ಹೈದರಾಬಾದ್: ಸೋಮವಾರ ನಡೆದ ವಿಶ್ವಕಪ್ನ(ICC World Cup 2023) 6ನೇ ಪಂದ್ಯದಲ್ಲಿ ನೆದಲೆಂರ್ಡ್ಸ್(New Zealand vs Netherlands) ವಿರುದ್ಧ ನ್ಯೂಜಿಲ್ಯಾಂಡ್ 99 ರನ್ಗಳ ಗೆಲುವು ಸಾಧಿಸಿ ಅಜೇಯ ಓಟವನ್ನು ಮುಂದುವರಿಸಿದೆ. ಇದೇ ಪಂದ್ಯದಲ್ಲಿ ಕಿವೀಸ್ ಆಲ್ರೌಂಡರ್ ಮಿಚೆಲ್ ಸ್ಯಾಂಟ್ನರ್(Mitchell Santner) ಅವರು ಒಂದೇ ಎಸೆತದಲ್ಲಿ 13 ರನ್ ಗಳಿಸಿ ವಿಶ್ವಕಪ್ನ ವಿಶೇಷ ಕ್ಷಣಕ್ಕೆ ಸಾಕ್ಷಿಯಾದರು. ಅಲ್ಲದೆ ದಾಖಲೆಯೊಂದನ್ನು ಕೂಡ ನಿರ್ಮಿಸಿದ್ದಾರೆ.
ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್ ಪರ 8ನೇ ಕ್ರಮಾಂಕದಲ್ಲಿ ಆಡಲಿಳಿದ ಸ್ಯಾಂಟ್ನರ್ ಬಿರುಸಿನ ಆಟಕ್ಕೆ ಒತ್ತು ನೀಡಿದರು. ನೆದಲೆಂರ್ಡ್ಸ್ನ ಆಲ್ ರೌಂಡರ್ ಬಾಸ್ ಡಿ ಲೀಡೆ ಅವರ ಕೊನೆಯ ಓವರ್ನ ಕೊನೆಯ ಎಸೆತವನ್ನು ಸಿಕ್ಸರ್ಗೆ ಬಡಿದಟ್ಟಿದರು. ಆದರೆ ಈ ಎಸೆತ ನೋ ಬಾಲ್ ಆಗಿತ್ತು. ಮುಂದಿನ ಫ್ರೀ ಹಿಟ್ ಎಸೆತವನ್ನು ಸಿಕ್ಸರ್ ಬಾರಿಸಿ ತಂಡಕ್ಕೆ 13 ರನ್ ದಾಖಲಿಸಿದರು. ಲೀಡೆ ಅವರ ಈ ಓವರ್ನಲ್ಲಿ ಒಟ್ಟು 21 ರನ್ಗಳು ಸೋರಿಕೆಯಾಯಿತು. 17 ಎಸೆತಗಳಿಂದ 3 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದ ಸ್ಯಾಂಟ್ನರ್ ಅಜೇಯ 36 ರನ್ ಗಳಿಸಿದರು.
ಇದನ್ನೂ ಓದಿ Shubman Gill: ಆಸ್ಪತ್ರೆಗೆ ದಾಖಲಾದ ಶುಭಮನ್ ಗಿಲ್; ವಿಶ್ವಕಪ್ನಿಂದ ಹೊರಬೀಳುವ ಸಾಧ್ಯತೆ
5 ವಿಕೆಟ್ ಕಿತ್ತು ದಾಖಲೆ ಬರೆದ ಸ್ಯಾಂಟ್ನರ್
ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್ನಲ್ಲಿಯೂ ಶ್ರೇಷ್ಠ ಪ್ರದರ್ಶನ ನೀಡಿದ ಸ್ಯಾಂಟ್ನರ್ 59 ರನ್ಗೆ ಪ್ರಮುಖ 5 ವಿಕೆಟ್ ಕಿತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಅಲ್ಲದೆ ವಿಶ್ವಕಪ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದ ಮೊದಲ ನ್ಯೂಜಿಲ್ಯಾಂಡ್ನ ಸ್ಪಿನ್ನರ್ ಎಂಬ ದಾಖಲೆ ಬರೆದರು. ಒಟ್ಟಾರೆಯಾಗಿ ಕಿವೀಸ್ನ ಆರನೇ ಬೌಲರ್.
The first New Zealand men's spinner to take a Cricket World Cup five-wicket haul 👏#CWC23 | #NZvNED pic.twitter.com/ffIv2jGixE
— ICC Cricket World Cup (@cricketworldcup) October 9, 2023
ಪಂದ್ಯ ಗೆದ್ದ ಕಿವೀಸ್
ಇಲ್ಲಿನ ರಾಜೀವ್ಗಾಂಧಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲೆಂಡ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟಿಂಗ್ ಆಹ್ವಾನ ಪಡೆದ ನ್ಯೂಜಿಲ್ಯಾಂಡ್ ಬಳಗ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ಗೆ 322 ರನ್ ಬಾರಿಸಿತು. ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ನೆದರ್ಲೆಂಡ್ಸ್ 46.3 ಓವರ್ಗಳಲ್ಲಿ 223 ರನ್ ಬಾರಿಸಿ ಆಲ್ಔಟ್ ಆಯಿತು.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ ತಂಡ ಉತ್ತಮ ಅರಂಭ ಪಡೆಯಿತು. 67 ರನ್ಗಳಿಗೆ 1 ವಿಕೆಟ್ ಕಳೆದುಕೊಂಡಿತು. ಕಾನ್ವೆ 32 ರನ್ ಬಾರಿಸಿದರೆ ವಿಲ್ ಯಂಗ್ 70 ರನ್ ಬಾರಿಸಿದರು. ರಚಿನ್ ರವೀಂದ್ರ 51 ರನ್ ಕೊಡುಗೆ ಕೊಟ್ಟರೆ ಡ್ಯಾರಿಲ್ ಮಿಚೆಲ್ 48 ರನ್ ಬಾರಿಸಿದ್ದಾರೆ. ಬಳಿಕ ಟಾಮ್ ಲೇಥಮ್ 53 ರನ್ ಬಾರಿಸಿದರು. ಕೊನೆಯಲ್ಲಿ ಸ್ಯಾಂಟ್ನರ್ 36 ರನ್ ಬಾರಿಸಿದರೆ, ಮ್ಯಾಟ್ ಹೆನ್ರಿ 10 ರನ್ ಬಾರಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು.
ದೊಡ್ಡ ಮೊತ್ತವನ್ನು ಪೇರಿಸಲು ಆರಂಭಿಸಿದ ನೆದರ್ಲೆಂಡ್ಸ್ ತಂಡ 21 ರನ್ಗೆ ಮೊದಲು ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಹಿನ್ನಡೆಗೆ ಒಳಗಾಯಿತು. ಮೂರನೇ ಕ್ರಮಾಂಕದಲ್ಲಿ 69 ರನ್ ಬಾರಿಸಿ ಮಿಂಚಿದರು. ಬಳಿಕ ಉಳಿದ ಬ್ಯಾಟರ್ಗಳು ಅಲ್ಪಸ್ವಲ್ಪ ರನ್ ಬಾರಿಸಿದ ಕಾರಣ ದೊಡ್ಡ ಮೊತ್ತವನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ.