ಲಂಡನ್: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಕ್ಕೆ ಆ್ಯಶಸ್ ಸರಣಿಯ ನಾಲ್ಕನೇ ಟೆಸ್ಟ್‌ನಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದಕ್ಕೆ ಉಭಯ ತಂಡಗಳಿಗೆ ದಂಡ ವಿಧಿಸಲಾಗಿದೆ. ಈ ದಂಡದ ಪರಿಣಾಮ ಇಂಗ್ಲೆಂಡ್ ತಂಡ 2023-25ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಅಂಕ ಪಟ್ಟಿಯಲ್ಲಿ(ICC Wtc Points Table) 19 ಅಂಕಗಳನ್ನು ಕಳೆದುಕೊಂಡಿದೆ. ಅತ್ತ ಆಸೀಸ್ ತಂಡ ಒಟ್ಟು 10 ಅಂಕಗಳನ್ನು ಕಳೆದುಕೊಂಡಿದೆ. ಲಂಕಾ ವಿರುದ್ಧದ ಟೆಸ್ಟ್ ಸರಣಿ ಗೆದ್ದ ಪಾಕಿಸ್ತಾನ ಸದ್ಯ ಅಂಕಪಟ್ಟಿಯಲ್ಲಿ ಶೇ.100 ಗೆಲುವಿನ ಪ್ರತಿಶತದೊಂದಿಗೆ ಅಗ್ರಸ್ಥಾನದಲ್ಲಿದೆ. ಶೇ.66.67 ಗೆಲುವಿನ ಸರಾಸರಿ ಹೊಂದಿರುವ ಭಾರತ 2ನೇ ಸ್ಥಾನದಲ್ಲಿದೆ.
ಶ್ರೇಯಾಂಕದಲ್ಲಿ ಕುಸಿತ ಕಂಡ ರೋಹಿತ್
ಆ್ಯಶಸ್ ಟೆಸ್ಟ್ ಸರಣಿ ಮುಕ್ತಾಯದ ಬೆನ್ನಲ್ಲೇ ಐಸಿಸಿ ನೂತನ ಟೆಸ್ಟ್ ಶ್ರೇಯಾಂಕ ಪಟ್ಟಿ(ICC Test Ranking) ಪ್ರಕಟಿಸಿದೆ. ಈ ಬಾರಿ ಹಲವು ಬದಲಾವಣೆಗಳು ಸಂಭವಿಸಿದೆ. ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ(Rohit Sharma) ಒಂದು ಸ್ಥಾನ ಕುಸಿತ ಕಂಡು 10ನೇ ಸ್ಥಾನ ಪಡೆದಿದ್ದಾರೆ. ಕಳೆದ 5 ತಿಂಗಳಿನಿಂದ ಕ್ರಿಕೆಟ್ ಆಡದೆ ನಂ.1 ಸ್ಥಾನ ಪಡೆದಿದ್ದ ನ್ಯೂಜಿಲ್ಯಾಂಡ್ನ ಕೇನ್ ವಿಲಿಯಮ್ಸನ್(Kane Williamson) ನೂತನ ಶ್ರೇಯಾಂಕದಲ್ಲಿಯೂ ತಮ್ಮ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ ICC World Cup: ಈ ಆಟಗಾರ ತಂಡದಲ್ಲಿ ಇಲ್ಲದಿದ್ದರೆ ಭಾರತ ಪಾಕ್ ವಿರುದ್ಧ ಸೋಲುವುದು ಖಚಿತ; ಕೈಫ್
ಕಳೆದ ವಾರ ಮೂರನೇ ಶ್ರೇಯಾಂಕದಲ್ಲಿದ್ದ ಇಂಗ್ಲೆಂಡ್ನ ಮಾಜಿ ನಾಯಕ ಜೋ ರೂಟ್(Joe Root) ಅವರು ಒಂದು ಸ್ಥಾನ ಪ್ರಗತಿ ಕಾಣುವ ಮೂಲಕ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಆದರೆ ದ್ವಿತೀಯ ಸ್ಥಾನದಲ್ಲಿದ್ದ ಆಸೀಸ್ನ ಮಾರ್ನಸ್ ಲಬುಶೇನ್(Marnus Labuschagne) ಅವರು ಮೂರು ಸ್ಥಾನಗಳ ಕುಸಿತ ಕಂಡು 5ನೇ ಸ್ಥಾನ ಪಡೆದಿದ್ದಾರೆ. ಸ್ಮಿತ್ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಬೌಲಿಂಗ್ ಶ್ರೇಯಾಂಕದಲ್ಲಿ ಆರ್. ಅಶ್ವಿನ್(Ravichandran Ashwin) ಅವರು ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ದ್ವಿತೀಯ ಸ್ಥಾನ ಪಡೆದಿದ್ದಾರೆ. ರವೀಂದ್ರ ಜಡೇಜಾ ಅವರು 2 ಸ್ಥಾನ ಪ್ರಗತಿ ಸಾಧಿಸಿ ಮೂರನೇ ಸ್ಥಾನ ಪಡೆದಿದ್ದಾರೆ. ಆಲ್ ರೌಂಡರ್ಗಳ ಪಟ್ಟಿಯಲ್ಲಿಯೂ ಜಡೇಜಾ(Ravindra Jadeja) ಅಗ್ರ ಸ್ಥಾನ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಸ್ಟುವರ್ಟ್ ಬ್ರಾಡ್ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ.