ನವದೆಹಲಿ: ಹಲವು ದೇಶಗಳಲ್ಲಿ ಪ್ರದರ್ಶನ ಕಂಡ ಐಸಿಸಿ ವಿಶ್ವಕಪ್ ಟ್ರೋಫಿ(ICC World Cup Trophy) ಕೊನೆಗೂ ಭಾರತ ತಲುಪಿದೆ. ಭಾರತದ ಆತಿಥ್ಯದಲ್ಲಿ ನಡೆಯುವ ಈ ಟೂರ್ನಿ ಅಕ್ಟೋಬರ್ 5ರಿಂದ ಆರಂಭಗೊಳ್ಳಲಿದೆ. ಇನ್ನು ಭರ್ತಿ 50 ದಿನಗಳು ಮಾತ್ರ ಬಾಕಿ ಉಳಿದಿವೆ. ಇದೇ ಹಿನ್ನೆಲೆಯಲ್ಲಿ ಟ್ರೋಫಿಯನ್ನು ಜಗತ್ತಿನ ಅದ್ಭುತಗಳಲ್ಲಿ ಒಂದಾದ ಪ್ರೀತಿಯ ಸಂಕೇತವಾಗಿರುವ ಆಗ್ರಾದ ತಾಜ್ ಮಹಲ್(Taj Mahal) ಎದುರು ಬುಧವಾರ ಪ್ರದರ್ಶಿಸಲಾಯಿತು.
ತಾಜ್ ಮಹಲ್ ಎದುರು ಪ್ರದರ್ಶನಕ್ಕೆ ಇರಿಸಲಾದ ವಿಶ್ವ ಕಪ್ ಟ್ರೋಫಿಯ ಫೋಟೊವನ್ನು ಐಸಿಸಿ(ICC) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಕುತೂಹಲಕ್ಕೆ ಇನ್ನು ಕೇವಲ 50 ದಿನಗಳು ಮಾತ್ರ ಬಾಕಿ ಎಂದು ಬರೆದುಕೊಂಡಿದೆ. ವಿಶ್ವ ಕಪ್ ಟೂರ್ನಿ(ICC World Cup 2023) ಅಕ್ಟೋಬರ್ 5 ರಿಂದ ಆರಂಭವಾಗಿ ನವೆಂಬರ್ 19ರ ತನಕ ನಡೆಯಲಿದೆ. ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುವ ಈ ಕೂಟದಲ್ಲಿ ಎಲ್ಲ ತಂಡಗಳು ಮುಖಾಮುಖಿಯಾಗಲಿವೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿವೆ. ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 3ರವರೆಗೆ 10 ಅಭ್ಯಾಸ ಪಂದ್ಯಗಳು ನಡೆಯಲಿದೆ.
ಅಭ್ಯಾಸ ಪಂದ್ಯದಲ್ಲಿ ಎಲ್ಲ ತಂಡಗಳು ಎರಡು ಪಂದ್ಯಗಳನ್ನು ಆಡಲಿವೆ. ಆತಿಥೇಯ ಭಾರತ(IND vs ENG) ತಂಡ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಭಾರತ ತನ್ನ ಮೊದಲ ಲೀಗ್ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಆಡಲಿದೆ.
ಇದನ್ನೂ ಓದಿ ICC World Cup: ಬೆನ್ ಸ್ಟೋಕ್ಸ್ಗೆ ಕಳಕಳಿಯ ಮನವಿ ಮಾಡಿದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ
ಅಭ್ಯಾಸ ಪಂದ್ಯಗಳ ವೇಳಾಪಟ್ಟಿ
ದಿನಾಂಕ | ಪಂದ್ಯ | ಸ್ಥಳ |
ಸೆಪ್ಟೆಂಬರ್ 29 | ಪಾಕಿಸ್ತಾನ-ನ್ಯೂಜಿಲ್ಯಾಂಡ್ | ಹೈದರಾಬಾದ್ |
ಸೆಪ್ಟೆಂಬರ್ 29 | ದಕ್ಷಿಣ ಆಫ್ರಿಕಾ-ಅಫಘಾನಿಸ್ತಾನ | ತಿರುವನಂತಪುರ |
ಸೆಪ್ಟೆಂಬರ್ 29 | ಬಾಂಗ್ಲಾದೇಶ-ಅರ್ಹತಾ ತಂಡ | ಗುವಾಹಟಿ |
ಸೆಪ್ಟೆಂಬರ್ 30 | ಭಾರತ-ಇಂಗ್ಲೆಂಡ್ | ಗುವಾಹಟಿ |
ಸೆಪ್ಟೆಂಬರ್ 30 | ಆಸ್ಟ್ರೇಲಿಯಾ-ಅರ್ಹತಾ ತಂಡ | ಹೈದರಾಬಾದ್ |
ಅಕ್ಟೋಬರ್ 2 | ಇಂಗ್ಲೆಂಡ್-ಬಾಂಗ್ಲಾದೇಶ | ಗುವಾಹಟಿ |
ಅಕ್ಟೋಬರ್ 2 | ನ್ಯೂಜಿಲ್ಯಾಂಡ್-ದಕ್ಷಿಣ ಆಫ್ರಿಕಾ | ತಿರುವನಂತಪುರ |
ಅಕ್ಟೋಬರ್ 3 | ಭಾರತ-ಅರ್ಹತಾ ತಂಡ | ತಿರುವನಂತಪುರ |
ಅಕ್ಟೋಬರ್ 3 | ಪಾಕಿಸ್ತಾನ-ಆಸ್ಟ್ರೇಲಿಯಾ | ಹೈದರಾಬಾದ್ |
ಅಕ್ಟೋಬರ್ 3 | ಅಫಘಾನಿಸ್ತಾನ-ಅರ್ಹತಾ ತಂಡ | ಗುವಾಹಟಿ |
ಉದ್ಘಾಟನ ಪಂದ್ಯದಲ್ಲಿ ಇಂಗ್ಲೆಂಡ್-ಕಿವೀಸ್ ಸೆಣಸಾಟ
ವಿಶ್ವ ಕಪ್ ಟೂರ್ನಿಯಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ದೇಶದ ಪ್ರಮುಖ 10 ತಾಣಗಳಲ್ಲಿ ಈ ಪಂದ್ಯ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿವೆ. ಭಾರತ ತಂಡ ತನ್ನ ಮೊದಲ ಲೀಗ್ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಆಡಲಿದೆ. ಅಕ್ಟೋಬರ್ 14 ರಂದು ಭಾರತ ತನ್ನ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ ಈ ಪಂದ್ಯ ಕಣ್ತುಬಿಂಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.