ಮುಂಬಯಿ: ದಕ್ಷಿಣ ಆಫ್ರಿಕಾದ ಆತಿಥ್ಯದಲ್ಲಿ ನಡೆಯುತ್ತಿರುವ ಮಹಿಳೆಯರ ಟಿ20 ವಿಶ್ವ ಕಪ್ನಲ್ಲಿ (Women’s T20 World Cup) ಭಾರತ ತಂಡಕ್ಕೆ ಟ್ರೋಫಿ ಗೆಲ್ಲುವ ಎಲ್ಲ ಅವಕಾಶಗಳಿವೆ. ಒಂದು ವೇಳೆ ಗೆದ್ದರೆ ಮಹಿಳೆಯರ ಕ್ರಿಕೆಟ್ನ ಸ್ವರೂಪವೇ ಬದಲಾಗುವುದು ಎಂಬುದಾಗಿ ಭಾರತ ತಂಡದ ಮಾಜಿ ಆಟಗಾರ ಹಾಗೂ ಮಾಜಿ ಕೋಚ್ ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಮಹಿಳೆಯರ ವಿಶ್ವ ಕಪ್ಗೆ ಈಗಾಗಲೇ ಆರಂಭಗೊಂಡಿದ್ದು, ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯ ಫೆಬ್ರವರಿ 12ರಂದು ನಡೆಯಲಿದೆ.
1983ರ ಏಕ ದಿನ ವಿಶ್ವ ಕಪ್ ಗೆಲುವಿನ ಬಳಿಕ ಭಾರತ ತಂಡದ ಅದೃಷ್ಟವೇ ಬದಲಾಗಿ ಹೋಯಿತು. ಇದರಿಂದ ಭಾರತದಲ್ಲಿ ಕ್ರಿಕೆಟ್ಗೆ ಹೆಚ್ಚು ಮಹತ್ವ ದೊರೆಯಿತಲ್ಲದೆ, ಯುವ ಆಟಗಾರರಿಗೂ ಹೆಚ್ಚಿನ ಅವಕಾಶಗಳು ಒದಗಿ ಬಂದವು ಎಂಬುದಾಗಿ ಕಪಿಲ್ ದೇವ್ ಹೇಳಿದ್ದಾರೆ.
2022ರ ಆವೃತ್ತಿಯಲ್ಲಿ ಭಾರತ ಮಹಿಳೆಯರ ತಂಡ ಫೈನಲ್ಗೇರಿತ್ತು. ಆದರೆ, ಆಸ್ಟ್ರೇಲಿಯಾ ತಂಡದ ಎದುರು 85 ರನ್ಗಳಿಂದ ಮುಗ್ಗರಿಸಿತ್ತು. ಇದೀಗ ಭಾರತ ತಂಡ ಮತ್ತೊಂದು ಬಾರಿ ವಿಶ್ವ ಕಪ್ ಟ್ರೋಫಿಯ ನಿರೀಕ್ಷೆಯೊಂದಿಗೆ ದಕ್ಷಿಣ ಆಫ್ರಿಕಾದಲ್ಲಿ ಅಭಿಯಾನ ಆಋಂಭಿಸಿದೆ. ಹೀಗಾಗಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ ರವಿ ಶಾಸ್ತ್ರಿ.
ಇದನ್ನೂ ಓದಿ : Ravindra Jadeja : ಮುಲಾಮು ಹಚ್ಚಿದ್ದನ್ನೇ ಮೋಸದಾಟ ಎಂದ ಮೈಕೆಲ್ ವಾನ್ ಬೆಂಡೆತ್ತಿದ ಮಾಜಿ ಕೋಚ್ ರವಿ ಶಾಸ್ತ್ರಿ
1983 ವಿಶ್ವ ಕಪ್ ಬಳಿಕ ಭಾರತದ ಕ್ರಿಕೆಟ್ನ ದಿಸೆಯೇ ಬದಲಾಯಿತು. ರಾತ್ರೊರಾತ್ರಿ ಜನರು ಕ್ರಿಕೆಟ್ ಅಭಿಮಾನ ಬೆಳೆಸಿಕೊಂಡರು ಎಂಬುದಾಗಿ ಶಾಸ್ತ್ರಿ ಹೇಳಿದ್ದಾರೆ.