ಮುಂಬಯಿ: ಪಾಕಿಸ್ತಾನ ಆಟಗಾರರ ಜತೆ ಮಾತನಾಡಿದ್ದಕ್ಕೆ ಬಹಿರಂಗವಾಗಿಯೇ ಭಾರತೀಯ ಆಟಗಾರರ ಮೇಲೆ ಕಿಡಿ ಕಾರಿ ದೇಶ ಪ್ರೇಮದ ಪಾಠ ಮಾಡಿದ್ದ ಗೌತಮ್ ಗಂಭೀರ್(Gautam Gambhir), ತಾನು ಮಾತ್ರ ಪಾಕ್ ಆಟಗಾರರಿಗೆ ಬೆಂಬಲ ಸೂಚಿಸುತ್ತಿರುವುದು ಭಾರತೀಯರ ಬೇಸರ ತಂದಿದೆ. ಜತೆಗೆ ಗಂಭೀರ್ ನಡೆಗೆ ಹಲವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಗಳ ಹಿಂದೆ ಈ ಬಾರಿಯ ವಿಶ್ವಕಪ್ನಲ್ಲಿ(ICC World Cup 2023) ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಶ್ರೇಷ್ಠ ಮಟ್ಟದ ಬ್ಯಾಟಿಂಗ್ ನಡೆಸಲಿದ್ದಾರೆ ಎಂದಿದ್ದ ಗಂಭೀರ್, ಇದೀಗ ಬಾಬರ್ ಕನಿಷ್ಠ 4 ಶತಕ ಮತ್ತು ಟೂರ್ನಿಯಲ್ಲಿ ಅತ್ಯಧಿಕ ಮೊತ್ತ ಪೇರಿಸಿದ ಆಟಗಾರನಾಗಿ ಹೊರಹೊಮ್ಮಲಿದ್ದಾರೆ ಎಂದಿದ್ದಾರೆ. ಒಬ್ಬ ಭಾರತೀಯನಾಗಿ ಭಾರತ ತಂಡದ ಆಟಗಾರರನ್ನು ಕಡೆಗಣಿಸಿದ್ದಾರೆ.
ದೇಶ ವಿರೋಧಿ
ಏಷ್ಯಾ ಕಪ್ನಲ್ಲಿ ವಿರಾಟ್ ಕೊಹ್ಲಿ ಸೇರಿ ಕೆಲ ಭಾರತೀಯ ಆಟಗಾರರು ಪಾಕಿಸ್ತಾನ ಆಟಗಾರರ ಜತೆ ಮಾತನಾಡಿದ ವಿಚಾರವಾಗಿ ಗಂಭೀರ್ ಕಿಡಿ ಕಾರಿದ್ದರು. ಬದ್ಧ ಎದುರಾಳಿ ಪಾಕ್ ಆಟಗಾರರಲ್ಲಿ ಮಾತನಾಡುವುದು ಸರಿಯಲ್ಲ. ಇದೇನಿದ್ದರು ಮೈದಾನದ ಹೊರಗಡೆ ಇರಲಿ ಎಂದು ದೇಶ ಪ್ರೇಮದ ಪಾಠ ಮಾಡಿದ್ದ ಗಂಭೀರ್ ತಾನು ಮಾತ್ರ ಪಾಕ್ ಆಟಗಾರರನ್ನು ಒಲೈಕೆ ಮಾಡುತ್ತಿದ್ದಾರೆ. ಈ ಕ್ರಮವನ್ನು ನೆಟ್ಟಿಗರು ಪ್ರಶ್ನಿಸಿದ್ದು ಗಂಭೀರ್ ಅವರದ್ದು ನರಿ ಬುದ್ಧಿ ಎಂದಿದ್ದಾರೆ. ಇನ್ನು ಕೆಲವರು ದೇಶ ವಿರೋಧಿ ಎಂದಿದ್ದಾರೆ.
