Site icon Vistara News

INDvsBAN | ನೀವು ಆಡದೇ ಹೋದರೆ ಅವಕಾಶ ಕಳೆದುಕೊಳ್ಳುತ್ತೀರಿ; ಗವಾಸ್ಕರ್‌ ಎಚ್ಚರಿಸಿದ್ದು ಯಾರಿಗೆ?

ಮುಂಬಯಿ : ಬಾಂಗ್ಲಾದೇಶ ವಿರುದ್ಧ ಮೊದಲ ಪಂದ್ಯದಲ್ಲಿ (INDvsBAN) ಭಾರತ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿತ್ತು. ಹೀಗಾಗಿ ಟೀಮ್‌ ಇಂಡಿಯಾ ಮೊದಲ ಪಂದ್ಯದಲ್ಲಿ ವಿರೋಚಿತ ಸೋಲು ಅನುಭವಿಸಿತ್ತು. ಆ ಬಳಿಕದಿಂದ ಟೀಮ್‌ ಇಂಡಿಯಾದ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಅಕ್ಷೇಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಭಾರತ ತಂಡದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಅವರು ಬಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಶ್ರೇಯಸ್ ಅಯ್ಯರ್‌ ಹಾಗೂ ಕೆ. ಎಲ್‌ ರಾಹುಲ್‌ ಅವರಿಗೆ ಎಚ್ಚರಿಕೆ ಕೊಟ್ಟಿದ್ದು, ನೀವು ಸರಿಯಾಗಿ ಆಡದೇ ಹೋದರೆ ಬೇರೆಯವರು ನಿಮ್ಮ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಸೂರ್ಯಕುಮಾರ್‌ ಯಾದವ್‌, ಹಾರ್ದಿಕ್ ಪಾಂಡ್ಯ ಹಾಗೂ ಸಂಜು ಸ್ಯಾಮ್ಸನ್‌ ಭಾರತ ತಂಡದ ಮಧ್ಯಮ ಕ್ರಮಾಂಕದ ಸ್ಥಾನವನ್ನು ತುಂಬಲು ಕಾಯುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಮಾತನಾಡಿದ ಗವಾಸ್ಕರ್ ಅವರು, ಕೆ. ಎಲ್‌ ರಾಹುಲ್ ಹಾಗೂ ಶ್ರೇಯಸ್‌ ಅಯ್ಯರ್‌ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಇವರಲ್ಲಿ ರಾಹುಲ್‌ ವಿಕೆಟ್ ಕೀಪಿಂಗ್ ಮಾಡಬಲ್ಲರು. ಶ್ರೇಯಸ್‌ ಅಗತ್ಯ ಸಂದರ್ಭದಲ್ಲಿ ಬೌಲಿಂಗ್ ಕೂಡ ಮಾಡಬಲ್ಲರು. ಹೀಗಾಗಿ ಅವರಿಬ್ಬರು ಮುಂದಿನ ವಿಶ್ವ ಕಪ್ ತಂಡಕ್ಕೆ ಉತ್ತಮ ಆಯ್ಕೆ. ಅದರೆ, ಸೂಕ್ತ ಕಾಲಕ್ಕೆ ಪ್ರದರ್ಶನ ನೀಡದೇ ಹೋದರೆ ಹಾರ್ದಿಕ್‌ ಪಾಂಡ್ಯ ಸ್ಥಾನ ಆಕ್ರಮಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.

ಹಾರ್ದಿಕ್ ಪ್ರಸಕ್ತ ವರ್ಷ ಇಂಗ್ಲೆಂಡ್ ವಿರುದ್ಧ ಕೇವಲ ಮೂರು ಏಕ ದಿನ ಪಂದ್ಯಗಳಲ್ಲಿ ಆಡಿದ್ದಾರೆ. ಒಂದು ಅರ್ಧಶತಕದೊಂದಿಗೆ ಎರಡು ಇನ್ನಿಂಗ್ಸ್‌ಗಳಲ್ಲಿ 100 ರನ್ ಗಳಿಸಿದ್ದು, ಮೂರು ಇನ್ನಿಂಗ್ಸ್‌ನಲ್ಲಿ 17 ಓವರ್‌ಗಳನ್ನು ಮಾಡಿ, ಆರು ವಿಕೆಟ್‌ಗಳನ್ನು ಪಡೆದಿದ್ದಾರೆ. ಹೀಗಾಗಿ ಅವರು ವಿಶ್ವ ಕಪ್‌ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ.

ಇದನ್ನೂ ಓದಿ | Team India | ಕೆ ಎಲ್‌ ರಾಹುಲ್‌ ಬೆಂಬಲಕ್ಕೆ ನಿಂತ ಎಲ್‌ಎಸ್‌ಜಿ ಕೋಚ್‌, ಗರಿಷ್ಠ ರೇಟಿಂಗ್ಸ್‌ ಕೊಡುವೆ ಎಂದರು

Exit mobile version