Site icon Vistara News

ICC World Cup 2023: ಕ್ಯಾಪ್ಟನ್ಸ್ ಡೇ ಕಾರ್ಯಕ್ರಮದಲ್ಲಿ ಗರಂ ಆದ ರೋಹಿತ್​ ಶರ್ಮ; ವಿಡಿಯೊ ವೈರಲ್​

Rohit Sharma

ಅಹಮದಾಬಾದ್​: ಬುಧವಾರ ಅಹಮದಾಬಾದ್​ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್(ICC World Cup 2023)​ ಟೂರ್ನಿಯ ಕ್ಯಾಪ್ಟನ್ಸ್ ಡೇ(Captain’s Day) ಕಾರ್ಯಕ್ರಮದಲ್ಲಿ ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ ಅವರು ಪತ್ರಕರ್ತನ ಪ್ರಶ್ನೆಗೆ ಗರಂ ಆಗಿ ತೀಕ್ಷ್ಣ ರೀತಿಯಲ್ಲೇ ಉತ್ತರಿಸಿದ್ದಾರೆ. ರೋಹಿತ್​ ಪ್ರತಿಕ್ರಿಯೆ ಕಂಡು ಪಕ್ಕದಲ್ಲಿ ಕುಳಿತಿದ್ದ ಪಾಕ್​ ನಾಯಕ ಬಾಬರ್​ ಅಜಂ(Babar Azam) ಜೋರಾಗಿ ನಗಾಡಿದ್ದಾರೆ. ಇದರ ವಿಡಿಯೊ ವೈರಲ್(viral video)​ ಆಗಿದೆ.

ರೋಹಿತ್​ ಬಳಿ 2019ರ ಲಾರ್ಡ್ಸ್‌ನಲ್ಲಿ ನಡೆದ ವಿಶ್ವಕಪ್ ಫೈನಲ್​ನ ಬಗ್ಗೆ ಪ್ರಶ್ನೆಯನ್ನು ಕೇಳಲಾಯಿತು. ಫೈನಲ್​ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್​ ಪಂದ್ಯ ಟೈ ಆದ ಕಾರಣ ಸೂಪರ್‌ ಓವರ್ ಆಡಿಸಲಾಗಿತ್ತು. ಆದರೆ, ಸೂಪರ್ ಓವರ್ ಕೂಡ ಟೈಗೊಂಡ ಕಾರಣ ಕೊನೆಗೆ ಬೌಂಡರಿ ಆಧಾರದಲ್ಲಿ ವಿಜೇತರನ್ನು ಘೋಷಿಸಲಾಗಿತ್ತು. ನಿಮ್ಮ ಪ್ರಕಾರ ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಬೇಕೇ?” ಎಂದು ವರದಿಗಾರರು ರೋಹಿತ್ ಬಳಿ ಕೇಳಿದ್ದಾರೆ.

ಈ ಪ್ರಶ್ನೆಗೆ ಉತ್ತರಿಸಿದ ರೋಹಿತ್​ ‘ವಿಜೇತರನ್ನು ಘೋಷಿಸುವುದು ನನ್ನ ಕೆಲಸವಲ್ಲ’ ಈ ರೀತಿಯ ಅನಗತ್ಯ ಪ್ರಶ್ನೆಯನ್ನು ಕೇಳುವುದನ್ನು ಮೊದಲು ನಿಲ್ಲಿಸಿ” ಎಂದು ರೋಹಿತ್ ಖಡಕ್ ಆಗಿ ತಿರುಗೇಟು ನೀಡಿದ್ದಾರೆ. ರೋಹಿತ್​ ಅವರು ಹಿಂದಿಯಲ್ಲಿ ಹೇಳಿದ ಈ ಮಾತನ್ನು ಪಾಕ್​ ನಾಯಕ ಬಾಬರ್​ ಅಜಂ ಅವರು ಪಕ್ಕದಲ್ಲಿ ಕುಳಿತಿದ್ದ ಇಂಗ್ಲೆಂಡ್​ ನಾಯಕ ಜಾಸ್​ ಬಟ್ಲರ್​ಗೆ ಇಂಗ್ಲಿಷ್​ ಅನುವಾದ ಮಾಡಿದ್ದಾರೆ.

