ನವ ದೆಹಲಿ : ಭಾರತ ತಂಡ ಟಿ೨೦ ವಿಶ್ವ ಕಪ್‌ನ ಸೆಮಿ ಫೈನಲ್ ಪಂದ್ಯದಲ್ಲಿ ಸೋಲುವ ಮೂಲಕ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಇದೇ ವೇಳೆ ಟೀಮ್ ಇಂಡಿಯಾದ ಸೋಲಿಗೆ ಐಪಿಎಲ್ ಕಾರಣ ಎಂಬುದಾಗಿಯೂ ಚರ್ಚೆ ನಡೆದಿತ್ತು. ಹಿರಿಯ ಆಟಗಾರರನೇಕರು ಇದೇ ಮಾದರಿಯಲ್ಲಿ ಟೀಕೆ ಮಾಡಿದ್ದರು. ಆದರೆ, ಭಾರತ ತಂಡದ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಇದಕ್ಕೆ ವ್ಯತಿರಿಕ್ತವಾದ ಹೇಳಿಕೆ ಕೊಟ್ಟಿದ್ದು ಐಪಿಎಲ್ ಮೇಲೆ ಗೂಬೆ ಕೂರಿಸುವುದು ಅನ್ಯಾಯ ಎಂಬುದಾಗಿ ಹೇಳಿದ್ದಾರೆ.
ಆಟಗಾರರು ಸರಿಯಾಗಿ ಆಡದಿದ್ದರೆ ಅವರನ್ನು ಟೀಕೆ ಮಾಡಬೇಕು. ಅದನ್ನು ಬಿಟ್ಟು ಐಪಿಎಲ್ ಬಗ್ಗೆ ಟೀಕೆ ಮಾಡಿಕೊಂಡಿರುವುದು ಸರಿಯಲ್ಲ ಎಂಬುದಾಗಿ ಹೇಳಿದ್ದಾರೆ.
“ಐಪಿಎಲ್ ಭಾರತೀಯ ಕ್ರಿಕೆಟ್‌ನಲ್ಲಿ ಸಂಭವಿಸಿದ ಉತ್ತಮ ವಿಷಯವಾಗಿದೆ. ನನ್ನ ಎಲ್ಲ ತಿಳಿವಳಿಕೆಯನ್ನು ಬಳಸಿಕೊಂಡು ನಾನು ಹೇಳಬಲ್ಲೆ. ಐಪಿಎಲ್ ಆರಂಭಗೊಂಡ ಬಳಿಕದಿಂದ ನಾನಾ ರೀತಿಯ ಟೀಕೆಗಳನ್ನು ಎದುರಿಸಿಕೊಂಡು ಬಂದಿದೆ. ಆಟಗಾರರು ಉತ್ತಮ ಪ್ರದರ್ಶನ ನೀಡದ ಸಂದರ್ಭದಲ್ಲಿ ಐಪಿಎಲ್ ಅನ್ನೇ ದೂಷಿಸಲಾಗಿದೆ. ಅದು ಅನ್ಯಾಯ. ಒಂದು ವೇಳೆ ಆಟಗಾರರು ಐಸಿಸಿ ಟೂರ್ನಮೆಂಟ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡದೇ ಹೋದರೆ ಅವರನ್ನು ಟೀಕೆ ಮಾಡಿ. ಐಪಿಎಲ್ ಕಡೆಗೆ ಬೊಟ್ಟು ಮಾಡುವುದು ಸಮರ್ಪಕವಲ್ಲ,”ೆ ಎಂಬುದಾಗಿ ಅವರು ಹೇಳಿದ್ದಾರೆ.
“ಭಾರತೀಯರನ್ನೇ ಟೀಮ್ ಇಂಡಿಯಾ ಕೋಚ್‌ಗಳನ್ನಾಗಿ ಆಯ್ಕೆ ಮಾಡುತ್ತಿರುವುದು ಅತ್ಯುತ್ತಮ ಸಂಗತಿಯಾಗಿದೆ. ಭಾರತೀಯ ಕೋಚ್‌ಗಳೇ ಈಗ ಭಾರತ ತಂಡಕ್ಕೆ ಕೋಚಿಂಗ್ ನೀಡುತ್ತಿದ್ದಾರೆ. ವಿದೇಶಿ ಕೋಚ್‌ಗಳಿಗೆ ನಾನು ಅನಗತ್ಯ ಪ್ರಾಮುಖ್ಯತೆ ಕೊಡುತ್ತಿದ್ದೆವು ಹಾಗೂ ಅವರು ಚೆನ್ನಾಗಿ ಹಣ ಮಾಡಿಕೊಂಡು ಹೋಗುತ್ತಿದ್ದರು. ಕ್ರೀಡಾ ಹಾಗೂ ಭಾವನೆ ಜತೆಜತೆಯಾಗಿರುತ್ತದೆ. ಹೀಗಾಗಿ ಭಾರತ ತಂಡದ ಜತೆ ಮಾನಸಿಕ ಭಾವನೆ ಹೊಂದಿರುವ ಆಟಗಾರರಿಗೆ ಮಾತ್ರ ಉತ್ತಮ ರೀತಿಯಲ್ಲಿ ಕೋಚಿಂಗ್ ಮಾಡಲು ಸಾಧ್ಯ,” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ | Rohit Sharma | ಐಪಿಎಲ್ ಆಡೋದು ನಿಲ್ಲಿಸಿ, ವಿಶ್ವ ಕಪ್ ಗೆಲ್ಲುವುದು ಪಕ್ಕಾ ಎಂದ ರೋಹಿತ್ ಬಾಲ್ಯದ ಕೋಚ್