Site icon Vistara News

Team India | ಆಡಲು ಆಗದಿದ್ದರೆ ಮೊಟ್ಟೆ ಅಥವಾ ಬಾಳೆ ಹಣ್ಣಿನ ಅಂಗಡಿ ಇಡಿ; ಕಪಿಲ್​ ದೇವ್​ ಹೇಳಿದ್ದು ಯಾರಿಗೆ?

kapildev

ಮುಂಬಯಿ : ಟೀಮ್​ ಇಂಡಿಯಾದ ಆಟಗಾರರು ಅತಿಯಾದ ಒತ್ತಡ ಅನುಭವಿಸುತ್ತಿದ್ದಾರೆ ಎಂಬುದು ಇತ್ತೀಚಿನ ದಿನಗಳಲ್ಲಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಆಟಗಾರರು ಪದೇಪದೆ ಗಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಮಾತನ್ನು ಹೇಳಲಾಗುತ್ತಿದೆ. ಅದರೆ, 1983ರ ವಿಶ್ವ ಕಪ್​ ವಿಜೇತ ಭಾರತ ತಂಡದ ನಾಯಕ ಕಪಿಲ್​ ದೇವ್​ ಅವರು ಮಾತ್ರ ಈ ವಾದವನ್ನು ಸಾರಸಗಟವಾಗಿ ತಿರಸ್ಕರಿಸುತ್ತಿದ್ದಾರೆ. ಒತ್ತಡ ಎಂದು ಹೇಳಲೇಬಾರದು ಎಂಬುದಾಗಿ ಅವರು ಹೇಳಿದ್ದಾರೆ.

ಕೋಲ್ಕೊತಾದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು “ನಮ್ಮ ದೇಶದಲ್ಲಿ 100 ಕೋಟಿಗೂ ಮಿಕ್ಕಿ ಜನ ಸಂಖ್ಯೆ ಇದೆ. ಅದರಲ್ಲಿ 20 ಮಂದಿ ಮಾತ್ರ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆಯುತ್ತಾರೆ. ಹೀಗಿರುವಾಗ ಅವರೇ ದೇಶಕ್ಕಾಗಿ ಆಡದಿದ್ದರೆ ಹೇಗೆ? ಆಟ ಆಡುವ ವೇಳೆ ಒತ್ತಡ ಎಂದು ಹೇಳಿಕೊಂಡು ರಜೆ ಪಡೆಯುವುದು ಸರಿಯಲ್ಲ. ದೇಶವನ್ನು ಪ್ರತಿನಿಧಿಸುವ ತಂಡದಲ್ಲಿ ಅವಕಾಶ ಪಡೆಯುವುದು ಅಪರೂಪದ ವಿಷಯ. ಅದನ್ನೇ ಒತ್ತಡ ಎಂದರೇ ಹೇಗೆ” ಎಂಬುದಾಗಿ ಅವರು ಪ್ರಶ್ನಿಸಿದರು.

“ನಾವು ಐಪಿಎಲ್​ನಲ್ಲಿ ಆಡುತ್ತಿದ್ದೇವೆ. ನಮಗೆ ಸಾಕಷ್ಟು ಒತ್ತಡವಿದೆ ಎಂದೆಲ್ಲ ಹೇಳುವುದನ್ನು ಕೇಳಿದ್ದೇನೆ. ಒತ್ತಡ ಇರುವಾಗ ಅಲ್ಲಿ ಆಡು ಎಂದು ಹೇಳಿದವರು ಯಾರು?. ಒಂದು ವೇಳೆ ಟೀಕೆಗಳನು ಎದುರಾಗಬಹುದು ಎಂಬ ಭಯವಿದ್ದರೆ ಅಡುವುದೇ ಬೇಡ. ಬಾಳೆ ಹಣ್ಣಿನದ್ದೊ, ಮೊಟ್ಟೆಯದ್ದೋ ಅಂಗಡಿ ಇಡಬೇಕು,” ಎಂದು ಅವರು ಹೇಳಿದರು.

ಇದನ್ನೂ ಓದಿ | Rohit Sharma | ಅತಿ ವೇಗದಲ್ಲಿ 500 ಸಿಕ್ಸರ್‌ಗಳ ದಾಖಲೆ ಬರೆದ ಟೀಮ್ ಇಂಡಿಯಾ ನಾಯಕ ರೋಹಿತ್‌ ಶರ್ಮ

Exit mobile version