Site icon Vistara News

ICC World Cup: ಏಕದಿನ ವಿಶ್ವಕಪ್​ಗೆ ತಂಡಗಳ ಪ್ರಕಟಕ್ಕೆ ದಿನಾಂಕ ನಿಗದಿ; ಭಾರತಕ್ಕೆ ಗಾಯದ ಚಿಂತೆ

World Cup trophy

ದುಬೈ: ಪುರುಷರ ಏಕದಿನ ವಿಶ್ವಕಪ್​ ಟೂರ್ನಿ(ICC World Cup) ಆರಂಭಕ್ಕೆ ಇನ್ನು ಎರಡು ತಿಂಗಳು ಬಾಕಿ ಉಳಿದಿವೆ. ಈ ಮಹತ್ವದ ಟೂರ್ನಿ ಅಕ್ಟೋಬರ್​ 5ರಿಂದ ನವೆಂಬರ್​ 19ರ ವರೆಗೆ ಭಾರತದ ಆತಿಥ್ಯದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳುವ 10 ತಂಡಗಳ ಆಯ್ಕೆಗೆ ಐಸಿಸಿ ದಿನಾಂಕ ನಿಗದಿ ಪಡಿಸಿದೆ.(squad submission deadline) ಸೆಪ್ಟಂಬರ್‌ 5ರ ಒಳಗೆ ಎಲ್ಲ ತಂಡಗಳ ಪಟ್ಟಿಯನ್ನು ಕಳುಹಿಸುವಂತೆ ಸೂಚಿಸಿದೆ. ಆದರೆ ಭಾರತ ಸಂಕಷ್ಟಕ್ಕೆ ಸಿಲುಕಿದೆ.

ಗಾಯದ ಸಮಸ್ಯೆಯಿಂದ ಹಲವು ಸ್ಟಾರ್​ ಆಟಗಾರರು ತಂಡದಿಂದ ಹೊರಗುಳಿದಿದ್ದಾರೆ. ತಂಡ ಪ್ರಕಟಕ್ಕೆ ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿವೆ. ಗಾಯಗೊಂಡಿರುವ ಆಟಗಾರರ ಲಭ್ಯತೆ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲವಾದ್ದರಿಂದ ಆತಿಥೇಯ ಭಾರತ ಸಂಕಷ್ಟಕ್ಕೆ ಸಿಲುಕಿದೆ. ತರಾತುರಿಯಲ್ಲಿ ತಂಡ ಪ್ರಕಟಿಸಿದರೂ ಒಂದೊಮ್ಮೆ ಈ ಆಟಗಾರರು ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗದೆ ಅಲಭ್ಯರಾದರೆ ದೊಡ್ಡ ಹೊಡೆತ ಬೀಳಲಿದೆ. ಒಟ್ಟಾರೆ ಭಾರತಕ್ಕೆ ಗಾಯದ ಚಿಂತೆಯೊಂದು ವಿಶ್ವಕಪ್​ಗೆ ತೊಂದರೆಯಾಗಿ ಪರಿಣಮಿಸಿದೆ.

ಸ್ಟಾರ್​ ಆಟಗಾರ ರಿಷಭ್ ಪಂತ್​ ಕಾರು ಅಪಘಾತದಲ್ಲಿ ಗಾಯಗೊಂಡು ಕ್ರಿಕೆಟ್​ನಿಂದ ದೂರ ಉಳಿದಿದ್ದಾರೆ. ಕೆ.ಎಲ್​. ರಾಹುಲ್​ ಮತ್ತು ಶ್ರೇಯಸ್​ ಅಯ್ಯರ್​ ಕೂಡ ಗಾಯದಿಂದ ಚೇತರಿಸಿಕೊಂಡಿದ್ದರೂ ಇನ್ನೂ ತಂಡಕ್ಕೆ ಆಗಮಿಸಿಲ್ಲ. ಏಷ್ಯಾ ಕಪ್​ನಲ್ಲಿಯೂ ಉಭಯ ಆಟಗಾರರು ಆಡುವುದು ಅನುಮಾನ ಎನ್ನಲಾಗಿದೆ, ಹೀಗಿರುವಾಗ ತಂಡವನ್ನು ಪ್ರಕಟಿಸುವುದು ಹೇಗೆ ಎಂಬ ದೊಡ್ಡ ಚಿಂತೆಯೊಂದು ಬಿಸಿಸಿಐಗೆ ಕಾಡಲಾರಂಭಿಸಿದೆ.

ಇದನ್ನೂ ಓದಿ ICC World Cup: ಪಾಕ್​ ವಿರುದ್ಧ ಭಾರತಕ್ಕೆ ಸೋಲು ಖಚಿತ; ರೋಹಿತ್​ ಪಡೆಗೆ ಎಚ್ಚರಿಕೆ ನೀಡಿದ ಮಾಜಿ ನಾಯಕ

ಬೆನ್ನು ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸರಿ ಸುಮಾರು ಒಂದು ವರ್ಷದ ಬಳಿಕ ತಂಡಕ್ಕೆ ಮರಳಿರುವ ಜಸ್​ಪ್ರೀತ್​ ಬುಮ್ರಾ ಅವರು ಐರ್ಲೆಂಡ್​ ವಿರುದ್ಧದ ಸರಣಿಗೆ ಆಯ್ಕೆ ಆಗಿದ್ದಾರೆ. ಆದರೆ ಅವರು ಈ ಹಿಂದಿನ ಫಾರ್ಮ್​ನಲ್ಲಿದ್ದಾರೆಯೇ ಎಂದು ಇನ್ನಷ್ಟೇ ತಿಳಿಯಬೇಕಿದೆ. ಒಂದೊಮ್ಮೆ ಭಾರತ ಸಂಭಾವ್ಯ ಆಟಗಾರರ ಪಟ್ಟಿಯನ್ನು ಸೆಪ್ಟೆಂಬರ್​ 5ಕ್ಕೆ ಕಳುಹಿಸಿದರೂ. ಇದನ್ನು ಬದಲಿಸಲು ಐಸಿಸಿ ಅವಕಾಶ ಕಲ್ಪಿಸಿದೆ. ಆದರೆ ಈ ಬದಲಾವಣೆಯನ್ನು ವಿಶ್ವಕಪ್‌ ಆರಂಭಕ್ಕೆ ಒಂದು ವಾರ ಮುಂಚಿತವಾಗಿ ಮಾಡಬೇಕಾಗಿದೆ. ಅನಂತರ ಆಟಗಾರರ ಬದಲಾವಣೆಗೆ ಯಾರಾದರು ಗಾಯಗೊಂಡರೆ ಮಾತ್ರ ಆಟಗಾರನ ಬದಲಾವಣೆಗೆ ಅವಕಾಶವಿರಲಿದೆ. ಭಾರತ ತನ್ನ ಮೊದಲ ವಿಶ್ವಕಪ್​ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ಅಭಿಯಾನವನ್ನು ಆರಂಭಿಸಲಿದೆ. ಈ ಪಂದ್ಯ ಅಕ್ಟೋಬರ್​ 8ರಂದು ಚೆನ್ನೈಯಲ್ಲಿ ನಡೆಯಲಿದೆ.​

Exit mobile version