Site icon Vistara News

Disney+ Hotstar: ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಲಿದೆ ಹಾಟ್ ಸ್ಟಾರ್

World Cup And Asia Cup

ಮುಂಬಯಿ: 16ನೇ ಆವೃತ್ತಿಯ ಐಪಿಎಲ್​ ಟೂರ್ನಿಯ ಪ್ರಸಾರವನ್ನು ಉಚಿತವಾಗಿ ನೀಡಿದ ಜಿಯೋ ಸಿನಿಮಾಕ್ಕೆ ಇದೀಗ ಹಾಡ್​ ಸ್ಟಾರ್​ ಸೆಡ್ಡು ಹೊಡೆಯಲು ನಿರ್ಧರಿಸಿದ್ದು, ಈ ವರ್ಷ ನಡೆಯುವ ಪ್ರಮುಖ ಕ್ರಿಕೆಟ್ ಟೂರ್ನಿಗಳಾದ ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ ಪಂದ್ಯಾವಳಿಗಳನ್ನು ಉಚಿತವಾಗಿ ನೀಡಲಿದೆ. ಈ ಮೂಲಕ ಮತ್ತೆ ಕ್ರಿಕೆಟ್​ ಪ್ರೇಕ್ಷಕರನ್ನು ಸೆಳೆಯಲು ತಂತ್ರ ರೂಪಿಸಿದೆ.

ಐಪಿಎಲ್​ ಟೂರ್ನಿಯನ್ನು ಎಲ್ಲ ಜಿಯೋ ಸಿಮ್​ ಬಳಕೆದಾರರು ಉಚಿತವಾಗಿ ವೀಕ್ಷಣೆ ಮಾಡಿದ್ದರು. ದಾಖಲೆಯ ಜಾಹೀರಾತುದಾರನ್ನು ಪಡೆದುಕೊಂಡ ಜಿಯೋ ಸಂಸ್ಥೆ ಇದರಿಂದ ಭರ್ಜರಿ ಆಧಾಯಗಳಿಸಿತ್ತು. ಐಪಿಎಲ್​ ಫೈನಲ್​ ಪಂದ್ಯವನ್ನು 3.2 ಕೋಟಿ ಜನರು ಓಟಿಟಿ ಪರದೆಯ ಮೇಲೆ ವೀಕ್ಷಣೆ ಮಾಡಿದ್ದರು.

ಇದೀಗ ಜಿಯೋಗೆ ಪೈಪೋಟಿ ನೀಡಲು ಮಂದಾದ ಡಿಸ್ನಿ- ಸ್ಟಾರ್ ಮೊಬೈಲ್ ಬಳಕೆದಾರರಿಗೆ ಈ ಮಹತ್ವದ ಟೂರ್ನಿಯನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲು ನಿರ್ಧರಿಸಿದೆ. ಪ್ರಸ್ತುತ ಋತುವಿಗೆ 3.04 ಬಿಲಿಯನ್ ಡಾಲರ್ ಪಾವತಿಸಿರುವ ಡಿಸ್ನಿ-ಸ್ಟಾರ್ ಐಸಿಸಿ ಪಂದ್ಯಾವಳಿಗಳ ಡಿಜಿಟಲ್ ಮತ್ತು ಟಿವಿ ಹಕ್ಕುಗಳನ್ನು ಹೊಂದಿದೆ. ಆದರೆ ಟಿವಿ ವೀಕ್ಷಕರಿಗೆ, ಈ ಎರಡೂ ಪಂದ್ಯಾವಳಿಗಳನ್ನು ಉಚಿತವಾಗಿ ನೋಡಲು ಅವಕಾಶವಿರುದಿಲ್ಲ.

ಇದನ್ನೂ ಓದಿ ICC World Cup 2023: ಏಕದಿನ ವಿಶ್ವಕಪ್‌ ವೇಳಾಪಟ್ಟಿ ಬಿಡುಗಡೆಗೆ ಮುಹೂರ್ತ ನಿಗದಿ

“ಡಿಸ್ನಿ+ ಹಾಟ್ ಸ್ಟಾರ್ ಭಾರತದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಓಟಿಟಿ ಉದ್ಯಮದಲ್ಲಿ ಮುಂಚೂಣಿಯಲ್ಲಿದೆ. ನಾವು ಪರಿಚಯಿಸಿದ ವಿವಿಧ ಆವಿಷ್ಕಾರಗಳು ದೇಶಾದ್ಯಂತ ನಮ್ಮ ಪ್ರೇಕ್ಷಕರನ್ನು ಸಂತೋಷಪಡಿಸಲು ನಮಗೆ ಅವಕಾಶ ಮಾಡಿಕೊಟ್ಟಿವೆ. ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ ಟೂರ್ನಿ ಹೆಚ್ಚಿನ ಪ್ರೇಕ್ಷಕರಿಗೆ ತಲುಪುವಂತೆ ಮಾಡುವ ದೃಷ್ಟಿಯಿಂದ ನಾವು ಈ ನಿರ್ಧಾರ ಕೈ್ಒಂಡಿದ್ದೇವೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಇರಲಿದೆ ಎಂದು ನಾವು ನಂಬುತ್ತೇವೆ” ಎಂದು ಡಿಸ್ನಿ+ ಹಾಟ್‌ ಸ್ಟಾರ್‌ ಮುಖ್ಯಸ್ಥ ಸಜಿತ್ ಶಿವಾನಂದನ್ ಹೇಳಿದ್ದಾರೆ.

Exit mobile version