ಪರ್ತ್: ಜಿಂಬಾಬ್ವೆ ವಿರುದ್ಧದ ವಿಶ್ವ ಕಪ್ ಪಂದ್ಯದಲ್ಲಿ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡ ಸೋಲು ಕಂಡಿರುವುದು, ಪಾಕಿಸ್ತಾನ ಕ್ಷೇತ್ರದ ನಿದ್ದೆಗೆಡಿಸಿದೆ. ಹೀಗಾಗಿ ಬಾಬರ್ ಅಜಮ್ ನೇತತ್ವದ ಪಾಕ್ ತಂಡದ ವಿರುದ್ಧ ಅವರದ್ದೇ ದೇಶದ ಮಾಜಿ ಕ್ರಿಕೆಟಗರು ಸಿಡಿದೆದ್ದಿದ್ದಾರೆ. ಸಂಕಷ್ಟಕ್ಕೆ ಬಿದ್ದಿರುವ ಪಾಕ್ ತಂಡದ ಆಟಗಾರರ ವೈಫಲ್ಯವನ್ನು ಒಂದೊಂದಾಗಿ ಎತ್ತಿ ತೋರಿಸಿ ಟೀಕೆಗಳನ್ನು ಮಾಡುತ್ತಿದ್ದಾರೆ. ಅಂತೆಯೇ ಪಾಕಿಸ್ತಾನ ಕ್ರಿಕೆಟ್ ದಿಗ್ಗಜ ವಾಸಿಮ್ ಅಕ್ರಮ್ ಅವರು, ಆಸ್ಟ್ರೇಲಿಯಾದ ಪರಿಸ್ಥಿತಿಗೆ ಪೂರಕವಾಗಿ ತಂಡ ಸಿದ್ಧಗೊಳ್ಳದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
“ವಿಶ್ವ ಕಪ್‌ನಂಥ ಟೂರ್ನಿಗಳಿಗೆ ಸಜ್ಜಾಗುವಾಗ ಆತಿಥೇಯ ದೇಶದ ಪಿಚ್‌ಗಳಿಗೆ ಹೊಂದಿಕೆ ಮಾಡಿಕೊಳ್ಳುವುದು ಹಾಗೂ ತಂಡವನ್ನು ಸಿದ್ಧಗೊಳಿಸುವುದು ನಾಯಕನ ಜವಾಬ್ದಾರಿ. ಅದು ಬಿಟ್ಟು ಅಲ್ಲಿನ ಪಿಚ್‌ಗಳು ಕಠಿಣವಾಗಿತ್ತು ಎಂದು ಹೇಳುವುದು ಸರಿಯಲ್ಲ. ಆಸ್ಟ್ರೇಲಿಯಾದ ಪಿಚ್‌ಗಳು ಕಷ್ಟಕರ ಎಂದರೆ ಲಾಹೋರ್‌ನ ಗಡಾಫಿ ಪಿಚ್ ತೆಗೆದುಕೊಂಡು ಹೋಗಿ,” ಎಂದು ಲೇವಡಿ ಮಾಡಿದ್ದಾರೆ.
“ಹಿರಿಯ ಆಟಗಾರರು ಎಲ್ಲ ಮಾದರಿಯಲ್ಲಿ ಆಡಲು ಮುಂದಾಗುವುದರಿಂದ ಏನು ಲಾಭ. ಅವರು ವಿಶ್ರಾಂತಿ ಪಡೆದುಕೊಂಡು ಯುವ ಆಟಗಾರರಿಗೆ ಅವಕಾಶ ಮಾಡಿಕೊಡಬೇಕು. ಉತ್ತಮ ಆಟಗಾರರನ್ನು ಆಯ್ಕೆ ಮಾಡುವುದು ನಾಯಕನ ಜವಾಬ್ದಾರಿ. ಹೀಗಾಗಿ ಉತ್ತಮ ಆಟಗಾರರನ್ನು ಆಯ್ಕೆ ಮಾಡಬೇಕು. ತಂಡದಲ್ಲಿ ಐದನೇ ಬೌಲರ್ ಆಯ್ಕೆ ಇರಬೇಕು ಹಾಗೂ ಉತ್ತಮ ಅಲ್‌ರೌಂಡರ್‌ಗಳನ್ನೂ ಆಯ್ಕೆ ಮಾಡಬೇಕು. ಆದರೆ, ಪಾಕಿಸ್ತಾನ ತಂಡದಲ್ಲಿ ಅಂಥ ಸಮತೋಲನ ಇಲ್ಲ,” ಎಂಬುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ : ವಿಸ್ತಾರ Explainer | ಭಾರತವನ್ನು ಎದುರು ಹಾಕಿಕೊಂಡರೆ ಪಾಕಿಸ್ತಾನ ಕ್ರಿಕೆಟ್ ಬರ್ಬಾದ್; ಯಾಕೆ ಗೊತ್ತೆ?