ಮುಂಬಯಿ: ಭಾರತ ತಂಡದ ಸೆಮಿಫೈನಲ್ ಪಂದ್ಯದ ತಾಣ ಈಗಾಗಲೇ ನಿಗದಿಯಾಗಿದೆ. ಆದರೆ ಎದುರಾಳಿ ಯಾರೆಂದು ಇನ್ನಷ್ಟೇ ತಿಳಿಯಬೇಕಿದೆ. ಭಾರತ ತಂಡ ತನ್ನ ಸೆಮಿಫೈನಲ್ ಪಂದ್ಯದನ್ನು ಮುಂಬಯಿಯ ವಾಂಖೆಡೆ(India at Wankhede) ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡಲಿದೆ. ಈ ಪಂದ್ಯದ ಟಿಕೆಟ್‌ಗಳು ಈಗಾಗಲೇ ಸೋಲ್ಡ್ ಔಟ್(ICC World Cup semi-final tickets) ಆಗಿದ್ದರೂ ವಯಾಗೊಗೊ ವೆಬ್ ಸೈಟ್ನಲ್ಲಿ 3 ಲಕ್ಷಕ್ಕೆ ಟಿಕೆಟ್ ಲಭ್ಯವಿರುವುದು ಬೆಳಕಿಗೆ ಬಂದಿದೆ.
16 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಭಾರತ ಅಂತಿಮ ಪಂದ್ಯವನ್ನು ನೆದರ್ಲೆಂಡ್ಸ್ ವಿರುದ್ಧ ಆಡಲಿದೆ. ಆದರೆ ಭಾರತಕ್ಕಿಂತ ಇನ್ನು ಯಾವ ತಂಡಕ್ಕೂ ಅಧಿಕ ಅಂಕ ಸಂಪಾದಿಸಲು ಸಾಧ್ಯವಿಲ್ಲ ಹೀಗಾಗಿ ಭಾರತದ ಸೆಮಿಫೈನಲ್ ತಾಣ ನಿಗದಿಯಾಗಿದೆ. ಭಾರತ ತಂಡ ನಾಲ್ಕನೇ ಸ್ಥಾನ ಪಡೆದ ತಂಡವನ್ನು ಸೆಮಿಫೈನಲ್ ಪಂದ್ಯದಲ್ಲಿ ಎದುರಿಸಲಿದೆ.
𝙄𝙉𝙏𝙊 𝙏𝙃𝙀 𝙎𝙀𝙈𝙄𝙎! 🙌#TeamIndia 🇮🇳 becomes the first team to qualify for the #CWC23 semi-finals 👏👏#MenInBlue | #INDvSL pic.twitter.com/wUMk1wxSGX
— BCCI (@BCCI) November 2, 2023
ಮೂಲಗಳ ಪ್ರಕಾರ ಭಾರತ ತಂಡದ ಸೆಮಿಫೈನಲ್ನ ಎಲ್ಲ ಟಿಕೆಟ್‌ಗಳು ಬುಕ್ಮೈ ಶೋದಲ್ಲಿ ಸೋಲ್ಡ್ ಔಟ್ ಆಗಿದೆ ಎಂದು ವರದಿಯಾಗಿದೆ. ಆದರೆ ಜಾಗತಿಕ ಆನ್‌ಲೈನ್ ಪ್ಲಾಟ್‌ಫಾರ್ಮ್” ವಯಾಗೋಗೋದಲ್ಲಿ(Viagogo) ಒಂದು ಟಿಕೆಟ್ನ ದರ ಮೂರು ಲಕ್ಷಕ್ಕೆ ಲಭ್ಯವಿದೆ ಎಂದು ತಿಳಿದುಬಂದಿದೆ.
ಲಭ್ಯವಿರುವ ಟಿಕೆಟ್
ಸುನಿಲ್ ಗವಾಸ್ಕರ್ ಪೆವಿಲಿಯನ್ ಕೆ (ಸಾಲು ಕೆ)ಯಲ್ಲಿ ಎರಡು ಟಿಕೆಟ್‌ಗಳು ತಲಾ 299,371 ರೂಗೆ ಲಭ್ಯವಿವೆ. ಉತ್ತರ ಸ್ಟ್ಯಾಂಡ್ W (ಸಾಲು L1) ನಲ್ಲಿ ಎರಡು ಟಿಕೆಟ್‌ಗಳು ತಲಾ 224,529 ರೂ.ಗೆ ಲಭ್ಯವಿವೆ. ಸುನಿಲ್ ಗವಾಸ್ಕರ್ ಪೆವಿಲಿಯನ್ ಎಫ್‌ನಲ್ಲಿ 165,154 ರೂ.ಗೆ ಒಂದು ಟಿಕೆಟ್ ಲಭ್ಯವಿದೆ. ಎಂದು ವರದಿಯಾಗಿದೆ.
