Site icon Vistara News

ICC World Cup: ಶೀಘ್ರದಲ್ಲೇ ಚಿನ್ನಸ್ವಾಮಿ ಸ್ಟೇಡಿಯಂಗೆ ಹೈಟೆಕ್‌ ಸ್ಪರ್ಶ

Chinnaswamy Stadium bangalore

ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್‌ಗೆ(ICC World Cup 2023) ಆತಿಥ್ಯ ವಹಿಸಿಕೊಂಡಿರುವ ಕ್ರಿಕೆಟ್​ ಸ್ಟೇಡಿಯಂಗಳ ನವೀಕರಣದ ಕೆಲಸ ಬರದಿಂದ ಸಾಗುತ್ತಿದ್ದು ಕೆಲ ಸ್ಟೇಡಿಯಂಗಳ ಕೆಲಸ ಕಾರ್ಯ ಈಗಾಗಲೇ ಮುಕ್ತಾಯ ಕಂಡಿದೆ. ಬೆಂಗಳೂರಿನ(Bengaluru) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿಯೂ ನವೀಕರಣ ಕಾರ್ಯ ನಡೆಯುತ್ತಿದೆ. ಇಲ್ಲಿ 5 ವಿಶ್ವ ಕಪ್​ ಪಂದ್ಯಗಳು ನಡೆಯಲಿದೆ. ಬೇಸರದ ಸಂಗತಿ ಎಂದರೆ ಭಾರತ ಇಲ್ಲಿ ಒಂದೇ ಪಂದ್ಯ ಆಡಲಿದೆ. ಅದೂ ಕೂಟ ಅರ್ಹತಾ ಸುತ್ತಿನಿಂದ ಬಂದ ನೆದರ್ಲೆಂಡ್ಸ್​ ತಂಡದ ವಿರುದ್ಧ. ಈ ಪಂದ್ಯ ನವೆಂಬರ್​ 12ರಂದು ನಡೆಯಲಿದೆ.

ಹೊಸ ಸ್ಪರ್ಶ

ಈಗಾಗಲೇ ಬಿಸಿಸಿಐ ವಿಶ್ವಕಪ್ ಪಂದ್ಯಗಳು​ ನಡೆಯುವ ಕ್ರಿಕೆಟ್​ ಸಂಸ್ಥೆಗಳಿಗೆ ತಲಾ 50 ಕೋಟಿ ರು. ನೀಡಿದೆ. ನಗರದ ಚಿನ್ನಸ್ವಾಮಿ ಕ್ರೀಡಾಂಗಣ(Chinnaswamy Stadium) ಕೂಡಾ ಇದೇ ವೆಚ್ಚದಲ್ಲಿ ಹೊಸ ಸ್ಪರ್ಶ ಪಡೆದುಕೊಳ್ಳಲಿದೆ. ಈಗಾಗಲೇ ಕೆಲಸ ಆರಂಭವಾಗಿದೆ. ಈ ಸ್ಟೇಡಿಯಂನಲ್ಲಿರುವ ಕೆಲ ಮೂಲಸೌಕರ್ಯ ಸಮಸ್ಯೆನ್ನು ಸರಿಪಡಿಸುವುದರ ಜತೆಗೆ ಕ್ರೀಡಾಂಗಣಕ್ಕೆ ಹೊಸ ಸ್ಪರ್ಷ ನೀಡಲು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಮುಂದಾಗಿದೆ.

ತೂತು ಬಿದ್ದ ಮೇಲ್ಚಾವಣಿ

ದೇಶದ ಯಾವುದೇ ಕ್ರಿಕೆಟ್​ ಮೈದಾನದಲ್ಲಿಯೂ ಇಲ್ಲದ ಮಳೆ ಸುರಿದಾಗ ಬೇಗನೇ ನೀರನ್ನು ಹೀರಿಕೊಳ್ಳಲು ಸಬ್‌ ಏರ್‌ ಸಿಸ್ಟಮ್‌ ಇದ್ದರೂ ಕೂಡ ಇಲ್ಲಿನ ಮೇಲ್ಚಾವಣಿ ಮಾತ್ರ ತೂತು ಬಿದ್ದಿದೆ. ಕೊಡೆ ಇಲ್ಲವಾದಲ್ಲಿ ಪ್ರೇಕ್ಷಕರು ಒದ್ದೆಯಾಗಲೇ ಬೇಕಾದ ಸ್ಥಿತಿ ಇದೆ. ಇದೀಗ ಮೇಲ್ಚಾವಣಿ ಮೇಲ್ದರ್ಜೆಗೇರಿಸಲು ಕೆಎಸ್‌ಸಿಎ ನಿರ್ಧರಿಸಿದೆ. ಇದರ ಜತೆಗೆ ಆಸನಗಳ ನವೀಕರಣ, ಕ್ರೀಡಾಂಗಣದಲ್ಲಿರುವ ಶೌಚಾಲಯ, ಮಾಧ್ಯಮ ಕೇಂದ್ರದ ನವೀಕರಣ ಕೆಲಸವೂ ಸದ್ಯದಲ್ಲೇ ಪೂರ್ಣಗೊಳ್ಳಲಿದೆ ಎಂದು ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ತಿಳಿಸಿದ್ದಾರೆ.

