ಮುಂಬಯಿ: ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ಐಸಿಸಿ ಏಕದಿನ ವಿಶ್ವಕಪ್(ICC World Cup 2023) ನಡೆಯುತ್ತಿದೆ. ಈ ಮಹತ್ವದ ಟೂರ್ನಿ ಅಕ್ಟೋಬರ್ 5ರಿಂದ ಆರಂಭವಾಗಿ ನವೆಂಬರ್ 19ರ ತನಕ ನಡೆಯಲಿದೆ. ಈ ಟೂರ್ನಿಗೆ ಮಂಗಳವಾರ 15 ಮಂದಿ ಆಟಗಾರರ ಭಾರತ ತಂಡವೂ ಪ್ರಕಟಗೊಂಡಿದೆ. ಈ ಟೂರ್ನಿಗೆ ವಿಶೇಷ ಅತಿಥಿಯಾಗಿ ಬಾಲಿವುಡ್ನ ಹಿರಿಯ ನಟ ಅಮಿತಾಬ್ ಬಚ್ಚನ್(Amitabh Bachchan) ಅವರಿಗೆ ಬಿಸಿಸಿಐ ಗೋಲ್ಡನ್ ಟಿಕೆಟ್ ನೀಡಿ ಆಹ್ವಾನಿಸಿದೆ.
ಮಂಗಳವಾರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ(Jay Shah) ಅವರು ಮುಂಬಯಿಯ ಅಮಿತಾಬ್ ಬಚ್ಚನ್ ನಿವಾಸಕ್ಕೆ ತೆರಳಿ ಈ ಗೋಲ್ಡನ್ ಟಿಕೆಟ್ ನೀಡಿದ್ದಾರೆ. ಅಮಿತಾಬ್ಗೆ ಗೋಲ್ಡನ್ ಟಿಕೆಟ್ ನೀಡಿದ ಫೋಟೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ‘ಗೋಲ್ಡನ್ ವ್ಯಕ್ತಿಗಾಗಿ ಈ ಗೋಲ್ಡನ್ ಟಿಕೆಟ್. ಬಿಸಿಸಿಐ ಕಡೆಯಿಂದ ಸಹಸ್ರಮಾನದ ಸೂಪರ್‌ಸ್ಟಾರ್ ಶ್ರೀ ಅಮಿತಾಬ್ಗೆ ಈ ಟಿಕೆಟ್ ನೀಡಲು ಹೆಮ್ಮೆ ಅನಿಸುತ್ತದೆ. ಇದು ನಮಗೆ ಸಿಕ್ಕ ಸೌಭಾಗ್ಯ” ಎಂದು ಟ್ವಿಟರ್ನಲ್ಲಿ ಬಿಸಿಸಿಐ ಬರೆದುಕೊಂಡಿದೆ.
ಅಮಿತಾಬ್ ಸರ್ ಅವರು ಭಾರತೀಯ ಕ್ರಿಕೆಟ್ಗೆ ಹಲವು ಬಾರಿ ಬೆಂಬಲ ಸೂಚಿಸಿದ್ದಾರೆ. ವಿಶ್ವಕಪ್ ಸಂದರ್ಭದಲ್ಲಿಯೂ ತಂಡದ ಬೆಂಬಲಕ್ಕೆ ನಿಂತಿದ್ದಾರೆ. ಹಲವು ಜಾಹಿರಾತಿನಲ್ಲಿ ಅವರು ಯಾವುದೇ ಪಲಾಪೇಕ್ಷೆ ಇಲ್ಲದೆ ನಟಿಸಿ ಭಾರತ ತಂಡಕ್ಕೆ ಬೆಂಬಲಿಸಿದ್ದಾರೆ. ಹೀಗಾಗಿ ಅವರಿಗೆ ಗೋಲ್ಡನ್ ಟಿಕೆಟ್ ನೀಡಿ ಅವರನ್ನು ಆಹ್ವಾನಿಸಲಾಗಿದೆ ಎಂದು ಜಯ್ ಶಾ ಹೇಳಿದರು. ಗೋಲ್ಡನ್ ಟಿಕೆಟ್ ಪಡೆದ ಅಮಿತಾಬ್ ಬಚ್ಚನ್ ಅವರಿಗೆ ಯಾವುದೇ ಪಂದ್ಯಕ್ಕೂ ಹಾಜರಾಗಬಹುದು. ಅವರಿಗೆ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ.
ಇದನ್ನೂ ಓದಿ ICC World Cup: ಏಕದಿನ ವಿಶ್ವಕಪ್ಗೆ ಭಾರತ ತಂಡ ಪ್ರಕಟ; ತಂಡದಲ್ಲಿ ಏಕೈಕ ಕನ್ನಡಿಗ
ಶಾರುಖ್ ಖಾನ್ ಪ್ರಚಾರ ರಾಯಭಾರಿ
ಬಾಲಿವುಡ್ನ(Bollywood) ಸ್ಟಾರ್ ಹಾಗೂ ಹಿರಿಯ ನಟ ಶಾರುಖ್ ಖಾನ್(Shah Rukh Khan) ಅವರು ಏಕದಿನ ವಿಶ್ವಕಪ್ ಟೂರ್ನಿಯ ಪ್ರಚಾರ ಅಂಬಾಸಿಡರ್ ಆದ್ದಾರೆ. ಈಗಾಗಲೇ ಅವರ ಧ್ವನಿಯಲ್ಲಿ ಎಲ್ಲ 10 ಜೆರ್ಸಿ, ತಂಡಗಳ ಸೋಲು ಗೆಲುವು ಸಂಭ್ರಮದ ಕ್ಷಣ ಮತ್ತು ಅಭಿಮಾನಿಗಳ ಸಂಭ್ರಮಾಚರಣೆ, ಕುತೂಹಲ, ಕಪಿಲ್ದೇವ್ ಅವರು ಮೊದಲ ಬಾರಿ ವಿಶ್ವಕಪ್ ಎತ್ತಿ ಹಿಡಿದ ದೃಶ್ಯ, 2011ರ ವಿಶ್ವಕಪ್ನಲ್ಲಿ ಸಚಿನ್ ಬ್ಯಾಟಿಂಗ್ ನೋಟ, ಸಚಿನ್ ಅವರ ಅಭಿಮಾನಿ ಭಾರತದ ಧ್ವಜವನ್ನು ಬೀಸುತ್ತಾ ಸಚಿನ್ಗೆ ಚಿಯರ್ ಅಪ್ ಮಾಡುತ್ತಿರುವುದು, ವಿರಾಟ್ ಕೊಹ್ಲಿಯ ಫಿಲ್ಡಿಂಗ್ ಹೀಗೆ ಹಲವು ದೃಶ್ಯಗಳನ್ನು ಈ ವಿಡಿಯೊದಲ್ಲಿ ತೋರಿಸಲಾಗಿದೆ.
ಒಟ್ಟು 48 ಪಂದ್ಯಗಳು
ಒಟ್ಟು 48 ಪಂದ್ಯಗಳು ನಡೆಯಲಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ದೇಶದ ಪ್ರಮುಖ 10 ತಾಣಗಳಲ್ಲಿ ಈ ಪಂದ್ಯ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿವೆ. ಭಾರತ ತಂಡ ತನ್ನ ಮೊದಲ ಲೀಗ್ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಆಡಲಿದೆ. ಅಕ್ಟೋಬರ್ 14 ರಂದು ಭಾರತ ತನ್ನ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ ಈ ಪಂದ್ಯ ಕಣ್ತುಬಿಂಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.