ರಾಜ್ಕೋಟ್ : ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಕೊನೇ ಪಂದ್ಯ ನಡೆಯುವ ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಮ್ ಬ್ಯಾಟರ್ಗಳ ಸ್ವರ್ಗ ಎಂದೇ ಹೇಳಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇರುವ ಈ ಸ್ಟೇಡಿಯಮ್ನಲ್ಲಿ ರನ್ ಶಿಖರವೇ ನಿರ್ಮಾಣವಾಗಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಇಲ್ಲಿ ಪಂದ್ಯ ನಡೆಯುವಾಗ ಟಾಸ್ ಗೆದ್ದವನೇ ಬಾಸ್ ಎಂಬ ಮಾತಿದೆ. ಯಾಕೆಂದರೆ ಚೇಸಿಂಗ್ ಮಾಡುವುದು ಸುಲಭ.
ರಾಜ್ಕೋಟ್ ಪಿಚ್ನಲ್ಲಿ ಬ್ಯಾಟರ್ಗಳು ಸುಲಭವಾಗಿ ರನ್ ಗಳಿಸಬಹುದು. ಇದು ಟಿ20 ಮಾದರಿಯ ಸೂಕ್ತ ಪಿಚ್ ಕೂಡ. ಅಭಿಮಾನಿಗಳಿಗೆ ಬೌಂಡರಿ ಮತ್ತು ಸಿಕ್ಸರ್ಗಳ ಸಂಭ್ರಮವನ್ನು ಆಚರಿಸಲು ಸಾಧ್ಯವಿದೆ. ಅಂತೆಯೇ ಮೊದಲು ಬ್ಯಾಟ್ ಮಾಡುವ ತಂಡ ಇಲ್ಲಿ ಸೋಲು ಕಂಡಿರುವುದು ಹೆಚ್ಚು. ಇಬ್ಬನಿ ಪರಿಣಾಮದಿಂದಾಗಿ ಎರಡನೇ ಇನಿಂಗ್ಸ್ನಲ್ಲಿ ಬೌಲರ್ಗಳು ಚೆಂಡನ್ನು ಬೇಕಾದ ಹಾಗೆ ತಿರುಗಿಸಲು ತಿಣುಕಾಡಬೇಕಾಗುತ್ತದೆ. ಹೀಗಾಗಿ ಎಷ್ಟೇ ದೊಡ್ಡ ಮೊತ್ತವಾದರೂ ಚೇಸ್ ಮಾಡುವುದಕ್ಕೆ ಸಾಧ್ಯವಿದೆ.
ರಾಜ್ಕೋಟ್ನಲ್ಲಿ ಶನಿವಾರ ಮಳೆ ಬರುವ ಸಾಧ್ಯತೆಗಳು ಇಲ್ಲ. ರಾತ್ರಿಯ ವೇಳೆಗೆ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ತಲುಪಲಿದೆ. ತಂಪಾದ ಸಂಜೆಯಲ್ಲಿ ರನ್ ಹೊಳೆ ಹರಿಯಲಿದೆ. ಲಂಕಾ ತಂಡ ಈ ಗ್ರೌಂಡ್ನಲ್ಲಿ ಮೊದಲ ಬಾರಿಗೆ ಆಡುತ್ತಿದೆ. ಅನುಭವ ಕಡಿಮೆ. ಆದರೆ, ಆ ತಂಡದ ಬ್ಯಾಟಿಂಗ್ ವೈಖರಿ ರಾಜ್ಕೋಟ್ಗೆ ಸೂಕ್ತವಾಗಿದೆ.
ಪಂದ್ಯದ ವಿವರ
ಸ್ಥಳ : ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಮ್, ರಾಜ್ಕೋಟ್
ಸಮಯ: ಸಂಜೆ 7 ಗಂಟೆಯಿಂದ ಪಂದ್ಯ ಆರಂಭ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್, ಲೈವ್ ಸ್ಟ್ರೀಮಿಂಗ್: ಡಿಸ್ನಿ ಹಾಟ್ ಸ್ಟಾರ್
ಸಂಭಾವ್ಯ ತಂಡಗಳು
ಭಾರತ: ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್ಕೀಪರ್), ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಅಕ್ಷರ್ ಪಟೇಲ್, ಶಿವಂ ಮಾವಿ, ಉಮ್ರಾನ್ ಮಲಿಕ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಹಲ್.
ಶ್ರೀಲಂಕಾ:
ದಸುನ್ ಶನಕ (ನಾಯಕ), ಪಾಥು ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್) ಧನಂಜಯ ಡಿ ಸಿಲ್ವ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಷೆ, ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ಕಸುನ್ ರಜಿತ, ದಿಲ್ಶನ್ ಮದುಶಂಕ.
ಇದನ್ನೂ ಓದಿ | INDvsSL | ಯಾರಾಗುತ್ತಾರೆ ರಾಜ್ಕೋಟ್ನಲ್ಲಿ ರಾಜ? ಸರಣಿ ಗೆಲ್ಲಬೇಕಾದರೆ ಭಾರತ ತಂಡ ಏನು ಮಾಡಬೇಕು?