2007ರ ಟಿ20 ವಿಶ್ವಕಪ್ ಫೈನಲ್ ಮತ್ತು 2011 ಏಕದಿನ ವಿಶ್ವಕಪ್ ಫೈನಲ್ನಲ್ಲಿ ಅಮೋಘ ಪ್ರದರ್ಶನ ತೋರಿದ ಗಂಭೀರ್ ಭಾರತ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ಪದೇಪದೆ ಭಾರತೀಯ ಆಟಗಾರ ಮತ್ತು ತಂಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುತ್ತಾ ತಮ್ಮ ವರ್ಚಸ್ಸನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ ICC World Cup 2023 : ಭಾರತದ ಮಾಜಿ ಆಟಗಾರ ಅಫಘಾನಿಸ್ತಾನ ತಂಡದ ಮೆಂಟರ್
ಭಾರತ ಕಪ್ ಗೆಲ್ಲಲ್ಲ
ವಿಶ್ವಕಪ್ ವಿಚಾರದಲ್ಲಿಯೂ ಗಂಭೀರ್ ಈ ಬಾರಿ ಭಾರತ ಕಪ್ ಗೆಲ್ಲುವುದಿಲ್ಲ ಎಂದಿದ್ದರು. “ಈ ಬಾರಿ ಆಸ್ಟ್ರೇಲಿಯಾ ಆರನೇ ಬಾರಿ ವಿಶ್ವಕಪ್ ಗೆಲ್ಲಲಿದೆ. ಈ ತಂಡದಲ್ಲಿ ಉತ್ತಮ ಆಲ್ರೌಂಡರ್, ಅದ್ಭುತ ವೇಗಿಗಳು ಕಾಣಿಸಿಕೊಂಡಿದ್ದಾರೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಕೂಡ ಕಪ್ ಗೆಲ್ಲುವುದು ಕಷ್ಟ ಆದರೆ ಫೈನಲ್ ಪ್ರವೇಶಿಸಬಹುದು. ಭಾರತ ಮಾತ್ರ ಸೆಮಿಫೈನಲ್ ಹಂತಕ್ಕೇರಿದರೆ ದೊಡ್ಡ ಸಾಧನೆ. ಒಂದೆರಡು ಆಟಗಾರರನ್ನು ಬಿಟ್ಟರೆ ಇನಿಂಗ್ಸ್ ಕಟ್ಟಬಲ್ಲ ಆಟಗಾರರು ವಿಶ್ವಕಪ್ ತಂಡದಲ್ಲಿಲ್ಲ. ಹೀಗಾಗಿ ಭಾರತ ಈ ಬಾರಿ ಕಪ್ ಗೆಲ್ಲುವುದು ಅಸಾಧ್ಯ” ಎಂದು ಹೇಳಿದ್ದರು.
ಭಾರತ-ಪಾಕ್ ಪಂದ್ಯ
ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಿಂದ ಆರಂಭಗೊಂಡು ನವೆಂಬರ್ 19ರ ತನಕ ನಡೆಯಲಿದೆ. ರೌಂಡ್ ರಾಬೀನ್ ಮಾದರಿಯಲ್ಲಿ ಪಂದ್ಯಗಳನ್ನು ಆಡಿಸಲಾಗಿತ್ತದೆ. ಒಟ್ಟು 48 ಪಂದ್ಯಗಳು ನಡೆಯಲಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ದೇಶದ ಪ್ರಮುಖ 10 ತಾಣಗಳಲ್ಲಿ ಈ ಪಂದ್ಯ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿವೆ. ಭಾರತ ತಂಡ ತನ್ನ ಮೊದಲ ಲೀಗ್ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಆಡಲಿದೆ. ಅಕ್ಟೋಬರ್ 14 ರಂದು ಭಾರತ ತನ್ನ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ ಈ ಪಂದ್ಯ ಕಣ್ತುಬಿಂಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.