ದುಬೈ : ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಏಷ್ಯಾ ಕಪ್‌ನ ಲೀಗ್ ಹಂತದ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಮೂಲಕ ೧೦೦ ಟಿ೨೦ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಹೊಸ ಮೈಲುಗಲ್ಲು ಸ್ಥಾಪಿಸಿದ್ದರು. ಅಂತೆಯೇ ಭಾನುವಾರ ಸಂಜೆ ನಡೆಯುವ ಸೂಪರ್-೪ ಹಂತದ ಪಂದ್ಯದಲ್ಲಿ ಅವರು ಮೂರು ಸಿಕ್ಸರ್‌ಗಳೇನಾದರೂ ಬಾರಿಸಿದರೆ ಸಿಕ್ಸರ್‌ಗಳ ಶತಕ ಬಾರಿಸಿದ ದಾಖಲೆ ಸೃಷ್ಟಿಸಲಿದ್ದಾರೆ.
ವಿರಾಟ್ ಕೊಹ್ಲಿ ಇದುವರೆಗೆ ೧೦೧ ಅಂತಾರಾಷ್ಟ್ರೀಯ ಟಿ೨೦ ಪಂದ್ಯಗಳನ್ನು ಆಡಿದ್ದು ೯೭ ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಹೀಗಾಗಿ ಭಾನುವಾರದ ಪಂದ್ಯದಲ್ಲಿ ಅವರು ಮೂರು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಹೊಸ ಸಾಧನೆ ಮಾಡಬಹುದಾಗಿದೆ. ಅಲ್ಲದೆ, ಈ ಸಾಧನೆ ಮಾಡಿದ ವಿಶ್ವದ ೧೦ನೇ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ.
ಭಾರತ ಪರ ಅತಿ ಹೆಚ್ಚು ಸಿಕ್ಸರ್ ಬಾರಿಸಿದವರಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ಮೊದಲ ಸ್ಥಾನದಲ್ಲಿದ್ದಾರೆ. ಅವರು ೧೩೪ ಪಂದ್ಯಗಳಲ್ಲಿ ೧೬೫ ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಡೇವಿಡ್ ವಾರ್ನರ್, ಕ್ರಿಸ್‌ಗೇಲ್, ಇಯಾನ್ ಮಾರ್ಗನ್ ಈ ಸಾಧನೆ ಮಾಡಿದ ವಿಶ್ವದ ಇತರ ಆಟಗಾರರು.
ಇದನ್ನೂ ಓದಿ | Team India | ಸೂರ್ಯನನ್ನು ಅಂದು ದಿಟ್ಟಿಸಿ ನೋಡಿದ್ದ ವಿರಾಟ್ ಕೊಹ್ಲಿ ಈಗ ಶಿರ ಬಾಗಿ ನಮಿಸಿದರು