Site icon Vistara News

ICC World Cup 2023: ಏಕದಿನ ವಿಶ್ವ ಕಪ್​ ವೇಳಾಪಟ್ಟಿ ಪ್ರಕಟಕ್ಕೆ ಕ್ಷಣಗಣನೆ

icc world cup 2023

ಮುಂಬಯಿ: ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವ ಕಪ್​ ಟೂರ್ನಿಯ(ICC World Cup 2023) ವೇಳಾಪಟ್ಟಿ(World Cup 2023 Schedule) ಪ್ರಕಟಕ್ಕೆ ಕ್ಷಣಗಣನೆ ಆರಂಭವಾಗಿದ್ದು ಇಂದು(ಮಂಗಳವಾರ) ಸಂಜೆ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ವೇಳಾಪಟ್ಟಿ ಪ್ರಕಟಗೊಳ್ಳಿದೆ ಎಂದು ಬಿಸಿಸಿಐ(BCCI) ಮೂಲಕಗಳು ತಿಳಿಸಿವೆ.

ವಿಶ್ವ ಕಪ್​ ಟೂರ್ನಿಗೆ ಇಂದಿನಿಂದ ಭರ್ತಿ 100 ದಿನಗಳು ಬಾಕಿ ಇರುವಂತೆ ಈ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಲು ಬಿಸಿಸಿಐ ನಿರ್ಧರಿಸಿದೆ. ವೇಳಾಪಟ್ಟಿ ಬಿಡುಗಡೆ ಸಂದರ್ಭದಲ್ಲಿ ಬಿಸಿಸಿಐ ಅಧಿಕಾರಿಗಳು ಮತ್ತು ಮಾಜಿ ಕ್ರಿಕೆಟಿಗರು ಪಾಲ್ಗೊಳ್ಳಲಿದ್ದು ಅದ್ಧೂರಿ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ(Jay Shah) ಹೇಳಿದ್ದಾರೆ. ಈ ಕಾರ್ಯಕ್ರಮದ ಕುರಿತು ಅವರು ಟ್ವಿಟರ್​ನಲ್ಲಿ ವಿಶೇಷ ವಿಡಿಯೊವೊಂದನ್ನು ಕೂಡ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ ICC World Cup 2023: ಏಕದಿನ ವಿಶ್ವ ಕಪ್​ ವೇಳಾಪಟ್ಟಿ ಪ್ರಕಟಕ್ಕೆ ದಿನಾಂಕ ನಿಗದಿ!

ಈ ಹಿಂದೆ ಪಾಕಿಸ್ತಾನ ಕ್ರಿಕೆಟ್​ ಮಂಡಳಿ(PCB) ಅಹಮದಾಬಾದ್​ ಸೇರಿ ಕೆಲ ಮೈದಾನದಲ್ಲಿ ಆಡಲು ಹಿಂದೇಟು ಹಾಕಿತ್ತು. ಆದರೆ ಐಸಿಸಿ ಮಾತುಕತೆ ನಡೆಸಿದ ಬಳಿಕ ಈ ಸಮಸ್ಯೆ ಬಗೆಹರಿದಿದ್ದು ಪಾಕ್ ಪೂರ್ವ ನಿರ್ಧರಿತ ವೇಳಾಪಟ್ಟಿ ಪ್ರಕಾರ ಆಡಲು ಒಪ್ಪಿಕೊಂಡಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಭಾರತ ಮತ್ತು ಪಾಕ್​ ವಿರುದ್ಧದ ಮೊದಲ ಲೀಗ್​ ಪಂದ್ಯ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲೇ ನಡೆಯಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ವೇಳಾಪಟ್ಟಿ ಪ್ರಕಟಕ್ಕೂ ಮುನ್ನವೇ ಈ ವಿಚಾರವನ್ನು ತಿಳಿಸಿದ್ದಾರೆ.