ಡ್ರೆಸ್ಸಿಂಗ್‌ ರೂಂ ಸೌಕರ್ಯ ಉತ್ತಮವಾಗಿದೆ

ಈ ಕ್ರೀಡಾಂಗಣಕ್ಕೆ 2 ವರ್ಷಗಳ ಹಿಂದಷ್ಟೇ ಹೊಸದಾಗಿ ಎಲ್‌ಇಡಿ ಫ್ಲಡ್‌ಲೈಟ್‌ಗಳನ್ನು, ಆಟಗಾರರ ಡ್ರೆಸ್ಸಿಂಗ್‌ ಕೋಣೆಯನ್ನು ನವೀಕರಿಸಲಾಗಿತ್ತು. ಪಿಚ್‌ ಕೂಡ ಹೊಸದಾಗಿಯೇ ನಿರ್ಮಿಸಲಾಗಿದೆ ಹೀಗಾಗಿ ಇದರಲ್ಲಿ ಯಾವುದೇ ಬದಲಾವಣೆಯನ್ನು ಮಾಡುವುದಿಲ್ಲ ಎಂದು ಎಂದು ಕೆಎಸ್‌ಸಿಎ ತಿಳಿಸಿದೆ. ಕ್ರೀಡಾಂಗಣದ ನವೀಕರಣ ಕಾರ್ಯ ಮುಂದಿನ ವಾರ ಆರಂಭಿಸುವ ಸಾಧ್ಯತೆ ಇದೆ.

ಇದನ್ನೂ ಓದಿ IPL 2023: ಆರ್‌ಸಿಬಿ ಪಂದ್ಯದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲೂ ಮೋದಿ ಹವಾ; ಇಲ್ಲಿದೆ ವಿಡಿಯೊ

ಬೇರೆ ಸ್ಟೇಡಿಯಂನಲ್ಲಿ ಏನೇನು ಬದಲಾವಣೆ

1. ದೆಹಲಿಯ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ಹೊಸ ಶೌಚಾಲಯಗಳ ನಿರ್ಮಾಣ, ಆಸನಗಳ ಸಂಖ್ಯೆ ಹೆಚ್ಚಳ.

2. ವಾಂಖೇಡೆ ಕ್ರೀಡಾಂಗಣದಲ್ಲಿ ಎಲ್‌ಇಡಿ ಫ್ಲಡ್‌ಲೈಟ್ಸ್, ಕಾರ್ಪೋರೇಟ್ ಬಾಕ್ಸ್ ಬದಲಾವಣೆ

3. ಕೋಲ್ಕತಾದ ಈಡನ್ ಗಾರ್ಡನ್ಸ್‌ನ ಡ್ರೆಸ್ಸಿಂಗ್ ರೂಂ ಮೇಲ್ದರ್ಜೆಗೆ

4. ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಹೊಸ ಪಿಚ್‌ಗಳ ನಿರ್ಮಾಣ. ಈ ಬಾರಿ ಐಪಿಎಲ್​ ಪಂದ್ಯದ ವೇಳೆ ಇಲ್ಲಿನ ಪಿಚ್​ ತೀರಾ ಕಳಪೆ ಮಟ್ಟದಿಂದ ಕೂಡಿತ್ತು.

5. ಚೆನ್ನೈನಲ್ಲಿ ಕೆಂಪು ಮಣ್ಣಿನಿಂದ 2 ಹೊಸ ಪಿಚ್‌, ಹೊಸ ಎಲ್‌ಇಡಿ ಫ್ಲಡ್‌ಲೈಟ್ಸ್ ಸೇರಿ ಸಣ್ಣ ಮಟ್ಟಿನಲ್ಲಿ ಆಸನ ಬದಲಾವಣೆ.

6. ಧರ್ಮಶಾಲಾದಲ್ಲಿ ಔಟ್‌ಫೀಲ್ಡ್‌ಗೆ ಇಂಪೋರ್ಟೆಡ್ ಹುಲ್ಲು, ಸುಧಾರಿತ ಒಳಚರಂಡಿ.

7. ಪುಣೆ ಕ್ರೀಡಾಂಗಣದ ಮೇಲ್ಚಾವಣಿ ಬದಲಾವಣೆ, ಪಿಚ್​ಗಳ ನವೀಕರಣ.​

Exit mobile version