ಮುಂಬಯಿ: ಏಕದಿನ ವಿಶ್ವ ಕಪ್ನ(ICC World Cup 2023) ವೇಳಾಪಟ್ಟಿ ಪ್ರಕಟಗೊಂಡಿದ್ದೇ ತಡ ಎಲ್ಲ ತಂಡಗಳು ಈ ಟೂರ್ನಿಗಾಗಿ ಬಲಿಷ್ಠ ತಂಡಗಳನ್ನು ರೂಪಿಸಲು ಮುಂದಾಗಿದೆ. ಇದೀಗ ಭಾರತವೂ(Team Inida) ಕೂಡ ಯಾವ ಆಟಗಾರರನ್ನು ಯಾವ ಬ್ಯಾಟಿಂಗ್ ಸರದಿಯಲ್ಲಿ ಆಡಿಸಬೇಕು ಎಂದು ಯೋಚಿಸಲು ಆರಂಭಿಸಿದೆ. ಇದಕ್ಕೆ 1983 ವಿಶ್ವ ಕಪ್ ವಿಜೇತ ತಂಡದ ಆಟಗಾರ ಹಾಗೂ ಭಾರತ ತಂಡದ ಮಾಜಿ ಕೋಚ್ ಆಗಿರುವ ರವಿಶಾಸ್ತ್ರಿ(Ravi Shastri) ಸೂಕ್ತ ಸಲಹೆಯೊಂದನ್ನು ನೀಡಿದ್ದಾರೆ. ಅವರ ಈ ಸಲಹೆಯಂತೆ ರೋಹಿತ್ ಶರ್ಮ(rohit sharma) ಮತ್ತು ಶುಭಮನ್ ಗಿಲ್(shubman gill) ಅವರು ಭಾರತ ಇನಿಂಗ್ಸ್ ಆರಂಭಿಸಲು ಸಾಧ್ಯವಿಲ್ಲ.
2011ರ ವಿಶ್ವ ಕಪ್ನಲ್ಲಿ ಭಾರತ ತಂಡದಲ್ಲಿ ಮೂವರು ಎಡಗೈ ಆಟಗಾರರು ಇದ್ದರು. ಇದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿ ಪರಿಣಮಿಸಿತ್ತು. ಒಂದು ತುದಿಯಲ್ಲಿ ಎಡಗೈ ಮತ್ತು ಮತ್ತೊಂದು ತುದಿಯಲ್ಲಿ ಬಲೈ ಬ್ಯಾಟರ್ ಇದ್ದರೆ ಆಗ ಬೌಲಿಂಗ್ ಸಂಯೋಜನೆ ನಡೆಸುವುದು ಅಷ್ಟು ಸುಲಭವಲ್ಲ. ಬೌಲರ್ ಒಬ್ಬ ಆಗ ಒತ್ತಡಕ್ಕೆ ಸಿಲುಕಿ ಆತ ಲೆಂತ್ ಮತ್ತು ಲೈನ್ನಲ್ಲಿ ಎಡವುತ್ತಾನೆ. ಒಂದೇ ರೀತಿಯ ಬ್ಯಾಟಿಂಗ್ ಶೈಲಿ ಇದ್ದರೆ ಆಗ ಬೌಲರ್ ಯಾವುದೇ ಚಿಂತೆಗೀಡಾಗದೆ ಒಂದೆ ಲೆಂತ್ನಲ್ಲಿ ಬೌಲಿಂಗ್ ದಾಳಿ ಮಾಡುತ್ತಾನೆ. ಹೀಗಾಗಿ ಆರಂಭಿಕರಾಗಿ ಎಡ ಮತ್ತು ಬಲಗೈ ಆಟಗಾರರು ಭಾರತದ ಇನಿಂಗ್ಸ್ ಆರಂಭಿಸಬೇಕು ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ ICC World Cup 2023: 9 ಪಂದ್ಯಗಳಿಗಾಗಿ 8,400 ಕಿ.ಮೀ. ಸಂಚಾರ ಮಾಡಲಿದೆ ಭಾರತ ತಂಡ
ರವಿಶಾಸ್ತ್ರಿ ಹೇಳಿದ ಪ್ರಕಾರ ನೋಡುವುದಾದರೆ ಶಿಖರ್ ಧವನ್ ಮತ್ತು ರೋಹಿತ್ ಅವರು ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಸದ್ಯ ವಿಶ್ವ ಕಪ್ ವೇಳೆ ಎಷ್ಟು ಆಟಗಾರರು ಆಯ್ಕೆಗೆ ಲಭ್ಯ ಇರುತ್ತಾರೆ ಎಂಬುವುದು ಕೂಡ ಇಲ್ಲಿ ಮುಖ್ಯವಾಗಿದೆ. ಏಕೆಂದರೆ ಅತಿಯಾದ ಕ್ರಿಕೆಟ್ನಿಂದ ಅನೇಕ ಕ್ರಿಕೆಟಿಗರು ಈಗಾಗಲೇ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ನಿರ್ದಿಷ್ಟ ಆಟಗಾರರನ್ನು ಸೂಚಿಸುವುದು ಕೂಡ ಇಲ್ಲಿ ಯೋಚಿಸಬೇಕಾದ ಸಂಗತಿ.