ಇದನ್ನೂ ಓದಿ ICC World Cup 2023 : ದ. ಆಫ್ರಿಕಾ ವಿರುದ್ಧ ಭಾರತದ ಭರ್ಜರಿ ಜಯದ ಬಳಿಕ ಅಂಕಪಟ್ಟಿಯಲ್ಲಾದ ಬದಲಾವಣೆಯೇನು?
ಅಗ್ಗದ ದರಕ್ಕೂ ಲಭ್ಯ
ಒಂದೊಮ್ಮೆ ದುಬಾರಿ ಬೆಲೆಯ ಟಿಕೆಟ್ ಕೊಂಡುಕೊಳ್ಳಲು ಸಾಧ್ಯವಾಗದಿದ್ದಲ್ಲಿ ಅಗ್ಗದ ಟಿಕೆಟ್ ಕೂಡ ಲಭ್ಯವಿದೆ. ಕಡಿಮೆ ಶ್ರೇಣಿ ಮತ್ತು ಮಧ್ಯಮ ಶ್ರೇಣಿಯ ತಲಾ ಒಂದು ಟಿಕೆಟ್ ಕ್ರಮವಾಗಿ 102,909 ರೂ. ಮತ್ತು 133,782 ರೂ.ಗೆ ಲಭ್ಯವಿದೆ ಎಂದು ವಯಾಗೋಗೋ ತಿಳಿಸಿದೆ. ಆದರೆ ಈ ಟಿಕೆಟ್ ಮಧ್ಯಮ ವರ್ಗದವರು ಕೊಂಡುಕೊಳ್ಳಲು ಅಸಾಧ್ಯವಾಗಿದೆ.
ಬಿಸಿಸಿಐಗೆ ಟಿಕೆಟ್ ಹಂಚಿಕೆ ಏಕೆ ಸಮಸ್ಯೆ?
ಟಿಕೆಟ್ ಬ್ಲ್ಯಾಕ್ನಲ್ಲಿ ಮಾರಾಟ ಮಾಡಿದ ಪ್ರಕರಣದಲ್ಲಿ ಕೋಲ್ಕತಾ ಪೊಲೀಸರು ಈವರೆಗೆ 19 ಜನರನ್ನು ಬಂಧಿಸಿದ್ದು, ಅವರಿಂದ 108 ಟಿಕೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ, ಅವರು ಟಿಕೆಟ್ ಮೋಸಕ್ಕೆ ಸಂಬಂಧಿಸಿದ ಏಳು ಪ್ರಕರಣಗಳನ್ನು ದಾಖಲಿಸಿದ್ದಾರೆ. ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಮತ್ತು ಕ್ರಿಕೆಟ್ ಟಿಕೆಟ್ ಗಳ ಕಾಳಸಂತೆಯನ್ನು ನಿಗ್ರಹಿಸಲು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ಟಿಕೆಟ್ ಸಂಗ್ರಹ ಮಾಡಿಟ್ಟುಕೊಳ್ಳುವುದು ಅಭಿಮಾನಿಗಳು ಟಿಕೆಟ್ಗಳಿಗೆ ಅನಗತ್ಯ ಬೆಲೆಯನ್ನು ಪಾವತಿಸಲು ಕಾರಣವಾಗುತ್ತದೆ. ಹೆಚ್ಚಿನ ದರದಲ್ಲಿ ಟಿಕೆಟ್ಗಳನ್ನು ಖರೀದಿಸಲು ಸಾಧ್ಯವಾಗುವವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಪೊಲೀಸರ ಈ ಕ್ರಮ ಮತ್ತು ಬಿಸಿಸಿಐ ಅಧ್ಯಕ್ಷರಿಗೆ ನೋಟಿಸ್ ನೀಡಿರುವುದು ಈ ಬಹು ನಿರೀಕ್ಷಿತ ಕ್ರಿಕೆಟ್ ಪಂದ್ಯದ ಟಿಕೆಟಿಂಗ್ ಪ್ರಕ್ರಿಯೆಯ ಸಮಗ್ರತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬದ್ಧತೆಯನ್ನು ಪ್ರದರ್ಶಿಸುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