Site icon Vistara News

ICC World Cup Qualifiers: ಕೈಲ್ ಫಿಲಿಪ್ ಬೌಲಿಂಗ್​ಗೆ ನಿಷೇಧ ವಿಧಿಸಿದ ಐಸಿಸಿ

USA fast bowler Kyle Phillip

ಹರಾರೆ: ಐಸಿಸಿ ಏಕದಿನ ವಿಶ್ವ ಕಪ್​ ಕ್ವಾಲಿಫೈಯರ್(ICC World Cup Qualifiers) ಪಂದ್ಯ ಆಡುತ್ತಿದ್ದ ಅಮೆರಿಕ(USA) ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಈಗಾಗಲೇ ಮೂರು ಪಂದ್ಯಗಳಲ್ಲಿ ಸೋಲು ಕಂಡಿರುವ ತಂಡಕ್ಕೆ ಆಘಾತವೊಂದು ಎದುರಾಗಿದೆ. ತಂಡದ ಸ್ಟಾರ್​ ಬೌಲರ್​ ಆಗಿದ್ದ ಕೈಲ್ ಫಿಲಿಪ್(Kyle Phillip) ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಬೌಲಿಂಗ್​ನಿಂದ ಅಮಾನತುಗೊಳಿಸಲಾಗಿದೆ. ಹೀಗಾಗಿ ಅವರ ಬೌಲಿಂಗ್​ ಸೇವೆಯನ್ನು ತಂಡ ಕಳೆದುಕೊಂಡಿದೆ.

ವಿಂಡೀಸ್​ ವಿರುದ್ಧ ಆರಂಭಿಕ ಪಂದ್ಯದಲ್ಲಿ ಅಮೆರಿಕ ತಂಡ ಸೋಲು ಕಂಡರೂ ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಫಿಲಿಪ್ ಅವರು 56 ರನ್ ನೀಡಿ ಪ್ರಮುಖ 3 ವಿಕೆಟ್ ಉರುಳಿಸಿದ್ದರು. ಪಂದ್ಯದ ಬಳಿಕ ಅವರ ಬೌಲಿಂಗ್​ ತುಣುಕನ್ನು ಪರಿಶೀಲಿಸಿದ ಐಸಿಸಿ ಅವರು ಅಕ್ರಮ ಶೈಲಿಯ ಬೌಲಿಂಗ್​ ನಡೆಸುತ್ತಿದ್ದಾರೆ ಎಂದು ಈ ಕ್ರಮವನ್ನು ಕೈಗೊಂಡಿದೆ.

ಇದನ್ನೂ ಓದಿ Asia cup 2022 | ಟಿ 20 ವಿಶ್ವಕಪ್‌ಗೂ ಮೊದಲು ಮತ್ತೊಂದು ಹೈವೋಲ್ಟೇಜ್‌ ಪಂದ್ಯ, ಆ.28ಕ್ಕೆ ಭಾರತ vs ಪಾಕಿಸ್ತಾನ ಮ್ಯಾಚ್

“ಆಟದ ನಿಯಮಗಳ ಪ್ರಕಾರ 6.7 ನಿಯಮದ ಅಡಿ ಅವರನ್ನು ಅಮಾನತು ಮಾಡಲಾಗಿದೆ” ಹೀಗಾಗಿ ಅವರನ್ನು ತಕ್ಷಣವೇ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಬೌಲಿಂಗ್​ನಿಂದ ಅಮಾನತುಗೊಳಿಸಲಾಗಿದೆ. ಅವರ ಬೌಲಿಂಗ್ ಕ್ರಿಯೆಯನ್ನು ಮರು-ಪರೀಕ್ಷೆಗೆ ಒಳಪಡಿಸಿ ಕಾನೂನಾತ್ಮಕವಾಗಿ ಸರಿ ಇದೆ ಎಂದು ಒಪ್ಪಿಗೆ ಪಡೆದ ನಂತರವಷ್ಟೇ ಅವರಿಗೆ ಮತ್ತೆ ಬೌಲಿಂಗ್​ ಮಾಡಲು ಅವಕಾಶ ನೀಡಲಾಗುತ್ತದೆ” ಎಂದು ಐಸಿಸಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ‘ಎ’ ಗುಂಪಿನಲ್ಲಿರುವ ಅಮೆರಿಕ​ ತಂಡ ಈಗಾಗಲೇ ಆಡಿದ ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ.

ವಿಶ್ವ ಕಪ್​ ಅರ್ಹತಾ ಸುತ್ತಿನಲ್ಲಿ ಒಟ್ಟು ಹತ್ತು ತಂಡಗಳು ಭಾಗವಹಿಸುತ್ತಿದ್ದು, ಗೆದ್ದ ಮತ್ತು ರನ್ನರ್​ ಅಪ್​ ತಂಡ ವಿಶ್ವಕಪ್​ ಸ್ಪರ್ಧೆಗೆ ಅರ್ಹತೆ ಪಡೆದುಕೊಳ್ಳಲಿದೆ. ಈ ಎರಡು ಸ್ಥಾನಗಳಿಗೆ ಶ್ರೀಲಂಕಾ, ವೆಸ್ಟ್​ ಇಂಡೀಸ್​, ಜಿಂಬಾಬ್ವೆ, ನೇಪಾಳ, ಯುಎಇ, ಯುಎಸ್​ಎ, ನೆದರ್​ಲ್ಯಾಂಡ್, ಐರ್ಲೆಂಡ್,​ ಸ್ಕಾಟ್​ಲ್ಯಾಂಡ್​ ಮತ್ತು ಒಮನ್​ ತಂಡಗಳು ಸ್ಪರ್ಧಿಸುತ್ತಿವೆ.

Exit mobile version