ಧರ್ಮಶಾಲಾ: ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ(Rohit Sharma) ಅವರು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿಯ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಧರ್ಮಶಾಲಾದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 64 ರನ್ ಅಂತರದ ಗೆಲುವು ಸಾಧಿಸಿದ ಬಳಿಕ ರೋಹಿತ್ ತಮ್ಮ ನಿವೃತ್ತಿ ಆಲೋಚನೆಯ ಬಗ್ಗೆ ಅಭಿಪ್ರಾಯ ಹೊರಹಾಕಿದರು.
ದಿನೇಶ್ ಕಾರ್ತಿಕ್ ಅವರೊಂದಿಗಿನ ಸಂವಾದಲ್ಲಿ ರೋಹಿತ್ಗೆ ನಿವೃತ್ತಿಯ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ನೇರವಾಗಿ ಉತ್ತರಿಸಿದ ರೋಹಿತ್, ಒಂದು ದಿನ ಎಚ್ಚರಗೊಂಡಾಗ ಕ್ರಿಕೆಟ್ ಆಡಲು ಉತ್ತಮ ಸ್ಥಿತಿಯಲ್ಲಿಲ್ಲ ಎಂದು ಭಾವಿಸಿದರೆ, ಅದನ್ನು ತಂಡದ ಮ್ಯಾನೇಜ್ಮೆಂಟ್ಗೆ ತಕ್ಷಣ ತಿಳಿಸುವುದಾಗಿ ಹೇಳಿದರು. ಇದೇ ವೇಳೆ ಕಳೆದ ಕೆಲವು ವರ್ಷಗಳಿಂದ ನಾನು ಅತ್ಯುತ್ತಮ ಕ್ರಿಕೆಟ್ ಆಡುತ್ತಿದ್ದೇನೆ ಎಂದು ಕೂಡ ಹೇಳಿದರು.
“ಒಂದು ದಿನ ನಾನು ಬೆಳಗ್ಗೆ ಎಚ್ಚರಗೊಂಡಾಗ ನಾನು ಆಡುವಷ್ಟು ಸಮರ್ಥನಲ್ಲ ಎಂದು ಭಾವಿಸಿದರೆ ತಕ್ಷಣ ನಿವೃತ್ತಿ ಘೋಷಿಸುತ್ತೇನೆ. ಸದ್ಯಕ್ಕೆ ಯಾವುದೇ ನಿವೃತ್ತಿ ಯೋಜನೆ ಇಲ್ಲ. ಏಕೆಂದರೆ ಪ್ರಾಮಾಣಿಕವಾಗಿ ಹೇಳುವುದಾದರೆ ಕಳೆದ ಎರಡು ಅಥವಾ ಮೂರು ವರ್ಷಗಳಲ್ಲಿ ನನ್ನ ಕ್ರಿಕೆಟ್ ನಿಜವಾಗಿಯೂ ಉತ್ತಮ ಹಂತದಲ್ಲಿದೆ. ಮತ್ತು ನಾನು ಅತ್ಯುತ್ತಮ ಕ್ರಿಕೆಟ್ ಆಡುತ್ತಿದ್ದೇನೆ” ಎಂದು ರೋಹಿತ್ ಹೇಳಿದರು.
