Site icon Vistara News

ICC World Cup: ಮತ್ತೆ ವಿಶ್ವಕಪ್ ವೇಳಾಪಟ್ಟಿ​ ಬದಲಾವಣೆ ಅಸಾಧ್ಯ; ರಾಜೀವ್ ಶುಕ್ಲಾ ಸ್ಪಷ್ಟನೆ

Rajeev Shukla, the Vice-President of the Board of Control for Cricket in India

ಮುಂಬಯಿ: ಭದ್ರತಾ ದೃಷ್ಟಿಯಿಂದ ಅಕ್ಟೋಬರ್ 10 ರಂದು ನಡೆಯುವ ವಿಶ್ವಕಪ್​ನ(ICC World Cup) ಪಾಕಿಸ್ತಾನ ಮತ್ತು ಶ್ರೀಲಂಕಾ(Pakistan and Sri Lanka) ನಡುವಿನ ಪಂದ್ಯದ ದಿನಾಂಕವನ್ನು ಬದಲಾಯಿಸುವಂತೆ ಬಿಸಿಸಿಐಗೆ(BCCI) ಮನವಿ ಮಾಡಿದ್ದ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಶನ್​ಗೆ(Hyderabad Cricket Association’s) ಹಿನ್ನಡೆಯಾಗಿದೆ. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ(Rajeev Shukla) ಯಾವುದೇ ಕಾರಣಕ್ಕೂ ಬದಲಾವಣೆ(icc world cup 2023 schedule) ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 9 ರಂದು ನ್ಯೂಜಿಲ್ಯಾಂಡ್​ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪಂದ್ಯ ನಡೆಯಲಿದೆ. ಇದರ ಮರು ದಿನವೇ ಅಕ್ಟೋಬರ್ 10 ರಂದು ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಇದೇ ಮೈದಾನದಲ್ಲಿ ಮತ್ತೊಂದು ಪಂದ್ಯ ನಡೆಯಲ್ಲಿದೆ. ಹೀಗಾಗಿ ಸತತ ಎರಡು ಪಂದ್ಯಗಳಿಗೆ ಬಿಡುವಿಲ್ಲದೆ ಭದ್ರತೆಯನ್ನು ಒದಗಿಸಲು ಸಾದ್ಯವಿಲ್ಲ ಎಂದು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಬಿಸಿಸಿಐಗೆ ಪಂದ್ಯದ ದಿನಾಂಕ ಬದಲಾವಣೆ ಮಾಡುವಂತೆ ಮನವಿ ಮಾಡಿತ್ತು. 

ಭದ್ರತಾ ಸಮಸ್ಯೆ ಇಲ್ಲ

ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಯಾವುದೇ ಭದ್ರತೆಯ ಸಮಸ್ಯೆ ಕಂಡುಬಂದಲ್ಲಿ ನಾವು ಪರಿಹರಿಸಲು ಸಿದ್ಧರಿದ್ದೇವೆ. ವೇಳಾಪಟ್ಟಿಯನ್ನು ಬದಲಾಯಿಸುವುದು ಅಷ್ಟು ಸುಲಭವಲ್ಲ. ಅದರ ಸಾಧ್ಯತೆಯೂ ಇಲ್ಲ. ಈಗಾಗಲೇ ಕೆಲ ದಿನಗಳ ಹಿಂದೆ 9 ಪಂದ್ಯಗಳ ದಿನಾಂಕವನ್ನು ಬದಲಿಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಈಗ ಮತ್ತೆ ಬದಲಾವಣೆ ಎಂದರೆ ಕಷ್ಟ. ಬದಲಾವಣೆಗೆ ಬಿಸಿಸಿಐ ಮಾತ್ರ ಒಪ್ಪಿಗೆ ಸೂಚಿಸಿದರೆ ಸಾಲದು ಇದು ತಂಡಗಳು ಸೇರಿ ಐಸಿಸಿಗೂ ಸಂಬಂಧಿಸಿದ ವಿಷಯವಾಗಿದೆ. ಹೀಗಾಗಿ ಬದಲಾವಣೆಯ ಮಾತೇ ಇಲ್ಲ ಎಂದು ಎಂದು ರಾಜೀವ್ ಶುಕ್ಲಾ ಹೇಳಿದ್ದಾರೆ.

ಪಾಕಿಸ್ತಾನದ ದ್ವಂದ್ವ ಹೇಳಿಕೆಯಿಂದಾಗಿ ವಿಶ್ವಕಪ್​ ವೇಳಾಪಟ್ಟಿ ತುಂಬ ವಿಳಂಬವಾಗಿತ್ತು. ಟೂರ್ನಿ ಆರಂಭಕ್ಕೆ 100 ದಿನ ಬಾಕಿಯಿದ್ದಾಗ ಬಿಸಿಸಿಐ ಮತ್ತು ಐಸಿಸಿ ವೇಳಾಪಟ್ಟಿ ಪ್ರಕಟಿಸಿತ್ತು. ಇದಾದ ಬಳಿಕ ಇನ್ನೇನು 2 ತಿಂಗಳು ಬಾಕಿ ಇರುವಾಗ ಹಬ್ಬಗಳ ಹಿನ್ನೆಲೆಯಲ್ಲಿ ಮಹತ್ವದ ಪಂದ್ಯಗಳಿಗೆ ಭದ್ರತೆ ನೀಡುವುದು ಕಷ್ಠವಾಗುತ್ತದೆ ಎಂದು ಕೆಲ ರಾಜ್ಯದ ಕ್ರಿಕೆಟ್​ ಸಂಸ್ಥೆಗಳು ಮನವಿ ಮಾಡಿದ್ದವು. ಈ ಹಿನ್ನಲೆಯಲ್ಲಿ ಭಾರತ-ಪಾಕಿಸ್ತಾನ ಸೇರಿ 9 ಪಂದ್ಯಗಳ ದಿನಾಂಕ ಬದಲಿಸಿ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಹೀಗಾಗಿ ಅಕ್ಟೋಬರ್​ 15ಕ್ಕೆ ನಡೆಯಬೇಕಿದ್ದ ಭಾರತ ಮತ್ತು ಪಾಕ್​ ಪಂದ್ಯ ಒಂದು ದಿನ್ನ ಮುನ್ನ ಅಂದರೆ ಅಕ್ಟೋಬರ್​ 14ಕ್ಕೆ ನಡೆಯಲಿದೆ. ಹೀಗೆ ಉಳಿದ ತಂಡಗಳ ಪೂರ್ವ ನಿಗದಿಯಾಗಿದ್ದ ಪಂದ್ಯದ ದಿನಾಂಕವೂ ಬದಲಾಯಿತು. ಈ ಬದಲಾವಣೆಯಿಂದ ಹೈದರಾಬಾದ್​ಗೆ ಬ್ಯಾಕ್​ ಡು ಬ್ಯಾಕ್​ ಪಂದ್ಯಗಳು ಸಿಕ್ಕುವಂತಾಗಿದೆ.

ಇದನ್ನೂ ಓದಿ ICC World Cup 2023 schedule: ಐಸಿಸಿ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ, ಮೋದಿ ಸ್ಟೇಡಿಯಂನಲ್ಲೇ ಭಾರತ-ಪಾಕ್‌ ಕದನ!

ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ

ಅಕ್ಟೋಬರ್​ 5ರಿಂದ ವಿಶ್ವಕಪ್​ನ ಪಂದ್ಯಗಳು ಆರಂಭವಾಗಲಿವೆ. ನವೆಂಬರ್​ 19ರಂದು ಫೈನಲ್​ ಪಂದ್ಯ ನಡೆಯಲಿದೆ. ಉದ್ಘಾಟನಾ ಮತ್ತು ಅಂತಿಮ ಪಂದ್ಯವನ್ನು ಗುಜರಾತ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ .ಒಟ್ಟು ದೇಶದ 10 ತಾಣಗಳಲ್ಲಿ, 48 ಪಂದ್ಯಗಳು ನಡೆಯಲಿವೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ ಸೆಣಸಾಡಲಿದೆ. ಭಾರತ ತನ್ನ ಅಭಿಯಾನವನ್ನು ಅಕ್ಟೋಬರ್​ 8ರಂದು ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ಆರಂಭಿಸಲಿದೆ. ಈ ಪಂದ್ಯ ಚೆನ್ನೈಯಲ್ಲಿ ನಡೆಯಲಿದೆ.

ಭಾರತ ಪಂದ್ಯದ ಸಂಪೂರ್ಣ ವೇಳಾಪಟ್ಟಿ

ಭಾರತ vs ಆಸ್ಟ್ರೇಲಿಯಾ- 8 ಅಕ್ಟೋಬರ್, ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ

ಭಾರತ vs ಅಫಘಾನಿಸ್ತಾನ- 11 ಅಕ್ಟೋಬರ್, ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ

ಭಾರತ vs ಪಾಕಿಸ್ತಾನ- 14 ಅಕ್ಟೋಬರ್, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್

ಭಾರತ vs ಬಾಂಗ್ಲಾದೇಶ- 19 ಅಕ್ಟೋಬರ್, ಎಂಸಿಎ ಸ್ಟೇಡಿಯಂ, ಪುಣೆ

ಭಾರತ vs ನ್ಯೂಜಿಲ್ಯಾಂಡ್​- 22 ಅಕ್ಟೋಬರ್, HPCA ಸ್ಟೇಡಿಯಂ, ಧರ್ಮಶಾಲಾ

ಭಾರತ vs ಇಂಗ್ಲೆಂಡ್- 29 ಅಕ್ಟೋಬರ್, ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋ

ಭಾರತ vs ಶ್ರೀಲಂಕಾ- 2 ನವೆಂಬರ್, ವಾಂಖೆಡೆ ಸ್ಟೇಡಿಯಂ, ಮುಂಬೈ

ಭಾರತ vs ದಕ್ಷಿಣ ಆಫ್ರಿಕಾ- 5 ನವೆಂಬರ್, ಈಡನ್ ಗಾರ್ಡನ್ಸ್, ಕೋಲ್ಕತ್ತಾ

ಭಾರತ vs ನೆದರ್ಲೆಂಡ್ಸ್​ – 12 ನವೆಂಬರ್, ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

Exit mobile version