Site icon Vistara News

ICC World Cup 2023: 9 ಭಾಷೆಗಳಲ್ಲಿ ನೇರ ಪ್ರಸಾರಗೊಳ್ಳಲಿದೆ ವಿಶ್ವಕಪ್​ ಟೂರ್ನಿ

icc world cup trophy

ಮುಂಬಯಿ: ಐಸಿಸಿ ಏಕದಿನ ವಿಶ್ವಕಪ್(ICC World Cup 2023)​ ಕ್ರಿಕೆಟ್​ ಮಹಾ ಸಮರ ಗುರುವಾರದಿಂದ ಆರಂಭಗೊಳ್ಳಲಿದೆ. ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದೆ. ಇದೇ ಮೊದಲ ಬಾರಿ ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ಕೂಟ ನಡೆಯಲಿದೆ. ಹೀಗಾಗಿ ಬಿಸಿಸಿಐ ಸಕಲ ಸಿದ್ಧತೆಯನ್ನು ನಡೆಸಿದೆ. ಈಗಾಗಲೇ ಪಂದ್ಯಗಳ ವೀಕ್ಷಕ ವಿವರಣಾಕಾರರ ಪಟ್ಟಿಯನ್ನು (Commentary Panel) ಬಿಡುಗಡೆಗೊಂಡಿದೆ. ಇದೀಗ 9 ಭಾಷೆಗಳಲ್ಲಿ ಪಂದ್ಯಗಳು ನೇರ ಪ್ರಸಾರಗೊಳ್ಳಲಿದೆ ಎಂದು ಸ್ಟಾರ್​ ಸ್ಪೋರ್ಟ್ಸ್​ ನೆಟ್​ವರ್ಕ್​ ತಿಳಿಸಿದೆ.

ಪ್ರಸಾರಗೊಳ್ಳುವ 9 ಭಾಷೆಗಳು

ಸ್ಟಾರ್​ ಸ್ಪೋರ್ಟ್ಸ್ ಇಂಗ್ಲಿಷ್​,​​ ಹಿಂದಿ, ಮರಾಠಿ, ತಮಿಳು, ತೆಲುಗು, ಕನ್ನಡ, ಬೆಂಗಾಲಿ, ಗುಜರಾತಿ ಮತ್ತು ಮಲಯಾಳಂ ಭಾಷೆಗಳ ಮೂಲಕ ವಿಶ್ವಕಪ್ ನೇರ ಪ್ರಸಾರವನ್ನು ನೋಡಬಹುದಾಗಿದೆ. ಇದಕ್ಕಾಗಿ ಒಟ್ಟು 120 ಕಾಮೆಂಟೇಟರ್‌ಗಳನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಕಾಮೆಂಟ್ರಿಯಲ್ಲಿ ವಿಜಯ್ ಭಾರಧ್ವಾಜ್, ಭರತ್ ಚಿಪ್ಲಿ, ವಿನಯ್ ಕುಮಾರ್, ಸುನಿಲ್ ಜೋಶಿ ಮತ್ತು ಪವನ್ ದೇಶಪಾಂಡೆ ಸೇರಿದಂತೆ ಇನ್ನು ಹಲವರು ಕಾಣಿಸಿಕೊಳ್ಳಲಿದ್ದಾರೆ.

ಉಚಿತ ಪ್ರಸಾರ

ವಿಶ್ವಕಪ್​ ಪಂದ್ಯಗಳನ್ನು ಡಿಸ್ನಿ ಹಾಟ್​ಸ್ಟಾರ್ ಮೊಬೈಲ್ ಆ್ಯಪ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಈ ಅವಕಾಶ ಕೇವಲ ಮೊಬೈಲ್​ ಅಪ್ಲಿಕೇಶನ್​ಗೆ ಮಾತ್ರ ಸೀಮಿತವಾಗಿರುತ್ತದೆ. ಹಾಟ್​ಸ್ಟಾರ್ ವೆಬ್​ಸೈಟ್ ಮೂಲಕ ಒಂದ್ಯ ವೀಕ್ಷಿಸಲು ಚಂದಾದಾರಿಕೆ ಪಡೆಯಬೇಕಾಗುತ್ತದೆ.

ಇದನ್ನೂ ಓದಿ ICC World Cup 2023 : ಹೈದರಾಬಾದ್​​ನಲ್ಲಿ ಮಜಾ ಉಡಾಯಿಸಿದ ಪಾಕಿಸ್ತಾನ ಕ್ರಿಕೆಟ್​ ತಂಡದ ಆಟಗಾರರು!

10 ತಾಣಗಳಲ್ಲಿ ಪಂದ್ಯವಾಳಿ

ವಿಶ್ವಕಪ್​ನಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ದೇಶದ ಪ್ರಮುಖ 10 ತಾಣಗಳಲ್ಲಿ ಈ ಪಂದ್ಯ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ಮುಖಾಮುಖಿಯಾಗಲಿವೆ. ಭಾರತ ತಂಡ ತನ್ನ ಮೊದಲ ಲೀಗ್​ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್​ 8 ರಂದು ಆಡಲಿದೆ. ಅಕ್ಟೋಬರ್ 14 ರಂದು ಭಾರತ ತನ್ನ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ ಈ ಪಂದ್ಯ ಕಣ್ತುಬಿಂಕೊಳ್ಳಲು ಕ್ರಿಕೆಟ್​ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.

ವೀಕ್ಷಕ ವಿವರಣಾಕಾರರ ಪಟ್ಟಿಯಲ್ಲಿರುವ ಪ್ರಮುಖರೆಂದರೆ, ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ (Ricky Ponting), ಭಾರತ ತಂಡದ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ (Ravi Shashtri), ಸುನೀಲ್ ಗವಾಸ್ಕರ್ (Sunil Gavaskar), ಇಂಗ್ಲೆಂಡ್ ದಿಗ್ಗಜ ನಾಸೀರ್ ಹುಸೇನ್ (Nasser Hussain) ಹಾಗೂ ಮಹಿಳಾ ಕ್ರಿಕೆಟಗಾರ್ತಿ ಲಿಸಾ ಸ್ಥಾಲೇಕರ್, ಅಂಜುಮ್ ಚೋಪ್ರಾ ಕಾಣಿಸಿಕೊಂಡಿದ್ದಾರೆ.

ಹೆಚ್ಚಿನ ವಿಶ್ವಕಪ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Exit mobile version