ಸಿಡ್ನಿ: ಭಾರತದಲ್ಲಿ ನಡೆಯುವ ಬಹುನಿರೀಕ್ಷಿತ ಏಕದಿನ ವಿಶ್ವಕಪ್(ICC World Cup) ಟೂರ್ನಿಗೆ 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡ 15 ಸದಸ್ಯರ ಸಂಭಾವ್ಯ ತಂಡವನ್ನು(preliminary World Cup squad) ಅಂತಿಮಗೊಳಿಸಿದೆ. ಕಳೆದ ತಿಂಗಳು 18 ಸದಸ್ಯರ ತಂಡವನ್ನು ಪ್ರಕಟಿಸಿತ್ತು. ಇದೀಗ 15 ಮಂದಿಗೆ ಈ ತಂಡವನ್ನು ಇಳಿಸಿದೆ.
ಆತಿಥೇಯ ಭಾರತ ಮತ್ತು ದಕ್ಷಿಣ ಆಫ್ರಿಕಾ ಮಂಗಳವಾರ 15 ಸದಸ್ಯರ ತಂಡವನ್ನು ಪ್ರಕಟಿಸಿತ್ತು. ಇದರ ಮರು ದಿನವೇ ಆಸ್ಟ್ರೇಲಿಯಾ ಕೂಡ ಈ ಹಿಂದೆ ಪ್ರಕಟಿಸಿದ್ದ ತಂಡದಲ್ಲಿ ಮೂವರನ್ನು ಕೈಬಿಟ್ಟು 15 ಮಂದಿಯ ತಂಡವನ್ನು ಅಂತಿಮಗೊಳಿಸಿದೆ. ಈ ಹಿಂದೆ 18 ಮಂದಿ ಸದಸ್ಯರಲ್ಲಿ ಸ್ಥಾನ ಪಡೆದಿದ್ದ ಆರನ್ ಹಾರ್ಡಿ, ನಥಾನ್ ಎಲ್ಲಿಸ್ ಮತ್ತು ತನ್ವೀರ್ ಸಂಘ ಅವರನ್ನು ಕೈ ಬಿಡಲಾಗಿದೆ. ಬಹುತೇಕ ಈ ತಂಡದಲ್ಲಿ ಇನ್ನು ಬದಲಾವಣೆ ಕಷ್ಟ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಖಚಿತಪಡಿಸಿದೆ. ಗಾಯಗೊಂಡರಷ್ಟೇ ಬದಲಾವಣೆ ಎಂದು ತಿಳಿಸಿದೆ.
ಕಮಿನ್ಸ್ ಸಾರಥ್ಯ
ಅನುಭವಿ ವೇಗಿ ಪ್ಯಾಟ್ ಕಮಿನ್ಸ್(Pat Cummins) ತಂಡವನ್ನು ಮುನ್ನಡೆಸಲಿದ್ದಾರೆ. ಕಮಿನ್ಸ್ ನೇತೃತ್ವದಲ್ಲಿ ಇದೇ ವರ್ಷ ಆಸ್ಟ್ರೇಲಿಯಾ ಟೆಸ್ಟ್ ವಿಶ್ವಕಪ್ ಗೆದ್ದ ಸಾಧನೆ ಮಾಡಿತ್ತು. ಫೈನಲ್ನಲ್ಲಿ ಭಾರತವನ್ನು ಮಣಿಸಿ ಆಸೀಸ್ ಎಲ್ಲ ಮಾದರಿಯ ವಿಶ್ವಕಪ್ ಗೆದ್ದ ಸಾಧನೆ ಮಾಡಿತ್ತು. ಇದೀಗ ಮತ್ತೊಂದು ವಿಶ್ವಕಪ್ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಆಸ್ಟ್ರೇಲಿಯಾ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 8ರಂದು ಆತಿಥೇಯ ಭಾರತ ವಿರುದ್ಧ ಕಣ್ಣಕಿಳಿಯುವ ಮೂಲಕ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಈ ಪಂದ್ಯ ಚೆನ್ನೈಯಲ್ಲಿ ನಡೆಯಲಿದೆ. ಅನುಭವಿ ಆಟಗಾರ ಮಾರ್ನಸ್ ಲಬುಶೇನ್ ಅವರು ಆಯ್ಕೆಯಾಗಿಲ್ಲ. ವಿಶ್ವಕಪ್ಗೂ ಮುನ್ನ ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧ ಏಕದಿನ ಸರಣಿಯನ್ನು ಆಡಲಿದೆ.
ಸ್ಯದ ಈಗಿನ ಪಟ್ಟಿಯ ಪ್ರಕಾರ ವಾರ್ನರ್ ಮತ್ತು ಟ್ರಾವಿಸ್ ಹೆಡ್ ಆಸೀಸ್ ಇನಿಂಗ್ಸ್ ಆರಂಭಿಸಲಿದ್ದಾರೆ. ಒಂದೊಮ್ಮೆ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ವಾರ್ನರ್ ನಿರೀಕ್ಷಿತ ಪ್ರದರ್ಶನ ತೋರದೇ ಇದಲ್ಲಿ ಅವರ ಸ್ಥಾನದಲ್ಲಿ ಮಿಚೆಲ್ ಮಾರ್ಷ್ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆ ಅಧಿಕವಾಗಿದೆ.
ಇದನ್ನೂ ಓದಿ IND vs AUS: ಭಾರತ ವಿರುದ್ಧದ ಸರಣಿಯಿಂದ ಗ್ಲೆನ್ ಮ್ಯಾಕ್ಸ್‌ವೆಲ್ ಔಟ್
ತಂಡ ಬದಲಾವಣೆ ಅವಕಾಶವಿದೆ
ವಿಶ್ವಕಪ್ ತಂಡಗಳನ್ನು ಬದಲಿಸಲು ಐಸಿಸಿ ಅವಕಾಶನ್ನೂ ಕಲ್ಪಿಸಿದೆ. ಆದರೆ ಈ ಬದಲಾವಣೆಯನ್ನು ವಿಶ್ವಕಪ್ ಆರಂಭಕ್ಕೆ ಒಂದು ವಾರ ಮುಂಚಿತವಾಗಿ ಮಾಡಬೇಕು. ಅನಂತರ ಆಟಗಾರರ ಬದಲಾವಣೆಗೆ ಗಾಯದ ಸಮಸ್ಯೆ ತಲೆದೋರಿದರಷ್ಟೇ ಅವಕಾಶವಿರಲಿದೆ. ಇದಕ್ಕೆ ಐಸಿಸಿ ತಾಂತ್ರಿಕ ಸಮಿತಿಯ ಒಪ್ಪಿಗೆಯೂ ಅಗತ್ಯ.
ಆಸ್ಟ್ರೇಲಿಯಾ ತಂಡ
ಪ್ಯಾಟ್ ಕಮಿನ್ಸ್ (ನಾಯಕ), ಸೀನ್ ಅಬೋಟ್, ಆಷ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಕ್ಯಾಮರೂನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆ್ಯಡಂ ಜಂಪಾ.