8,400 ಕಿ.ಮೀ. ಸಂಚಾರ ಮಾಡಲಿದೆ ಭಾರತ ತಂಡ
ಭಾರತ ತನ್ನ 9 ಲೀಗ್ ಪಂದ್ಯಗಳಿಗೋಸ್ಕರ 34 ದಿನಗಳ ಅವಧಿಯಲ್ಲಿ ಗರಿಷ್ಠ 8,400 ಕಿ.ಮೀ.ಗಳಷ್ಟು ಸಂಚಾರ ಮಾಡಬೇಕಾಗಿದೆ. ಟೂರ್ನಿಯ ಆತಿಥೇಯ ತಂಡವಾದ ಕಾರಣ ದೇಶದ ಪ್ರಮುಖ 9 ನಗರಗಲ್ಲಿ ನಡೆಯುವ ಪಂದ್ಯಗಳಲ್ಲಿ ಭಾರತ ಆಡಲಿದೆ. ಈ ವೇಳೆ ಭಾರತ ತನ್ನ ಲೀಗ್ ಹಂತದ ಪಂದ್ಯಗಳಿಗೆ 8,400 ಕಿ.ಮೀ.ಗಳಷ್ಟು ಸಂಚಾರ ಮಾಡಬೇಕಿದೆ. ಒಂದೊಮ್ಮೆ ಭಾರತ ತಂಡ ಸೆಮಿಫೈನಲ್ ಅಥವಾ ಫೈನಲ್ ತಲುಪಿದರೆ ಆಗ ಸುಮಾರು 9,700 ಕಿ.ಮೀ. ಪ್ರಯಾಣ ಮಾಡಬೇಕಾಗುತ್ತದೆ. ವೇಳಾಪಟ್ಟಿ ಪ್ರಕಾರ ಭಾರತ ಅತೀ ಹೆಚ್ಚು 9 ನಗರಗಳಲ್ಲಿ ಲೀಗ್ ಪಂದ್ಯಗಳನ್ನು ಆಡಲಿರುವ ಏಕೈಕ ತಂಡವಾಗಿದೆ.
ಉಳಿದ ತಂಡಗಳು ಒಂದು ತಾಣದಲ್ಲಿ ಗರಿಷ್ಠ 2 ಪಂದ್ಯಗಳನ್ನು ಆಡಲಿವೆ. ಭದ್ರತಾ ಕಾರಣಗಳಿಂದ ಪಾಕಿಸ್ತಾನ(world cup 2023 news Pakistan) ಕೇವಲ 5 ನಗರಗಳಲ್ಲಷ್ಟೇ ಲೀಗ್ ಪಂದ್ಯಗಳನ್ನು ಆಡುತ್ತದೆ. ಅಂದರೆ ಪಾಕ್ 6,849 ಕಿ.ಮೀ. ದೂರ ಸಂಚಾರ ಮಾಡಲಿದೆ. ಒಟ್ಟಾರೆಯಾಗಿ ಭಾರತಕ್ಕೆ ಪಂದ್ಯ ಆಡುವುದಕ್ಕಿಂತ ಪ್ರಯಾಣದ್ದೇ ಹೆಚ್ಚಿನ ಚಿಂತೆಯಾಗಿದೆ.
ಅಕ್ಟೋಬರ್ 5 ರಿಂದ ಆರಂಭಗೊಂಡು ನವೆಂಬರ್ 19 ತನಕ ಈ ವಿಶ್ವ ಕಪ್ ಟೂರ್ನಿ ನಡೆಯಲಿದೆ. ಒಟ್ಟು 48 ಪಂದ್ಯಗಳು ನಡೆಯಲಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ದೇಶದ ಪ್ರಮುಖ 10 ತಾಣಗಳಲ್ಲಿ ಈ ಪಂದ್ಯ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿವೆ.