Site icon Vistara News

ICC World Cup 2023: ಆಫ್ಘನ್​ ತಂಡದ ಸೆಮಿ ಫೈನಲ್​ ಲೆಕ್ಕಾಚಾರ ಹೇಗಿದೆ?

Rashid Khan leads Afghanistan's lap of honour at Gahunje

ಬೆಂಗಳೂರು: ಶ್ರೀಲಂಕಾ(Afghanistan vs Sri Lanka) ವಿರುದ್ಧ ಗೆಲ್ಲುವ ಮೂಲಕ ವಿಶ್ವಕಪ್(ICC World Cup 2023)​ ಸೆಮಿಫೈನಲ್​ ಆಸೆ ಜೀವಂತವಿರಿಸಿಕೊಂಡಿರುವ ಅಫಘಾನಿಸ್ತಾನ ತಂಡ ಸೆಮಿಫೈನಲ್​ ಪ್ರವೇಶ ಪಡೆಯಲು ಮುಂದಿನ ಎಷ್ಟು ಪಂದ್ಯಗಳನ್ನು ಗೆಲ್ಲಬೇಕು, ಲೆಕ್ಕಾಚಾರ ಹೇಗಿದೆ ಎಂಬ ಮಾಹಿತಿ ಇಂತಿದೆ.

ಸದ್ಯ ಅಫಘಾನಿಸ್ತಾನ ತಂಡ 6 ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದು 6 ಅಂಕದೊಂದಿಗೆ 5ನೇ ಸ್ಥಾನದಲ್ಲಿದೆ. ಇನ್ನು ಮೂರು ಪಂದ್ಯಗಳು ಬಾಕಿ ಇವೆ. ಎದುರಾಳಿಗಳು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್​. ಈ ಮೂರು ಪಂದ್ಯಗಳನ್ನು ಆಫ್ಘನ್ ಗೆದ್ದರೆ 12 ಅಂಕ ಲಭಿಸಿಸಿ ಸೆಮಿಫೈನಲ್​ ಪ್ರವೇಶ ಪಡೆಯಬಹುದು. ಆದರೆ ಇಲ್ಲೂ ಕೆಲ ಲೆಕ್ಕಾಚಾರಗಳಿವೆ.

4ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಸದ್ಯ 8 ಅಂಕ ಹೊಂದಿದ್ದು. ಈ ತಂಡಕ್ಕೂ ಮೂರು ಪಂದ್ಯ ಬಾಕಿ ಇದೆ. ಒಂದೊಮ್ಮೆ ಆಸ್ಟ್ರೇಲಿಯಾ ತಂಡ ಆಫ್ಘನ್ ವಿರುದ್ಧ ಸೋತರೂ ಆಸೀಸ್​ಗೆ ಸೆಮಿ ರೇಸ್​ನಿಂದ ಹೊರ ಬೀಳುವುದಿಲ್ಲ. ಮುಂದಿನ 2 ಪಂದ್ಯಗಳನ್ನು ಗೆದ್ದರೆ ಆಸೀಸ್​ಗೂ 12 ಅಂಕ ಆಗಲಿದೆ. ಆಗ ಆಸೀಸ್​ಗೂ ಸೆಮಿ ಅವಕಾಶವಿದೆ. ಆಸ್ಟ್ರೇಲಿಯಾ 2 ಪಂದ್ಯದಲ್ಲಿ ಸೋತು, ಆಫ್ಘನ್​ ಮೂರರಲ್ಲಿ ಗೆದ್ದರೆ ಸೆಮಿ ಟಿಕೆಟ್​ ಆಫ್ಘನ್​ಗೆ ಸಿಗಲಿದೆ. ಒಂದೊಮ್ಮೆ ಆಸ್ಟ್ರೇಲಿಯಾ ಮೂರರಲ್ಲಿ ಒಂದು ಪಂದ್ಯ ಮಾತ್ರ ಗೆದ್ದು ಆಫ್ಘನ್​ ಮೂರರಲ್ಲಿ 2 ಪಂದ್ಯ ಗೆದ್ದರೆ ಇತ್ತಂಡಗಳಿಗೂ ತಲಾ 10 ಅಂಕ ಆಗಲಿದೆ. ಆಗ ರನ್​ ರೇಟ್​ನಲ್ಲಿ ಯಾರು ಮುಂದಿರುತ್ತಾರೋ ಅವರಿಗೆ ಸೆಮಿಯ ಅದೃಷ್ಟ ದೊರಕಲಿದೆ.