ಇದನ್ನೂ ಓದಿ ICC World Cup 2023: ಹೈದರಾಬಾದ್ ಬಿರಿಯಾನಿಗೆ ಮನಸೋತ ಪಾಕ್​ ಆಟಗಾರರು; ತವರಿಗೆ ಹೋಗಲು ಹಿಂದೇಟು

ಬೌಂಡರಿ ಕೌಂಟ್​ ಇಲ್ಲ

ಕಳೆದ ಬಾರಿಯ ವಿಶ್ವಕಪ್​ ಫೈನಲ್​ನಲ್ಲಿ ಸೂಪರ್​ ಓವರ್​ ಟೈಗೊಂಡಾಗ ಫಲಿತಾಂಶಕ್ಕೆ ಬೌಂಡರಿ ಲೆಕ್ಕಾಚಾರವನ್ನು ಮಾಡಲಾಗಿತ್ತು. ಇದು ಭಾರಿ ವಿವಾದಕ್ಕೂ ಕಾರಣವಾಗಿತ್ತು. ಈ ಬಾರಿ ಬೌಂಡರಿ ನಿಯಮವನ್ನು ತೆಗೆದು ಹಾಕಲಾಗಿದೆ. ಈ ಬಾರಿ ಪಂದ್ಯಗಳು ಟೈ ಗೊಂಡರೆ ಫಲಿತಾಂಶ ಬರುವ ತನಕ ಸೂಪರ್​ ಓವರ್​ ಆಡಿಸಲಾಗುತ್ತದೆ.

ಬೌಂಡರಿ ಸುತ್ತಳತೆ 70 ಮೀಟರ್‌

ಈ ಬಾರಿ ವಿಶ್ವಕಪ್​ನಲ್ಲಿ ಐಸಿಸಿ ಮಹತ್ವದ ನಿರ್ಧಾರವೊಂದನ್ನು ಜಾರಿಗೊಳಿಸಿದೆ. ಅದೆಂದರೆ ಬೌಂಡರಿಯ ದೂರ 70 ಮೀಟರ್ ಗಿಂತ ಕಡಿಮೆ ಇರುವಂತಿಲ್ಲ. ಈ ಹಿಂದೆ ನಡೆದ ವಿಶ್ವಕಪ್​ನಲ್ಲಿ ಈ ರೀತಿಯ ಬೌಂಡರಿ ಗೆರೆಯ ಅಂತರದ ನಿಯಮವಿರಲಿಲ್ಲ. ಬ್ಯಾಟರ್​ಗಳಿಗೆ ಸಿಕ್ಸರ್​ ಬಾರಿಸುವುದು ಅಷ್ಟು ಸುಲಭವಲ್ಲ.

ಸಂಪೂರ್ಣ ಭಾರತದ ಆತಿಥ್ಯ

ಏಕದಿನ ವಿಶ್ವಕಪ್ ಆತಿಥ್ಯವನ್ನು ಭಾರತ ಈ ಹಿಂದೆ ಪಾಕಿಸ್ತಾನ, ಶ್ರಿಲಂಕಾ ಜತೆ ಜಂಟಿಯಾಗಿ ನಡೆಸಿತ್ತು. ಇದೇ ಮೊದಲ ಬಾರಿ ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ನಡೆಯುವ ವಿಶ್ವಕಪ್​ ಇದಾಗಿದೆ. ಈ ಮೊದಲು 1987, 1996 ಮತ್ತು 2011 ರಲ್ಲಿ ಜಂಟಿಯಾಗಿ ಆತಿಥ್ಯ ವಹಿಸಿತ್ತು.

ರೌಂಡ್‌ ರಾಬಿನ್‌ ಲೀಗ್‌

ಇದು 10 ತಂಡಗಳ ನಡುವಿನ ರೌಂಡ್‌ ರಾಬಿನ್‌ ಮಾದರಿಯ ಲೀಗ್​ ಆಗಿದೆ. ಎಲ್ಲ ತಂಡಗಳು ಮುಖಾಮುಖಿಯಾಗಲಿವೆ. ಅಗ್ರಸ್ಥಾನ ಅಲಂಕರಿಸಿದ 4 ತಂಡಗಳು ಸೆಮಿಫೈನಲ್​ ಪ್ರವೇಶ ಪಡೆಯಲಿದೆ.

Exit mobile version