ಬೆಂಗಳೂರು: ಪ್ರಸಕ್ತ ಸಾಗುತ್ತಿರುವ ವಿಶ್ವಕಪ್(ICC World Cup 2023) ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಮತ್ತು ವಿಕೆಟ್ ಪಡೆದ ಟಾಪ್ 5 ಪಟ್ಟಿಯಲ್ಲಿ ಯಾರೆಲ್ಲ ಸಾಧಕರಿದ್ದಾರೆ ಎಂಬ ಮಾಹಿತಿ ಇಂತಿದೆ. ಈ ವರದಿ ಭಾನುವಾರ ನಡೆಯುವ ಭಾರತ ಮತ್ತು ನ್ಯೂಜಿಲ್ಯಾಂಡ್ ಪಂದ್ಯಕ್ಕೂ ಮುನ್ನದ್ದಾಗಿದೆ. ಸದ್ಯ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಅವರು ವಿಶ್ವಕಪ್ನಲ್ಲಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಅವರು 4 ಪಂದ್ಯಗಳನ್ನು ಆಡಿ 294* ರನ್ ಗಳಿಸಿದ್ದಾರೆ.
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ಅವರು ದ್ವಿತೀಯ ಸ್ಥಾನದಲ್ಲಿದ್ದಾರೆ. ಆಸೀಸ್ ವಿರುದ್ಧ ಚೆನ್ನೈಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಶೂನ್ಯ ಸಂಪಾದಿಸಿದರೂ ಆ ಬಳಿಕದ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್ ನಡೆಸಿ ಒಂದು ಶತಕ ಮತ್ತು ಅರ್ಧಶತಕ ಬಾರಿಸಿ ಸದ್ಯ ಆಡಿದ 4 ಪಂದ್ಯಗಳಿಂದ 265 ರನ್ ಗಳಿಸಿದ್ದಾರೆ.
ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಅವರು ಮೂರನೇ ಸ್ಥಾನದಲ್ಲಿದ್ದಾರೆ. ಅವರು ಕೂಡ 4 ಪಂದ್ಯಗಳನ್ನು ಆಡಿ 259 ರನ್ ಬಾರಿಸಿದ್ದಾರೆ. ಒಂದು ಶತಕ ಮತ್ತು ಅರ್ಧಶತಕ ಒಳಗೊಂಡಿದೆ. ನ್ಯೂಜಿಲ್ಯಾಂಡ್ನ ಡೆವೋನ್ ಕಾನ್ವೆ ಅವರು 4 ಪಂದ್ಯಗಳನ್ನು ಆಡಿ 249 ರನ್ ಗಳಿಸಿದ್ದಾರೆ. ಸದ್ಯ ಅವರು ಅತಿ ಹೆಚ್ಚು ರನ್ ಬಾರಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ದಕ್ಷಿಣ ಆಫ್ರಿಕಾದ ಎಡಗೈ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರು 5ನೇ ಸ್ಥಾನದಲ್ಲಿದ್ದಾರೆ. ಇದರಲ್ಲಿ 2 ಶತಕ ಒಳಗೊಂಡಿದೆ. ಆದರೆ ಆ ಬಳಿಕ ಕೊಂಚ ಬ್ಯಾಟಿಂಗ್ ಲಯ ಕಳೆದುಕೊಂಡಂತಿದೆ. ಸದ್ಯ ಅವರು 4 ಪಂದ್ಯಗಳಿಂದ 233 ರನ್ ಬಾರಿಸಿದ್ದಾರೆ.
ಬೌಲಿಂಗ್ ಸಾಧನೆ
ನ್ಯೂಜಿಲ್ಯಾಂಡ್ನ ಮಿಚೆಲ್ ಸ್ಯಾಂಟ್ನರ್ ಅವರು ಸದ್ಯ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆಡಿದ 4 ಪಂದ್ಯಗಳಲ್ಲಿ 11 ವಿಕೆಟ್ ಪಡೆದಿದ್ದಾರೆ. ಶ್ರೀಲಂಕಾದ ದಿಲ್ಶಾನ್ ಮಧುಶಂಕ ಅವರು ಕೂಡ 11 ವಿಕೆಟ್ ಕಿತ್ತು ದ್ವಿತೀಯ ಸ್ಥಾನದಲ್ಲಿದೆ.
ಟೀಮ್ ಇಂಡಿಯಾದ ಜಸ್ಪ್ರೀತ್ ಬುಮ್ರಾ ಅವರು 10 ವಿಕೆಟ್ ಕಿತ್ತು ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಕಿವೀಸ್ನ ವೇಗಿ ಮ್ಯಾಟ್ ಹೆನ್ರಿ 9 ವಿಕೆಟ್ ಪಡೆದು 4ನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಶಾಹೀನ್ ಶಾ ಅಫ್ರಿದಿ 9 ವಿಕೆಟ್ ಪಡೆದು 5ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ Heinrich Klaasen: ಕ್ಲಾಸಿ ಶತಕ ಬಾರಿಸಿ ವಿಶ್ವಕಪ್ನಲ್ಲಿ ದಾಖಲೆ ಬರೆದ ಕ್ಲಾಸೆನ್
ಅಂಕಪಟ್ಟಿ ಈ ರೀತಿ ಇದೆ
ತಂಡ | ಪಂದ್ಯ | ಗೆಲುವು | ಸೋಲು | ಅಂಕ | ನೆಟ್ ರನ್ರೇಟ್ |
ನ್ಯೂಜಿಲ್ಯಾಂಡ್ | 4 | 4 | 0 | 8 | 1.923 |
ಭಾರತ | 4 | 4 | 0 | 8 | 1.659 |
ದಕ್ಷಿಣ ಆಫ್ರಿಕಾ | 4 | 3 | 1 | 6 | 2.212 |
ಆಸ್ಟ್ರೇಲಿಯಾ | 4 | 2 | 2 | 4 | -0.193 |
ಪಾಕಿಸ್ತಾನ | 4 | 2 | 2 | 4 | -0.456 |
ಬಾಂಗ್ಲಾದೇಶ | 4 | 1 | 3 | 2 | -0.784 |
ನೆದರ್ಲ್ಯಾಂಡ್ಸ್ | 4 | 1 | 3 | 2 | -0.790 |
ಶ್ರೀಲಂಕಾ | 4 | 1 | 3 | 2 | -1.048 |
ಇಂಗ್ಲೆಂಡ್ | 4 | 1 | 3 | 2 | -1.248 |
ಅಫಘಾನಿಸ್ತಾನ | 4 | 1 | 3 | 2 | -1.250 |