Site icon Vistara News

ICC World Cup 2023: ಐಸಿಸಿ ಏಕದಿನ ವಿಶ್ವಕಪ್‌ ಲೋಗೋ ಅನಾವರಣ

ICC World Cup 2023: ICC ODI World Cup Logo Unveiled

ICC World Cup 2023: ICC ODI World Cup Logo Unveiled

ದುಬೈ: ಭಾರತದ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್‌ ಟೂರ್ನಿಯ(ICC World Cup 2023) ಲೋಗೋವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಬಿಡುಗಡೆಗೊಳಿಸಿದೆ. ಈ ಲೋಗೋ ‘ನವರಸ’ದಿಂದ ಕೂಡಿದ್ದು, ಅಭಿಮಾನಿಗಳು ವಿಶ್ವಕಪ್‌ ಪಂದ್ಯಗಳ ವೇಳೆ ಎಲ್ಲ 9 ರೀತಿಯ ಭಾವನೆಗಳನ್ನು ಅನುಭವಿಸಲಿದ್ದಾರೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಸಂತೋಷ, ಶಕ್ತಿ, ದುಖಃ, ಗೌರವ, ಹೆಮ್ಮೆ, ಶೌರ್ಯ, ವೈಭವ, ವಿಸ್ಮಯ, ಮತ್ತು ಉತ್ಸಾಹವನ್ನು ಪ್ರತಿಬಿಂಬಿಸುವ ಬಣ್ಣಗಳೊಂದಿಗೆ ಈ ಲಾಂಛನವನ್ನು ಸಿದ್ಧಪಡಿಸಲಾಗಿದೆ. 10 ತಂಡಗಳ ಟೂರ್ನಿಗೆ ಈಗಾಗಲೇ 7 ತಂಡಗಳು ಅರ್ಹತೆ ಪಡೆದಿದೆ. ಸೂಪರ್‌ ಲೀಗ್‌ ಮುಕ್ತಾಯದ ಬಳಿಕ ಇನ್ನೊಂದು ತಂಡಕ್ಕೆ ನೇರ ಅರ್ಹತೆ ಸಿಗಲಿದೆ.

ಮುಂಬರುವ ಅಕ್ಟೋಬರ್ ತಿಂಗಳಿನಿಂದ ನವೆಂಬರ್ ತಿಂಗಳಿನವರೆಗೆ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಈಗಾಗಲೇ ನ್ಯೂಜಿಲ್ಯಾಂಡ್​, ಇಂಗ್ಲೆಂಡ್‌, ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಆಸ್ಟ್ರೇಲಿಯಾ ಹಾಗೂ ಅಫಘಾನಿಸ್ತಾನ ತಂಡಗಳು ನೇರ ಅರ್ಹತೆ ಪಡೆದಿದೆ.

2011ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆದಿತ್ತು. ಆದರೆ ಇದು ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೇರಿ ಜಂಟಿಯಾಗಿ ಆತಿಥ್ಯ ವಹಿಸಿಕೊಂಡಿತ್ತು. ಇದೀಗ 2023ರ ವಿಶ್ವ ಕಪ್​ ಸಂಪೂರ್ಣವಾಗಿ ಭಾರತದದ ಆತಿಥ್ಯದಲ್ಲಿ ನಡೆಯುತ್ತಿದೆ.

ಇದನ್ನೂ ಓದಿ ICC World Cup 2023: ಬಾಂಗ್ಲಾದಲ್ಲಿ ವಿಶ್ವಕಪ್‌ ಪಂದ್ಯ ಸುಳ್ಳು: ಪಿಸಿಬಿಯಿಂದ ಸ್ಪಷ್ಟನೆ

ವರದಿಗಳ ಪ್ರಕಾರ, ಅಕ್ಟೋಬರ್​ 5ರಂದು ವಿಶ್ವಕಪ್​ ಆರಂಭವಾಗಲಿದ್ದು, ನವೆಂಬರ್​ 19ಕ್ಕೆ ಅಹಮದಾಬಾದ್​ನಲ್ಲಿ(Ahmedabad) ಫೈನಲ್​ ನಡೆಯಲಿದೆ. ಬಿಸಿಸಿಐ ಈ ಪ್ರತಿಷ್ಠಿತ ಟೂರ್ನಿಗಾಗಿ ಕನಿಷ್ಠ 10ಕ್ಕೂ ಹೆಚ್ಚು ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕೊತಾ, ಲಕ್ನೋ, ಇಂದೋರ್, ರಾಜ್‌ಕೋಟ್ ಮತ್ತು ಮುಂಬೈ ಈ ಪಟ್ಟಿಯಲ್ಲಿ ಸೇರಿವೆ ಎನ್ನಲಾಗಿದೆ.

48 ಪಂದ್ಯಗಳು

ಒಟ್ಟು ಹತ್ತು ತಂಡಗಳನ್ನು ಎರಡು ಗುಂಪುಗಳಾಗಿ ಆಡಿಸಲಾಗುತ್ತದೆ. ಹೀಗಾಗಿ 46 ದಿನಗಳಲ್ಲಿ 48 ಪಂದ್ಯಗಳು ನಡೆಯಲಿವೆ. ಫೈನಲ್‌ನ ಹೊರತಾಗಿ ಬಿಸಿಸಿಐ ಇನ್ನೂ ಯಾವುದೇ ಪಂದ್ಯಗಳಿಗೆ ನಿರ್ದಿಷ್ಟ ಸ್ಥಳ ಅಥವಾ ತಂಡಗಳು ಅಭ್ಯಾಸ ಮಾಡುವ ನಗರಗಳನ್ನು ಅಂತಿಮಗೊಳಿಸಿಲ್ಲ. ಅಲ್ಲದೇ ಅಕ್ಟೋಬರ್-ನವೆಂಬರ್​ನಲ್ಲಿ ಕೆಲ ಪ್ರದೇಶಗಳಲ್ಲಿ ಹಿಂಗಾರು ಮಳೆ ಸಾಧ್ಯತೆ ಇರುವುದರಿಂದ ಇದರ ಬಗ್ಗೆಯೂ ಚಿಂತಿಸಿ ಬಿಸಿಸಿಐ ಅಂತಿಮ ನಿರ್ಧಾರವನ್ನು ಶಿಘ್ರದಲ್ಲೇ ಪ್ರಕಟಿಸಲಿದೆ ಎಂದು ಕ್ರಿಕ್​ಇನ್ಫೋ ವರದಿ ಮಾಡಿದೆ.

Exit mobile version