Site icon Vistara News

ICC World Cup 2023: ಕೇರಳದಲ್ಲಿ ಮೊದಲ ಬಾರಿಗೆ ನಡೆಯಲಿದೆ ವಿಶ್ವ ಕಪ್​ ಪಂದ್ಯ; ಎಷ್ಟು ಪಂದ್ಯಗಳಿಗೆ ಆತಿಥ್ಯ?

World Cup

ತಿರುವನಂತಪುರಂ: ಭಾರತದ ಆತಿಥ್ಯದಲ್ಲಿ ವರ್ಷಾಂತ್ಯದಲ್ಲಿ ನಡೆಯಲಿರುವ ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವ ಕಪ್​ ಟೂರ್ನಿಯ(ICC World Cup 2023) ವೇಳಾಪಟ್ಟಿ ಇನ್ನೇನು ಕೆಲವೇ ದಿನಗಳಲ್ಲಿ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಆದರೆ ವೇಳಾಪಟ್ಟಿ ಪ್ರಕಟಕ್ಕೂ ಮುನ್ನವೇ ಕೇರಳದ ಕ್ರಿಕೆಟ್‌ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಲಭಿಸಿದೆ.

ಅಕ್ಟೋಬರ್​ ಮತ್ತು ನವೆಂಬರ್​ನಲ್ಲಿ ನಡೆಯಯಲಿರುವ ಏಕದಿನ ವಿಶ್ವ ಕಪ್​ನ ಪಂದ್ಯಗಳು ತಿರುವನಂತಪುರಂನ(Thiruvananthapuram) ಗ್ರೀನ್‌ ಫೀಲ್ಡ್‌ ಸ್ಟೇಡಿಯಂನಲ್ಲಿ(Greenfield Stadium) ನಡೆಯಲಿದೆ ಎಂದು ವರದಿಯಾಗಿದೆ. ಒಟ್ಟು ಮೂರು ಪಂದ್ಯಗಳು ಇಲ್ಲಿ ನಡೆಯುವ ಸಾಧ್ಯತೆ ಇದೆ. ಆದರೆ ಇವರಿಗೆ ಭಾರತದ ಪಂದ್ಯಗಳು ಕಣ್ತುಂಬಿಕೊಳ್ಳುವ ಭಾಗ್ಯ ಸಿಗುವುದು ಅನುಮಾನ. ಇಲ್ಲಿ ಶ್ರೀಲಂಕಾ ಸೇರಿ ಇತರ ದೇಶಗಳ ನಡುವಿನ ಪಂದ್ಯಗಳು ನಡೆಯಲಿದೆ ಎಂದು ವರದಿಯಾಗಿದೆ.

ಕೇರಳಕ್ಕೆ ಲಭಿಸಿದ ಮೊದಲ ವಿಶ್ವ ಕಪ್​ ಪಂದ್ಯಗಳ ಆತಿಥ್ಯ ಇದಾಗಲಿದೆ. ಇದುವರೆಗೆ ಭಾರತದಲ್ಲಿ ಮೂರು ಏಕದಿನ ವಿಶ್ವಕಪ್ ಟೂರ್ನಿಗಳು ನಡೆದಿದ್ದವು. 1987, 1996 ಮತ್ತು 2011ರಲ್ಲಿ ಪಂದ್ಯಗಳನ್ನು ಆಡಲಾಗಿತ್ತು. ಆದರೆ ಒಮ್ಮೆಯೂ ಕೆರಳಕ್ಕೆ ವಿಶ್ವಕಪ್‌ ಪಂದ್ಯವನ್ನು ಆಯೋಜಿಸುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಚೊಚ್ಚಲ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಜಯೇಶ್‌ ಜಾರ್ಜ್‌, ನಾವು ಬಿಸಿಸಿಐಗೆ ಮನವಿ ಮಾಡಿದ್ದೇವೆ. ಕೆಲವು ಪಂದ್ಯಗಳು ನಮಗೆ ಸಿಗುವ ನಂಬಿಕೆಯೂ ಇದೆ. ಆದರೆ ಬಿಸಿಸಿಐನಿಂದ(BCCI) ಇನ್ನೂ ನಮಗೆ ಅಧಿಕೃತ ಒಪ್ಪಿಗೆ ಸಿಗಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ Team India Cricket Schedule 2023: ಟೀಮ್​ ಇಂಡಿಯಾ​ ಕ್ರಿಕೆಟ್​ ಸರಣಿಯ ಸಂಪೂರ್ಣ ವೇಳಾಪಟ್ಟಿ

48 ಪಂದ್ಯಗಳು

ಒಟ್ಟು ಹತ್ತು ತಂಡಗಳನ್ನು ಎರಡು ಗುಂಪುಗಳಾಗಿ ಆಡಿಸಲಾಗುತ್ತದೆ. ಹೀಗಾಗಿ 46 ದಿನಗಳಲ್ಲಿ 48 ಪಂದ್ಯಗಳು ನಡೆಯಲಿವೆ. ಅಕ್ಟೋಬರ್-ನವೆಂಬರ್​ನಲ್ಲಿ ಕೆಲ ಪ್ರದೇಶಗಳಲ್ಲಿ ಹಿಂಗಾರು ಮಳೆ ಸಾಧ್ಯತೆ ಇರುವುದರಿಂದ ಅಭ್ಯಾಸ ನಡೆಸುವ ತಾಣಗಳನ್ನು ಬಿಸಿಸಿಐ ಶಿಘ್ರದಲ್ಲೇ ಪ್ರಕಟಿಸಲಿದೆ ಎಂದು ವರದಿ ಮಾಡಿದೆ

Exit mobile version