ಬೆಂಗಳೂರಿಗೆ ತಪ್ಪಿದ ಸುವರ್ಣ ಅವಕಾಶ

​ಬೆಂಗಳೂರಿನಲ್ಲಿ ನಡೆಯಬೇಕಾಗಿದ್ದ ಸೆಮಿಫೈನಲ್ ಪಂದ್ಯವೊಂದು ಕೋಲ್ಕೊತಾಗೆ ಶಿಫ್ಟ್​ ಆಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಕೊನೆಯ ಕ್ಷಣದಲ್ಲಿ ಸ್ಥಳವನ್ನು ಬದಲಾಯಿಸಿದೆ. ಕೋಲ್ಕತಾದ ಈಡನ್ ಗಾರ್ಡನ್ಸ್ ಒಂದು ಸೆಮಿಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಿದರೆ, ಮುಂಬಯಿಯ ವಾಂಖೆಡೆ ಸ್ಟೇಡಿಯಂ ಮತ್ತೊಂದು ಸೆಮಿಫೈನಲ್​ಗೆ ಆತಿಥ್ಯ ವಹಿಸಲಿದೆ. ಈ ಹಿಂದೆ ಮುಂಬೈ, ಚೆನ್ನೈ ಅಥವಾ ಬೆಂಗಳೂರಿನಲ್ಲಿ ಸೆಮಿಫೈನಲ್ ನಡೆಯುವ ಯೋಜನೆ ಇತ್ತು. ಆದರೆ, ನವೆಂಬರ್​ನಲ್ಲಿ ಬೆಂಗಳೂರಿನಲ್ಲಿ ಮಳೆ ಬರಬಹುದು ಎಂಬ ನಿರೀಕ್ಷೆಯೊಂದಿಗೆ ಕೋಲ್ಕೊತಾಗೆ ವರ್ಗಾಯಿಸಲಾಗಿದೆ.

ಇದನ್ನೂ ಓದಿ ICC World Cup 2023: ನ್ಯೂಜಿಲ್ಯಾಂಡ್​ ತಂಡಕ್ಕೆ ಆಘಾತ; ಏಕದಿನ ವಿಶ್ವ ಕಪ್​ಗೆ ನಾಯಕ ಕೇನ್ ವಿಲಿಯಮ್ಸನ್ ಅನುಮಾನ

ಕ್ರಿಕ್​ಬಜ್​ ವರದಿಯ ಪ್ರಕಾರ, ಬದಲಾವಣೆ ನಡೆಯುವುದು ಖಚಿತ. ಆದರೆ, ಪಂದ್ಯಾವಳಿ ನಡೆಯುತ್ತಿರುವ ನಡುವೆಯೇ ಅದು ನಿರ್ಧಾರವಾಗಲಿದೆ ಎಂದು ವರದಿ ಮಾಡಿದೆ. ಮುಂಬೈನ ವಾಂಖೆಡೆ ಮತ್ತು ಕೋಲ್ಕತಾದ ಈಡನ್ ಗಾರ್ಡನ್ಸ್ ವಿಶ್ವಕಪ್ ಸೆಮಿಫೈನಲ್​​ಗೆ ಎರಡು ಸಂಭವನೀಯ ಸ್ಥಳಗಳಾಗಿವೆ. ಈ ಹಿಂದೆ ಚೆನ್ನೈ ಕೂಡ ರೇಸ್​ನಲ್ಲಿತ್ತು. ಈ ರೇಸ್​ನಲ್ಲಿ ಬೆಂಗಳೂರು ಕೂಡ ಹಿಂದೆ ಬಿದ್ದಿದೆ ಎಂಬುದಾಗಿ ಎಂದು ಬಿಸಿಸಿಐ ಮೂಲಗಳು ಸೋಮವಾರ ಪಿಟಿಐಗೆ ತಿಳಿಸಿವೆ.

ಭಾರತ ತಂಡ ಸೆಮಿಫೈನಲ್​ಗೆ ಅರ್ಹತೆ ಪಡೆದರೆ ಮುಂಬಯಿಯ ವಾಂಖೆಡೆ ಸ್ಟೇಡಿಯಮ್​ನಲ್ಲಿ ಈ ಪಂದ್ಯ ನಡೆಯಲಿದೆ. ಚೆನ್ನೈ ಮತ್ತೊಂದು ನೆಚ್ಚಿನ ಸ್ಟೇಡಿಯಮ್​ ಆಗಿತ್ತು. ಸ್ಪಿನ್​ ಪಿಚ್​ನಲ್ಲಿ ಭಾರತ ತಂಡಕ್ಕೆ ನೆರವು ಸಿಗುತ್ತಿತ್ತು ಎಂಬ ಲೆಕ್ಕಾಚಾರವೂ ಇಲ್ಲಿದೆ. ಇನ್ನು ಬೆಂಗಳೂರಿನ ಪಿಚ್​ನಲ್ಲೂ ಪಂದ್ಯವನ್ನು ಆಯೋಜಿಸಿ ಬ್ಯಾಟರ್​ಗಳ ಸ್ವರ್ಗದಲ್ಲಿ ಅಭಿಮಾನಿಗಳಿಗೆ ಖುಷಿ ಕೊಡುವ ಯೋಜನೆಯಿತ್ತು. ಆದರೆ ನವೆಂಬರ್ ಮಳೆ ಎಲ್ಲ ನಿರೀಕ್ಷೆಗಳನ್ನು ಸುಳ್ಳು ಮಾಡಿದೆ. ಫೈನಲ್​ ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ವಿಶ್ವಕಪ್ 2023 ಸ್ಥಳಗಳು

Exit mobile version