ಕಿವೀಸ್​ ಸೋತರೂ ಅವಕಾಶ

ಇನ್ನೊಂದು ಲೆಕ್ಕಾಚಾರದ ಪ್ರಕಾರ 8 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್​ ತಂಡ ಮುಂದಿನ ಮೂರು ಪಂದ್ಯಗಳಲ್ಲಿ ಸೋಲು ಕಂಡರೆ, ಅಫಘಾನಿಸ್ತಾನ ಮುಂದಿನ ಮೂರು ಪಂದ್ಯಗಳಲ್ಲಿ ಕನಿಷ್ಠ 2 ಪಂದ್ಯಗಳನ್ನು ಗೆದ್ದರೆ 10 ಅಂಕ ಸಂಪಾದಿಸಿ ನೇರವಾಗಿ ಸೆಮಿಫೈನಲ್​ ಪ್ರವೇಶ ಪಡೆಯಲಿದೆ.

ಇದನ್ನೂ ಓದಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ಭಾರತ; ಕೂಟದಿಂದ ಹೊರಬಿದ್ದ ಇಂಗ್ಲೆಂಡ್​

ನೂತನ ಅಂಕಪಟ್ಟಿ ಹೀಗಿದೆ

ತಂಡಪಂದ್ಯಗೆಲುವುಸೋಲುಅಂಕನೆಟ್​ ರನ್​ರೇಟ್​
ಭಾರತ66012+1.405
ದಕ್ಷಿಣ ಆಫ್ರಿಕಾ65110+2.032
ನ್ಯೂಜಿಲ್ಯಾಂಡ್​6428+1.232
ಆಸ್ಟ್ರೇಲಿಯಾ6428+0.970
ಅಫಘಾನಿಸ್ತಾನ6336-0.718
ಶ್ರೀಲಂಕಾ 6244-0.275
ಪಾಕಿಸ್ತಾನ6244-0.387
ನೆದರ್ಲ್ಯಾಂಡ್ಸ್6244-1.277
ಬಾಂಗ್ಲಾದೇಶ​ 6152-1.338
ಇಂಗ್ಲೆಂಡ್​​​ 6152-1.652

ಸದ್ಯ ಭಾರತ 6 ಪಂದ್ಯಗಳಲ್ಲಿ 6ನ್ನೂ ಗೆದ್ದು +1.405 ರನ್​ ರೇಟ್​ನೊಂದಿಗೆ ಮೊದಲ ಸ್ಥಾನ ಪಡೆದಿದೆ. ಭಾರತ ಮುಂದಿನ ಪಂದ್ಯವನ್ನು ಶ್ರೀಲಂಕಾ ವಿರುದ್ಧ ನವೆಂಬರ್​ 2ರಂದು ಆಡಲಿದೆ. ಈ ಪಂದ್ಯವನ್ನೂ ಗೆದ್ದರೆ ಅಧಿಕೃತವಾಗಿ ಸೆಮಿಫೈನಲ್ ಪ್ರವೇಶ ಪಡೆಯಲಿದೆ.

ಭಾರತದ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾ ತಂಡ ನ್ಯೂಜಿಲ್ಯಾಂಡ್​ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆದ್ದರೆ ಮತ್ತೆ ನಂ.1ಸ್ಥಾನಕ್ಕೇರಲಿದೆ. ಆಗ ಭಾರತ ದ್ವಿತೀಯ ಸ್ಥಾನಕ್ಕೆ ಜಾರಲಿದೆ. ದಕ್ಷಿಣ ಆಫ್ರಿಕಾ, ಭಾರತಕ್ಕಿಂತ ಒಂದು ಪಂದ್ಯ ಕಡಿಮೆ ಗೆದ್ದಿದ್ದರೂ ರನ್​ ರೇಟ್​ ಉತ್ತಮವಾಗಿರುವುದರಿಂದ ಈ ಲಾಭ ಪಡೆಯಲಿದೆ.

Exit mobile version