ಧರ್ಮಶಾಲಾ: ಹಾಲಿ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ(ICC World Cup 2023) ಆತಿಥೇಯ ಭಾರತ(team india) ಆಡಿದ 5 ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿ ಅಜೇಯ ಓಟ ಕಾಯ್ದುಕೊಂಡಿದೆ. ಸದ್ಯ 10 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿದೆ. ಆದರೂ ಭಾರತ ಸೆಮಿಫೈನಲ್ ಟಿಕೆಟ್ ಖಚಿತಗೊಂಡಿಲ್ಲ. ಸೆಮಿ ಟಿಕೆಟ್ ಪಡೆಯಬೇಕಾದರೆ ಇನ್ನೆಷ್ಟು ಪಂದ್ಯ ಗೆಲ್ಲಬೇಕು ಎಂಬ ಲೆಕ್ಕಾಚಾರದ ಮಾಹಿತಿ ಇಂತಿದೆ.
ಸದ್ಯ ಅಂಕಪಟ್ಟಿಯಲ್ಲಿ ಭಾರತ ನಂ.1 ಸ್ಥಾನದಲ್ಲಿದ್ದರೆ ನ್ಯೂಜಿಲ್ಯಾಂಡ್(8 ಅಂಕ) ದ್ವಿತೀಯ ಸ್ಥಾನ, ದಕ್ಷಿಣ ಆಫ್ರಿಕಾ(6 ಅಂಕ) ಮೂರನೇ ಸ್ಥಾನ, ಆಸ್ಟ್ರೇಲಿಯಾ(4 ಅಂಕ) ನಾಲ್ಕನೇ ಸ್ಥಾನದಲ್ಲಿದೆ. ಇದರಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಲಾ 5 ಪಂದ್ಯಗಳನ್ನು ಆಡಿದೆ ಇನ್ನು 4 ಪಂದ್ಯಗಳು ಬಾಕಿ ಉಳಿದಿವೆ. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಲಾ 4 ಪಂದ್ಯಗಳನ್ನು ಆಡಿದೆ. ಆದರೆ ಆಸೀಸ್ ಇದರಲ್ಲಿ ಎರಡು ಸೋಲು ಕಂಡಿದೆ. 5ನೇ ಸ್ಥಾಬದಲ್ಲಿ ಪಾಕಿಸ್ತಾನ ತಂಡ ಕಾಣಿಸಿಕೊಂಡಿದೆ.
ಇದನ್ನೂ ಓದಿ Virat Kohli: ರನ್ ಗಳಿಕೆಯಲ್ಲೂ ದಾಖಲೆ ಬರೆದ ವಿರಾಟ್ ಕೊಹ್ಲಿ
ಒಂದು ಗೆಲುವು ಅಗತ್ಯ
ಸೆಮಿಫೈನಲ್ ಪ್ರವೇಶ ಪಡೆಯಬೇಕಾದರೆ ಕನಿಷ್ಠ 6 ಗೆಲುವು ಅಗತ್ಯ. ಈ ಲೆಕ್ಕಾಚಾರದಲ್ಲಿ ಭಾರತ ಇನ್ನೊಂದು ಪಂದ್ಯ ಗೆಲ್ಲಬೇಕು. 2 ಪಂದ್ಯ ಗೆದ್ದರೆ ಭಾರತಕ್ಕೆ ಯಾವುದೇ ಚಿಂತೆ ಇರುವುದಿಲ್ಲ. ನ್ಯೂಜಿಲ್ಯಾಂಡ್ 2 ಪಂದ್ಯ ಗೆದ್ದರೆ ಅದು ಕೂಡ ಸೆಮಿಫೈನಲ್ ಪ್ರವೇಶ ಪಡೆಯಲಿದೆ. ಈಗಾಗಲೇ ಬಹುತೇಕ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಸೆಮಿಫೈನಲ್ಗೇರುವುದು ಖಚಿತವಾಗಿದೆ. ಸದ್ಯ ಸೆಮಿ ರೇಸ್ನಲ್ಲಿ ಪೈಪೋಟಿ ಇರುವುದು ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವೆ. ಸದ್ಯ ಮೂರನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಉತ್ತಮ ರನ್ ರೇಟ್ ಹೊಂದಿದೆ. ಈ ತಂಡಕ್ಕೆ ಇನ್ನು ಮೂರು ಗೆಲುವು ಅಗತ್ಯವಾಗಿದೆ.
