Site icon Vistara News

IND vs PAK: ಕ್ರಿಕೆಟ್‌ ಪಂದ್ಯ ಗೆಲುವು; ದೇಶಾದ್ಯಂತ ಪಾಕ್‌ ವಿರುದ್ಧ ಯುದ್ಧ ಗೆದ್ದ ಸಂಭ್ರಮ!

Ind vs Pak Match Celebrations

ICC World Cup 2023: Celebrations Across India, Chant Bharat Mata Ki Jai

ಗಾಂಧಿನಗರ: ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್‌ ಪಂದ್ಯ (IND vs PAK) ಎಂದರೆ, ಅದು ಯಾವುದೇ ಯುದ್ಧದ ಸಂದರ್ಭ, ಕುತೂಹಲ, ನಿರೀಕ್ಷೆಗಳಿಗಿಂತ ಕಡಿಮೆ ಇರುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪಾಕಿಸ್ತಾನ ವಿರುದ್ಧ ಗುಜರಾತ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narednra Modi Stadium) ನಡೆದ ಪಂದ್ಯದಲ್ಲಿ ರೋಹಿತ್‌ ಶರ್ಮಾ ಬಳಗವು ಭರ್ಜರಿ ಗೆಲುವು (ICC World Cup 2023) ಸಾಧಿಸಿದೆ. ಹಾಗಾಗಿ, ದೇಶಾದ್ಯಂತ ಪಾಕಿಸ್ತಾನ ವಿರುದ್ಧ ಭಾರತ ಯುದ್ಧವನ್ನೇ ಗೆದ್ದಿದೆ ಎಂಬ ಸಂಭ್ರಮ ಮನೆಮಾಡಿದೆ. ಹಾಗಾದರೆ, ದೇಶಾದ್ಯಂತ ಹೇಗಿದೆ ಸಂಭ್ರಮ? ಇಲ್ಲಿವೆ ದೃಶ್ಯಗಳು.

ಹುಬ್ಬಳ್ಳಿಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ

ಕರ್ನಾಟಕದ ಹುಬ್ಬಳ್ಳಿ ನಗರದಲ್ಲಿ ಕೂಡ ವಿಶ್ವಕಪ್‌ ಗೆಲುವಿನ ಸಂಭ್ರಮ ಮುಗಿಲುಮುಟ್ಟಿದೆ. ಭಾರತ ತಂಡವು ಪಂದ್ಯ ಗೆದ್ದ ಖುಷಿಯಲ್ಲಿ ರಸ್ತೆ ಇಳಿದ ಜನರು ರಾಷ್ಟ್ರಧ್ವಜವನ್ನು ಬೀಸಿ, ಭಾರತ್‌ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗಿ ಸಂಭ್ರಮಾಚರಣೆ ಮಾಡಿದರು.

ಗುಜರಾತ್‌ನಲ್ಲಿ ಕುಣಿದು ಕುಪ್ಪಳಿಸಿದ ಅಭಿಮಾನಿಗಳು

ಗುಜರಾತ್‌ನಲ್ಲಿಯೇ ಪಾಕಿಸ್ತಾನ ವಿರುದ್ಧ ಪಂದ್ಯ ನಡೆದ ಕಾರಣ ರಾಜ್ಯದ ನಾಗರಿಕರು ಹೆಚ್ಚಿನ ಖುಷಿಯಲ್ಲಿ ತೇಲಾಡಿದರು. ವಂದೇ ಮಾತರಂ, ಭಾರತ್‌ ಮಾತಾ ಕೀ ಜೈ ಎಂಬುದು ಸೇರಿ ಹಲವು ಘೋಷಣೆ ಕೂಗಿ, ಸಿಹಿ ಹಂಚಿ ಖುಷಿಪಟ್ಟರು.

ಪಟಾಕಿ ಸಿಡಿಸಿದ ಪಟನಾ ಮಂದಿ

ಬಿಹಾರದ ಪಟನಾದಲ್ಲಂತೂ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ರಸ್ತೆಗಿಳಿದ ಸಾವಿರಾರು ಜನ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ರವೀಂದ್ರ ಜಡೇಜಾ ಸೇರಿ ಹಲವು ಕ್ರಿಕೆಟಿಗರ ಫೋಟೊ ಪ್ರದರ್ಶಿಸಿ ಗೆಲುವಿನ ಸಂತಸವನ್ನು ಇಮ್ಮಡಿ ಮಾಡಿಕೊಂಡರು.

ಜಮ್ಮುವಿನಲ್ಲಿ ಮುಗಿಲುಮುಟ್ಟಿದ ಸಂತಸ

ಜಮ್ಮುವಿನಲ್ಲಿ ತಡರಾತ್ರಿವರೆಗೂ ಜನ ಸಂಭ್ರಮಾಚರಣೆ ಮಾಡಿದರು. ತಿರಂಗಾ ಹಾರಿಸಿ, ಘೋಷಣೆ ಕೂಗಿ ಪಾಕಿಸ್ತಾನ ವಿರುದ್ಧದ ಗೆಲುವನ್ನು ಹಬ್ಬದಂತೆ ಆಚರಿಸಿದರು.

ಇದನ್ನೂ ಓದಿ: IND vs PAK: ಡೆಂಗ್ಯೂಗೆ ಸಡ್ಡು ಹೊಡೆದು ಪಾಕ್​ ವಿರುದ್ಧ ಆಡಲಿಳಿದ ಶುಭಮನ್​ ಗಿಲ್​

ನಾಗ್ಪುರದಲ್ಲಿ ಜೈಕಾರ

ಮಹಾರಾಷ್ಟ್ರದ ನಾಗ್ಪುರದಲ್ಲಿ ರೋಹಿತ್‌ ಶರ್ಮಾ ಬಳಗಕ್ಕೆ ಜನ ಶುಭಾಶಯ ತಿಳಿಸಿದರು. ಇಲ್ಲೂ ಕೂಡ ರಸ್ತೆ ತುಂಬ ಜನ ಸೇರಿ ತಿರಂಗಾ ಬೀಸಿದರು.

Exit mobile version