ಇದನ್ನೂ ಓದಿ IPL 2024: ದ್ವಿತೀಯ ಹಂತದ ಐಪಿಎಲ್ ವೇಳಾಪಟ್ಟಿ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಅಧ್ಯಕ್ಷ ಧುಮಾಲ್
ರೋಹಿತ್ ಅವರು ಅತ್ಯುತ್ತಮ ಕ್ರಿಕೆಟ್ ಆಡುತ್ತಿದ್ದೇನೆ ಎಂದು ಹೇಳಿದ್ದನ್ನು ಗಮನಿಸುವಾಗ ಅವರು ಇನ್ನೆಡರು ವರ್ಷವಾದರೂ ಕ್ರಿಕೆಟ್ ಆಡಲಿದ್ದೇನೆ ಎಂದು ಸೂಚನೆ ನೀಡಿದಂತಿದೆ. 36 ವರ್ಷದ ರೋಹಿತ್ ಮುಂದಿನ ಏಕದಿನ ದಿನ ವಿಶ್ವಕಪ್ ಆಡಿದರೂ ಅಚ್ಚರಿಯಿಲ್ಲ. 2027ರಲ್ಲಿ ವಿಶ್ವಕಪ್ ನಡೆಯಲಿದೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ನಲ್ಲಿ ರೋಹಿತ್ ಸಾರಥ್ಯದ ಭಾರತ ಒಂದೇ ಒಂದು ಪಂದ್ಯ ಸೋಲದೆ ಫೈನಲ್ ಪ್ರವೇಶ ಮಾಡಿತ್ತು. ಆದರೆ, ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ನಿರಾಸೆ ಮೂಡಿಸಿತ್ತು.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್, ಮೊಹಮ್ಮದ್ ಶಮಿ ಅವರಂತಹ ಹಿರಿಯ ಆಟಗಾರರ ಅಲಭ್ಯತೆಯ ಹೊರತಾಗಿಯೂ ರೋಹಿತ್ ಭಾರತಕ್ಕೆ 4-1 ಅಂತರದಿಂದ ಗೆಲುವು ತಂದುಕೊಟ್ಟಿದ್ದು ನಿಜಕ್ಕೂ ಮೆಚ್ಚಲೇ ಬೇಕು. ಈ ಸರಣಿಯಿಂದ ತಾನು ಬಹಳಷ್ಟು ಕಲಿತಿದ್ದೇನೆ ಎಂದು ಕೂಡ ರೋಹಿತ್ ಹೇಳಿದ್ದರು. ಸರಣಿಯಲ್ಲಿ 2 ಶತಕ ಕೂಡ ಬಾರಿಸಿದ್ದಾರೆ.
ರೋಹಿತ್ ಅವರು ಅಂತಿಮ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದರು. ಅವರ ದಾಖಲೆಗಳ ಪಟ್ಟಿ ಇಲ್ಲಿದೆ.
2021 ರಿಂದ ಭಾರತದ ಪರ ಅತಿ ಹೆಚ್ಚು ಟೆಸ್ಟ್ ಶತಕಗಳು
ರೋಹಿತ್ ಶರ್ಮ-6
ಶುಭಮನ್ ಗಿಲ್-4
ರವೀಂದ್ರ ಜಡೇಜಾ-3
ಯಶಸ್ವಿ ಜೈಸ್ವಾಲ್-3
ರಿಷಭ್ ಪಂತ್-3
ಕೆಎಲ್ ರಾಹುಲ್-3
ಇಂಗ್ಲೆಂಡ್ ವಿರುದ್ಧ ಭಾರತದ ಆರಂಭಿಕ ಆಟಗಾರರಿಂದ ಅತಿ ಹೆಚ್ಚು ಟೆಸ್ಟ್ ಶತಕ
ಸುನೀಲ್ ಗವಾಸ್ಕರ್-4
ರೋಹಿತ್ ಶರ್ಮ-4
ವಿಜಯ್ ಮರ್ಚೆಂಟ್-3
ಮುರಳಿ ವಿಜಯ್-3
ಕೆ.ಎಲ್ ರಾಹುಲ್-3
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಅತಿ ಹೆಚ್ಚು ಶತಕಗಳು
ಡೇವಿಡ್ ವಾರ್ನರ್-49
ಸಚಿನ್ ತೆಂಡೂಲ್ಕರ್- 45
ರೋಹಿತ್ ಶರ್ಮಾ-43
ಕ್ರಿಸ್ ಗೇಲ್-42
ಸನತ್ ಜಯಸೂರ್ಯ-41
ಮ್ಯಾಥ್ಯೂ ಹೇಡನ್-40
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ ಅತಿ ಹೆಚ್ಚು ಶತಕಗಳು
ಸಚಿನ್ ತೆಂಡೂಲ್ಕರ್-100
ವಿರಾಟ್ ಕೊಹ್ಲಿ-80
ರಾಹುಲ್ ದ್ರಾವಿಡ್-48
ರೋಹಿತ್ ಶರ್ಮ-48
ವಿರೇಂದ್ರ ಸೆಹವಾಗ್-38
ಸೌರವ್ ಗಂಗೂಲಿ-38