ಲಂಡನ್ : ದೀಪ್ತಿ ಶರ್ಮ ಮಾಡಿರುವ ನಾನ್‌ಸ್ಟ್ರೈಕ್ ರನ್‌ಔಟ್ ಪ್ರಸಂಗ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಕಳೆದೆರಡು ದಿನ ಅಭಿಮಾನಿಗಳು ಹಾಗೂ ಹಿರಿಯ ಕ್ರಿಕೆಟಿಗರು ಕಾದಾಡಿದ್ದರೆ ಇದೀಗ ತಂಡದ ಸದಸ್ಯರೇ ಪರಸ್ಪರ ಸಮರ್ಥನೆಗೆ ಇಳಿದುಕೊಂಡಿದ್ದಾರೆ. ಸೋಮವಾರ ದೀಪ್ತಿ ಶರ್ಮ ಅವರು ತಾವು ಎಚ್ಚರಿಕೆ ಕೊಟ್ಟ ಹೊರತಾಗಿಯೂ ಅವರು ಪದೇಪದೆ ಕ್ರಿಸ್ ಬಿಡುತ್ತಿದ್ದ ಕಾರಣ ಔಟ್ ಮಾಡಿದೆ ಎಂದು ಹೇಳಿದರೆ, ಅದಕ್ಕೆ ಪ್ರತಿಕ್ರಿಯಿಸಿದ ಇಂಗ್ಲೆಂಡ್ ತಂಡದ ನಾಯಕ ಹೇದರ್ ನೈಟ್ ಸುಳ್ಳಿನ ಸಮರ್ಥನೆ ಯಾಕೆ ಎಂಧು ಪ್ರಶ್ನಿಸಿದ್ದಾರೆ.
ದೀಪ್ತಿಯ ಹೇಳಿಕೆ ಹಿನ್ನೆಲೆಯಲ್ಲಿ ಸತತ ಎರಡು ಟ್ವೀಟ್ ಮಾಡಿರುವ ಹೇದರ್ ನೈಟ್ ಅವರು ದೀಪ್ತಿ ಹೇಳಿಕೆಗೆ ತಮ್ಮ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ರನ್ಔಟ್ ವಿಚಾರ ಮುಗಿದ ಅಧ್ಯಾಯ. ಚಾರ್ಲಿಯ ರನ್ಔಟ್‌ಗೆ ಮಾನ್ಯತೆಯಿದೆ. ಭಾರತ ತಂಡದ ಪಂದ್ಯ ಹಾಗೂ ಸರಣಿ ಗೆಲುವಿಗೆ ಅರ್ಹರು. ದೀಪ್ತಿ ಹೇಳಿದ ಹಾಗೆ ಚಾರ್ಲಿಗೆ ಎಚ್ಚರಿಕೆ ಕೊಟ್ಟಿದ್ದೆ ಎಂಬುದು ಸುಳ್ಳು. ಅವರು ಎಚ್ಚರಿಕೆ ಕೊಡುವ ಅಗತ್ಯವೂ ಇರುವುದಿರಲ್ಲ ಹಾಗೂ ಅದರಿಂದ ನಿರ್ಧಾರ ಮೌಲ್ಯವೂ ಏರಿಕೆಯಾಗುವುದಿಲ್ಲ,” ಎಂದು ಮೊದಲ ಟ್ವೀಟ್ ಮಾಡಿದ್ದಾರೆ.
ಇನ್ನೊಂದು ಟ್ವೀಟ್‌ನಲ್ಲಿ “ಭಾರತ ತಂಡಕ್ಕೆ ತಾವು ಔಟ್ ಮಾಡಿರುವ ರೀತಿಯ ಸರಿಯಾಗಿದೆ ಎಂದ ಅನಿಸಿದರೆ ಅದನ್ನು ಸಮರ್ಥಿಸುವ ಅವಶ್ಯಕತೆ ಇರುವುದಿಲ್ಲ. ಎಚ್ಚರಿಕೆ ಕೊಟ್ಟಿದ್ದೇನೆ ಎಂದು ಸುಳ್ಳು ಹೇಳಿ ಸಮರ್ಥನೆ ಮಾಡಿಕೊಳ್ಳಬೇಕು ಎಂದು ಭಾರತ ತಂಡಕ್ಕೆ ಅನಿಸಬೇಕಾಗಿಲ್ಲ,” ಎಂಬುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ| Deepti Sharma | ದೀಪ್ತಿ ಶರ್ಮ ಬೆಂಬಲಕ್ಕೆ ನಿಂತ ಕ್ರಿಕೆಟ್ ನಿಯಮ ರೂಪಿಸುವ ಎಮ್‌ಸಿಸಿ ಕ್ಲಬ್