ಕರಾಚಿ: ಒಂದು ಕಾಲದಲ್ಲಿ ವಿಶ್ವದ ನಂ.1 ಬೌಲರ್ ಪಟ್ಟ ಅಂಕರಿಸಿದ್ದ ಪಾಕಿಸ್ತಾನದ ಮ್ಯಾಚ್ ವಿನ್ನಿಂಗ್ ಬೌಲರ್, ಮಿಸ್ಟರಿ ಸ್ಪಿನ್ನರ್ ಸಯೀದ್ ಅಜ್ಮಲ್(Saeed Ajmal) ಅವರು ತಮ್ಮ ವಿರುದ್ಧ ನಡೆಸಿದ ಷಡ್ಯಂತರದ ಬಗ್ಗೆ ಬೇಸರ ಹೊರಹಾಕಿದ್ದಾರೆ. ಭಾರತದಲ್ಲಿ ಜನಿಸುತ್ತಿದ್ದರೆ ಸಾವಿರ ವಿಕೆಟ್ ಪಡೆಯುತ್ತಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ(pakistan cricket) ಕಂಡ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿರುವ ಸಯೀದ್ ಅಜ್ಮಲ್, ಬೌಲಿಂಗ್ ಆ್ಯಕ್ಷನ್ ವಿವಾದದಲ್ಲಿ ಸಿಲುಕಿದ ಬಳಿಕ ನೈಜ ಚಾರ್ಮ್ ಕಳೆದುಕೊಂಡಿದ್ದರು. 2014ರಲ್ಲಿ ಅವರು ಮೊದಲ ಬಾರಿಗೆ ಆ್ಯಕ್ಷನ್ ಸುಳಿಗೆ ಸಿಲುಕಿದರು. ಬಳಿಕ ಪಾಕಿಸ್ತಾನದ ಖ್ಯಾತ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಮಾರ್ಗದರ್ಶನದಲ್ಲಿ ಬೌಲಿಂಗ್ ಶೈಲಿಯನ್ನು ಸರಿಪಡಿಸಿಕೊಂಡರೂ ಮೊದಲಿನಂತೆ ವಿಕೆಟ್ ಕೀಳಲು ಅವರಿಂದ ಸಾಧ್ಯವಾಗಲಿಲ್ಲ. ಇದಾದ ಬಳಿಕ ಅವರಿಗೆ ತಂಡದಲ್ಲಿ ಅಷ್ಟಾಗಿ ಅವಕಾಶವು ಲಭಿಸಿರಲಿಲ್ಲ. ಇದೇ ಬೇಸರದಲ್ಲಿ ಅವರು ಎಲ್ಲ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು.
ತಮ್ಮ ವಿರುದ್ಧ ಕೆಲ ಪಾಕ್ ಆಟಗಾರರು ನಡೆಸಿದ್ದ ಷಡ್ಯಂತರದ ವಿಚಾರವಾಗಿ ಮುಕ್ತವಾಗಿ ಮಾತನಾಡಿದ್ದಾರೆ. “ತಮ್ಮ ಬೌಲಿಂಗ್ ಶೈಲಿಯಲ್ಲಿ ಲೋಪ ಇದೆ ಎಂದು ಹೇಳಿ ನನ್ನ ಕ್ರಿಕೆಟ್ ಬದುಕನ್ನು ಮುಗಿಸಲು ಮುಂದಾಗಿದ್ದೇ ನಮ್ಮವರು. ನಾನು ಕ್ರಿಕೆಟ್ನಲ್ಲಿ ನಂ.1 ಸ್ಥಾನದ ಜತೆಗೆ ಕ್ರಿಕೆಟ್ನಲ್ಲಿ ಬೆಳೆಯುತ್ತಿರುವುದನ್ನು ಸಹಿಸಿಕೊಳ್ಳಲು ಆಗದೆ ಈ ರೀತಿ ಮಾಡಿದ್ದರು. ಏಕೆಂದರೆ ನಾನು ಅವರ ದಾಖಲೆಗಳನ್ನು ಮುರಿಯಬಲ್ಲೆ ಎಂಬ ಭಯ ಅವರಲ್ಲಿತ್ತು. ಒಂದೊಮ್ಮೆ ನಾನು ಭಾರತದಲ್ಲಿ ಜನಿಸಿ ಭಾರತ ಪರ ಆಡುತ್ತಿದ್ದರೆ ನನಗೆ ಈ ಸ್ಥಿತಿ ಬರುತ್ತಿರಲಿಲ್ಲ. ನಾನು 1 ಸಾವಿರ ವಿಕೆಟ್ ಪಡೆಯುತ್ತಿದ್ದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ Majid Ali Suicide: ಆತ್ಮಹತ್ಯೆಗೆ ಶರಣಾದ ಪಾಕಿಸ್ತಾನದ ಸ್ಟಾರ್ ಸ್ನೂಕರ್ ಮಜೀದ್ ಅಲಿ
35 ಟೆಸ್ಟ್‌ಗಳಿಂದ 178 ವಿಕೆಟ್, 113 ಏಕದಿನ ಪಂದ್ಯಗಳಿಂದ 184 ವಿಕೆಟ್ ಹಾಗೂ 64 ಟಿ20 ಪಂದ್ಯಗಳಿಂದ 85 ವಿಕೆಟ್ ಉರುಳಿಸಿದ್ದು ಸಯೀದ್ ಅಜ್ಮಲ್ ಸಾಧನೆ. 2014ರ ಆಗಸ್ಟ್‌ನಲ್ಲಿ ಕೊನೆಯ ಟೆಸ್ಟ್ ಆಡಿದ್ದ ಅಜ್ಮಲ್, 2015ರ ಎಪ್ರಿಲ್‌ನಲ್ಲಿ ಕೊನೆಯ ಸಲ ಏಕದಿನ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು.
ವಿಶ್ವ ಕಪ್ ವಿಚಾರದಲ್ಲಿ ಮುಗಿಯದ ಪಾಕ್ ನಾಟಕ
2023ರ ಏಕದಿನ ವಿಶ್ವಕಪ್(ICC World Cup) ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡು ಯಾವ ದೇಶ ಯಾರ ವಿರುದ್ಧ ಆಡಲಿದೆ ಹೀಗೆ ಎಲ್ಲ ವಿಚಾರವು ಅಂತಿಮಗೊಂಡಿದೆ. ಆದರೆ ಪಾಕ್ ಮಾತ್ರ ತನ್ನ ನಾಟಕವನ್ನು ನಿಲ್ಲಿಸುವಂತೆ ತೋರುತ್ತಿಲ್ಲ. ಭಾರತಕ್ಕೆ ಪ್ರಯಾಣಿಸಲು ಅನುಮತಿ ಕೋರಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪಾಕ್ ಸರ್ಕಾರಕ್ಕೆ ಪತ್ರ ಬರೆದಿದೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಆಂತರಿಕ ಮತ್ತು ವಿದೇಶಾಂಗ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ಪಿಸಿಬಿ ಐದು ಸ್ಥಳಗಳ ಬಗ್ಗೆ ಸರ್ಕಾರಕ್ಕೆ ಏನಾದರೂ ಆಕ್ಷೇಪವಿದೆಯೇ ಎಂದು ಕೇಳಿದೆ. ಬಾಬರ್ ಅಜಮ್ ಪಡೆ ಹೈದರಾಬಾದ್, ಚೆನ್ನೈ, ಬೆಂಗಳೂರು, ಕೋಲ್ಕತಾ ಮತ್ತು ಅಹಮದಾಬಾದ್ನಲ್ಲಿ ತನ್ನ ಪಂದ್ಯಗಳನ್ನು ಆಡಲಿದೆ. ಈ ಪಂದ್ಯದ ಸ್ಥಳಗಳನ್ನು ಅಂತಿಮಗೊಳಿಸುವಂತೆ ಹೇಳಿದೆ.