ಇದನ್ನೂ ಓದಿ IND vs NZ: 2 ಕ್ಯಾಚ್ ಹಿಡಿದು ದಾಖಲೆ ಬರೆದ ಕಿಂಗ್ ಕೊಹ್ಲಿ; ದಿಗ್ಗಜ ಆಟಗಾರನ ದಾಖಲೆ ಉಡೀಸ್
ಮಳೆ ಬಂದರೆ ಏನು ಗತಿ
ಸೆಮಿಫೈನಲ್ ಬಾಗಿಲಿಗೆ ಬಂದು ನಿಂತಿರುವ ತಂಡಗಳಿಗೆ ತಮ್ಮ ಮುಂದಿನ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದರೆ ಆಗ ಎಲ್ಲ ಲೆಕ್ಕಾಚಾರ ತಲೆಕೆಳಗಾಗುತ್ತದೆ. ಏಕೆಂದರೆ ಒಂದೊಂದು ಅಂಕ ಸಿಕ್ಕಿ ಅಂತಿಮವಾಗಿ ರನ್ ರೇಟ್ ಆಧಾರದಲ್ಲಿ ಕೆಲ ತಂಡ ಇದರ ಲಾಭವೆತ್ತಿ ಸೆಮಿಫೈನಲ್ ಪ್ರವೇಶ ಪಡೆಯಲೂಬಹುದು. 2019ರ ವಿಶ್ವಕಪ್ನಲ್ಲಿ ಕಿವೀಸ್ ಮತ್ತು ಪಾಕಿಸ್ತಾನ ತಲಾ ಐದು ಗೆಲುವು ಸಾಧಿಸಿ 11 ಅಂಕ ಪಡೆದಿತ್ತು. ಇತ್ತಂಡಗಳ ಒಂದು ಪಂದ್ಯ ಮಳೆಯಿಂದ ರದ್ದುಗೊಂಡು ತಲಾ ಒಂದು ಅಂಕ ಸಿಕ್ಕ ಕಾರಣ 11 ಅಂಕ ಗಳಿಸಿತ್ತು. ಆದರೆ ನಿವ್ವಳ ರನ್ ರೇಟ್ (NRR) ಆಧಾರದಲ್ಲಿ ಹಿಂದಿದ್ದ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿತು. ಸೆಮಿಫೈನಲ್ ಪ್ರವೇಶಿಸಿದ ನ್ಯೂಜಿಲ್ಯಾಂಡ್ ತಂಡ ಭಾರತವನ್ನು ಮಣಿಸಿ ಫೈನಲ್ ಪ್ರವೇಶ ಪಡೆಯಿತು. ಹೀಗಾಗಿ ಮಳೆಯು ಕೂಡ ಪ್ರಮುಖ ಪಾತ್ರವಹಿಸುತ್ತದೆ.
ವಿಶ್ವಕಪ್ ಅಂಕಪಟ್ಟಿ
ತಂಡ | ಪಂದ್ಯ | ಗೆಲುವು | ಸೋಲು | ಅಂಕ | ನೆಟ್ ರನ್ರೇಟ್ |
ಭಾರತ | 5 | 5 | 0 | 10 | 1.353 |
ನ್ಯೂಜಿಲ್ಯಾಂಡ್ | 5 | 4 | 1 | 8 | 1.481 |
ದಕ್ಷಿಣ ಆಫ್ರಿಕಾ | 4 | 3 | 1 | 6 | 2.212 |
ಆಸ್ಟ್ರೇಲಿಯಾ | 4 | 2 | 2 | 4 | -0.193 |
ಪಾಕಿಸ್ತಾನ | 4 | 2 | 2 | 4 | -0.456 |
ಬಾಂಗ್ಲಾದೇಶ | 4 | 1 | 3 | 2 | -0.784 |
ನೆದರ್ಲ್ಯಾಂಡ್ಸ್ | 4 | 1 | 3 | 2 | -0.790 |
ಶ್ರೀಲಂಕಾ | 4 | 1 | 3 | 2 | -1.048 |
ಇಂಗ್ಲೆಂಡ್ | 4 | 1 | 3 | 2 | -1.248 |
ಅಫಘಾನಿಸ್ತಾನ | 4 | 1 | 3 | 2 | -1.250 |