Site icon Vistara News

WTC 2023-25 Points Table: ಡಬ್ಲ್ಯುಟಿಸಿ​ ಅಂಕಪಟ್ಟಿಯಲ್ಲೂ ಭಾರತಕ್ಕೆ ಆಘಾತವಿಕ್ಕಿದ ಆಸ್ಟ್ರೇಲಿಯಾ

Australia celebrate with the Benaud-Qadir trophy

ದುಬೈ: ನಿನ್ನೆಯಷ್ಟೇ ಐಸಿಸಿ ಟೆಸ್ಟ್​ ಶ್ರೇಯಾಂಕದಲ್ಲಿ ಭಾರತವನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದಿದ್ದ ಆಸ್ಟ್ರೇಲಿಯಾ ಮತ್ತೆ ಆಘಾತವಿಕ್ಕಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಶ್ರೇಯಾಂಕದಲ್ಲಿಯೂ(WTC 2023-25 Points Table) ನಂ.1 ಸ್ಥಾನ ಪಡೆಯುವ ಮೂಲಕ ಭಾರತವನ್ನು ಈ ಸ್ಥಾನದದಿಂದ ಕೆಳಗಿಳಿಸಿದೆ. ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್​ನಲ್ಲಿಯೂ ಆಸೀಸ್​ ಗೆದ್ದು ಪರಾಕ್ರಮ ತೋರಿದ ಪರಿಣಾಮ ಈ ಬದಲಾವಣೆ ಸಂಭವಿಸಿದೆ.

ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಿಂದ ಮೇಲೇರಿ ಅಗ್ರಸ್ಥಾನ ಪಡೆದಿತ್ತು. ಇದೀಗ ದ್ವಿತೀಯ ಸ್ಥಾನಕ್ಕೆ ಜಾರಿದೆ. ಮೂರನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಇದೀಗ 56.25 ಗೆಲುವಿನ ಶೇಕಡಾವಾರು ಅಂಕ ಸಂಪಾದಿಸಿ ಅಗ್ರಸ್ಥಾನ ಪಡೆದಿದೆ. ಭಾರತ ಶೇ. 54.16 ಗೆಲುವಿನ ಪ್ರತಿಶತದೊಂದಿಗೆ ದ್ವಿತೀಯ ಸ್ಥಾನ ಪಡೆದಿದೆ.

ಅಂಕಪಟ್ಟಿ ಹೀಗಿದೆ


ಗೆಲುವಿನ ಶೇಕಡಾವಾರು 50 ರೊಂದಿಗೆ ಮೂರನೇ ಸ್ಥಾನದಲ್ಲಿದ್ದ ನ್ಯೂಜಿಲ್ಯಾಂಡ್​ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ದಕ್ಷಿಣ ಆಫ್ರಿಕಾ ಮೂರನೇ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ 16.67 ಶೇಕಡಾದೊಂದಿಗೆ ಏಳನೇ ಮತ್ತು ಇಂಗ್ಲೆಂಡ್ 15 ಶೇಕಡಾದೊಂದಿಗೆ ಎಂಟನೇ ಸ್ಥಾನದಲ್ಲಿದೆ. ಭಾರತದ ಬದ್ಧ ಎದುರಾಳಿ ಪಾಕಿಸ್ತಾನ 36.66 ಶೇಕಡಾವಾರು ಅಂಕದೊಂದಿಗೆ 6ನೇ ಸ್ಥಾನ ಪಡೆದಿದೆ.

ಟೆಸ್ಟ್​ ಶ್ರೇಯಾಂಕದಲ್ಲೂ ಕುಸಿದ ಭಾರತ


ಸರಿ ಸುಮಾರು ಏಳು ತಿಂಗಳಿನಿಂದ ಟೆಸ್ಟ್​ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ ತಂಡ ಒಂದು ಸ್ಥಾನದ ಕುಸಿತ ಕಂಡು ದ್ವಿತೀಯ ಸ್ಥಾನ ಪಡೆದಿದೆ. ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೇರಿದೆ. ಆಸ್ಟ್ರೇಲಿಯಾ 118 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದರೆ, ಭಾರತ ಕೇವಲ ಒಂದು ಅಂಕದ ಹಿನ್ನೆಡೆಯಿಂ ತನ್ನ ಅಗ್ರಸ್ಥಾನ ಕಳೆದುಕೊಂಡಿತು. ಸದ್ಯ ಭಾರತದ ರೇಟಿಂಗ್​ ಅಂಕ 117.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ನ ಹೈವೋಲ್ಟೇಜ್​ ಪಂದ್ಯಗಳ ವೇಳಾಪಟ್ಟಿ ಹೀಗಿದೆ

ಅಗ್ರ 5 ಸ್ಥಾನ ಪಡೆದ ತಂಡಗಳು

ಆಸ್ಟ್ರೇಲಿಯಾ- 30 ಪಂದ್ಯ (118 ರೇಟಿಂಗ್​ ಅಂಕ)

ಭಾರತ-32 ಪಂದ್ಯ (117 ರೇಟಿಂಗ್​ ಅಂಕ)

ಇಂಗ್ಲೆಂಡ್​-43 ಪಂದ್ಯ(115 ರೇಟಿಂಗ್​ ಅಂಕ)

ದಕ್ಷಿಣ ಆಫ್ರಿಕಾ-24 ಪಂದ್ಯ(106 ರೇಟಿಂಗ್​ ಅಂಕ)

ನ್ಯೂಜಿಲ್ಯಾಂಡ್​-26 ಪಂದ್ಯ(95 ರೇಟಿಂಗ್​ ಅಂಕ)

ಪಾಕ್​ಗೆ ಹೀನಾಯ ಸೋಲು


ಪಾಕಿಸ್ತಾನ ವಿರುದ್ಧದ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್​ಗಳ ಗೆಲುವು ಸಾಧಿಸಿ 3-0 ಅಂತರದಲ್ಲಿ ಸರಣಿಯನ್ನು ಕ್ಲೀನ್​ಸ್ವೀಪ್​ ಮಾಡಿದೆ. ನಾಲ್ಕನೇ ದಿನದಾಟದಲ್ಲಿ ಗೆಲುವಿಗೆ 130 ರನ್​ಗಳ ಗುರಿ ಪಡೆದ ಆಸ್ಟ್ರೇಲಿಯಾ, ವಾರ್ನರ್​ ಮತ್ತು ಲಬುಶೇನ್​ ಅವರ ಅರ್ಧಶತಕ ಬಲದಿಂದ 2 ವಿಕೆಟ್​ ನಷ್ಟಕ್ಕೆ 130 ರನ್​ ಬಾರಿಸಿ ಗೆಲುವಿನ ನಗೆ ಬೀರಿತು. ವಿದಾಯ ಪಂದ್ಯ ಆಡಿದ ವಾರ್ನರ್​ ತಮ್ಮ ಕೊನೆಯ ಇನಿಂಗ್ಸ್​ನಲ್ಲಿ ಅರ್ಧಶತಕ ಬಾರಿಸುವ ಮೂಲಕ ನೆರದಿದ್ದ ತವರಿನ ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ. 75 ಎಸೆತಗಳಲ್ಲಿ 57 ರನ್​ ಬಾರಿಸಿ ಮಿಂಚಿದರು.

Exit mobile version