಟಿವೆ. ಆದರೆ ಫೈನಲ್​ನಲ್ಲಿ ಭಯದಿಂದ ಆಡುವ ಮೂಲಕ ಗೆಲ್ಲುವ ಪಂದ್ಯವನ್ನೂ ಸೋತ ಹಲವು ನಿದರ್ಶನಗಳಿವೆ ಆದ್ದರಿಂದ ಈ ಬಾರಿ ಭಾರತ ಭಯಮುಕ್ತವಾಗಿ ಆಡಬೇಕಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಭಾನುವಾರ ಪಾಕಿಸ್ತಾನ ವಿರುದ್ಧ ಆಡಲಿದೆ.

ವನಿತೆಯರ ಟಿ20 ವಿಶ್ವಕಪ್‌ ವೇಳಾಪಟ್ಟಿ
ದಿನಾಂಕ ಪಂದ್ಯ ಸ್ಥಳ ಆರಂಭ

ಫೆ. 10 ದಕ್ಷಿಣ ಆಫ್ರಿಕಾ-ಶ್ರೀಲಂಕಾ ಕೇಪ್‌ ಟೌನ್‌ ರಾ. 10.30
ಫೆ. 11 ವೆಸ್ಟ್‌ ಇಂಡೀಸ್‌-ಇಂಗ್ಲೆಂಡ್‌ ಪಾರ್ಲ್ ಸಂ. 6.30
ಫೆ. 11 ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ ಪಾರ್ಲ್ ರಾ. 10.30
ಫೆ. 12 ಭಾರತ-ಪಾಕಿಸ್ಥಾನ ಕೇಪ್‌ ಟೌನ್‌ ಸಂ. 6.30
ಫೆ. 12 ಬಾಂಗ್ಲಾದೇಶ-ಶ್ರೀಲಂಕಾ ಕೇಪ್‌ ಟೌನ್‌ ರಾ. 10.30
ಫೆ. 13 ಇಂಗ್ಲೆಂಡ್‌-ಐರ್ಲೆಂಡ್‌ ಪಾರ್ಲ್ ಸಂ. 6.30
ಫೆ. 13 ದ. ಆಫ್ರಿಕಾ-ನ್ಯೂಜಿಲ್ಯಾಂಡ್‌ ಪಾರ್ಲ್ ರಾ. 10.30
ಫೆ. 14 ಆಸ್ಟ್ರೇಲಿಯ-ಬಾಂಗ್ಲಾದೇಶ ಕೆಬೆರಾ ರಾ. 10.30
ಫೆ. 15 ಭಾರತ-ವೆಸ್ಟ್‌ ಇಂಡೀಸ್‌ ಕೇಪ್‌ ಟೌನ್‌ ಸಂ. 6.30
ಫೆ. 15 ಪಾಕಿಸ್ಥಾನ-ಐರ್ಲೆಂಡ್‌ ಕೇಪ್‌ ಟೌನ್‌ ರಾ. 10.30
ಫೆ. 16 ಶ್ರೀಲಂಕಾ-ಆಸ್ಟ್ರೇಲಿಯ ಕೆಬೆರಾ ಸಂ. 6.30
ಫೆ. 17 ನ್ಯೂಜಿಲ್ಯಾಂಡ್‌-ಬಾಂಗ್ಲಾ ಕೇಪ್‌ ಟೌನ್‌ ಸಂ. 6.30
ಫೆ. 17 ವೆಸ್ಟ್‌ ಇಂಡೀಸ್‌-ಐರ್ಲೆಂಡ್‌ ಕೇಪ್‌ ಟೌನ್‌ ರಾ. 10.30
ಫೆ. 18 ಭಾರತ-ಇಂಗ್ಲೆಂಡ್‌ ಕೆಬೆರಾ ರಾ. 6.30
ಫೆ. 18 ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯ ಕೆಬೆರಾ ರಾ. 10.30
ಫೆ. 19 ಪಾಕಿಸ್ಥಾನ-ವೆಸ್ಟ್‌ ಇಂಡೀಸ್‌ ಪಾರ್ಲ್ ಸಂ. 6.30
ಫೆ. 19 ನ್ಯೂಜಿಲ್ಯಾಂಡ್‌-ಶ್ರೀಲಂಕಾ ಪಾರ್ಲ್ ರಾ. 10.30
ಫೆ. 20 ಭಾರತ-ಐರ್ಲೆಂಡ್‌ ಕೆಬೆರಾ ಸಂ. 6.30
ಫೆ. 21 ಇಂಗ್ಲೆಂಡ್‌-ಪಾಕಿಸ್ಥಾನ ಕೇಪ್‌ ಟೌನ್‌ ಸಂ. 6.30
ಫೆ. 21 ದಕ್ಷಿಣ ಆಫ್ರಿಕಾ-ಬಾಂಗ್ಲಾದೇಶ ಕೇಪ್‌ ಟೌನ್‌ ರಾ. 10.30
ಫೆ. 23 ಸೆಮಿಫೈನಲ್‌-1 ಕೇಪ್‌ ಟೌನ್‌ ರಾ. 6.30
ಫೆ. 24 ಸೆಮಿಫೈನಲ್‌-2 ಕೇಪ್‌ ಟೌನ್‌ ರಾ. 6.30
ಫೆ. 26 ಫೈನಲ್‌ ಕೇಪ್‌ ಟೌನ್‌ ರಾ. 6.30

ಸಮಯ: ಭಾರತೀಯ ಕಾಲಮಾನ

ಪ್ರಸಾರ: ಸ್ಟಾರ್‌ ಸ್ಫೋರ್ಟ್ಸ್

ಗ್ರೂಪ್‌-1: ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್‌, ದ. ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ.

ಗ್ರೂಪ್‌-2: ಇಂಗ್ಲೆಂಡ್‌, ಭಾರತ, ವೆಸ್ಟ್‌ ಇಂಡೀಸ್‌, ಪಾಕಿಸ್ಥಾನ, ಐರ್ಲೆಂಡ್‌.

Exit mobile version