ಮುಂಬಯಿ : Virat Kohli ಅವರ ಬ್ಯಾಟಿಂಗ್ ಕಳಪೆ ಪ್ರದರ್ಶನದ ಬಗ್ಗೆ ಹಲವು ಹಿರಿಯ ಕ್ರಿಕೆಟಿಗರು ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರನ್ನು ತಂಡದಿಂದ ಕೈ ಬಿಡುವ, ದೇಶೀಯ ಕ್ರಿಕೆಟ್ನಲ್ಲಿ ಆಡುವ, ರೆಸ್ಟ್ ಕೊಡದೇ ಆಡಿಸುವ ಸೇರಿದಂತೆ ಹಲವಾರು ತಂತ್ರಗಳನ್ನು ಹೇಳಿಕೊಡುತ್ತಿದ್ದಾರೆ. ಸಲಹೆ ನೀಡುವಲ್ಲಿ ಮುಂಚೂಣಿಯಲ್ಲಿರುವ ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್, ಇದೀಗ ಮತ್ತೊಂದು ಸಲಹೆ ಕೊಟ್ಟಿದ್ದು, 20 ನಿಮಿಷ ಅವರನ್ನು ನನ್ನ ಬಳಿ ಬಿಟ್ಟರೆ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಹೇಳಿದ್ದಾರೆ.
ಕೊಹ್ಲಿ, 2019ರಿಂದ ಒಂದೇ ಒಂದು ಅಂತಾರಾಷ್ಟ್ರೀಯ ಶತಕ ಬಾರಿಸಿಲ್ಲ. ಈ ಅವಧಿಯಲ್ಲಿ ಅವರ ಗರಿಷ್ಠ ರನ್ 76. ಹೀಗಾಗಿ ಅವರನ್ನು ಹೇಗಾದರೂ ಮಾಡಿ ಸಂಕಷ್ಟದಿಂದ ಪಾರು ಮಾಡಲು ಸುನೀಲ್ ಗವಾಸ್ಕರ್ ಚಿಂತನೆ ನಡೆಸಿದ್ದಾರೆ. ಹೀಗಾಗಿ ಕೊಹ್ಲಿಯ ಕೆಲವು ವೈಫಲ್ಯಗಳನ್ನು ಅವರು ಪತ್ತೆ ಹಚ್ಚಿದ್ದು, ಸಲಹೆ ನೀಡಿ ಉದ್ಧಾರ ಮಾಡುವುದಕ್ಕೆ ಮುಂದಾಗಿದ್ದಾರೆ.
ಏನಂದರು ಸುನೀಲ್?
20 ನಿಮಿಷ ಕೊಹ್ಲಿ ನನ್ನ ಜತೆ ಮಾತನಾಡಿದರೆ ನಾನು ಅವರಿಗೆ ಸಹಾಯ ಮಾಡಲು ಸಾಧ್ಯವಿದೆ. ಆದರೆ, ಅದು ಎಷ್ಟರ ಮಟ್ಟಿಗೆ ಪ್ರಯೋಜನಕಾರಿ ಎಂಬುದು ಗೊತ್ತಿಲ್ಲ. ಪ್ರಮುಖವಾಗಿ ಅವರ ಆಫ್ ಸ್ಟಂಪ್ ಲೈನ್ ಬ್ಯಾಟಿಂಗ್ ಬಗ್ಗೆ ಸಲಹೆ ನೀಡಬೇಕಾಗಿದೆ, ಎಂದು ಗವಾಸ್ಕರ್ ನುಡಿದಿದ್ದಾರೆ.
ನಾನೊಬ್ಬ ಆರಂಭಿಕ ಬ್ಯಾಟರ್ ಅಗಿ ಆಫ್ ಸ್ಟಂಪ್ ಲೈನ್ನ ಸಮಸ್ಯೆ ಎದುರಿಸಿದ್ದೆ. ಅದರಿಂದ ಹೊರ ಬರಲು ಕೆಲವೊಂದು ಸಂಗತಿಗಳನ್ನು ಮಾಡಬೇಕಾಗಿದೆ, ಎಂದು ಸುನೀಲ್ ಹೇಳಿದ್ದಾರೆ.
ರನ್ ಬರ ಎದುರಿಸುತ್ತಿರುವ ಕಾರಣ ವಿರಾಟ್ ಕೊಹ್ಲಿ ಆತಂಕದಲ್ಲಿ ಇದ್ದಾರೆ. ಹೀಗಾಗಿ ಅವರು ಚೆಂಡನ್ನು ಗಮನಿಸುವ ಬದಲು ರನ್ ಗಳಿಸುವ ಕಡೆಗೆ ಯೋಚನೆ ಮಾಡುತ್ತಾರೆ. ಹೀಗಾಗಿ ಅವರು ಔಟಾಗುತ್ತಿದ್ದಾರೆ. ಆದಾಗ್ಯೂ ಕೊಹ್ಲಿ ಔಟಾಗಿರುವ ಎಸೆತಗಳೆಲ್ಲರೂ ಉತ್ತಮ ಎಸೆತಗಳೇ ಆಗಿದ್ದವು ಎಂದು ಮಾಜಿ ಕ್ರಿಕೆಟಿಗ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ | Edgebasotn ಪಿಚ್ ಮೇಲೆ ಮೇಲೇನೆ ಗವಾಸ್ಕರ್‌ಗೆ ಗುಮಾನಿ, ಯಾಕೆ?