ಕರಾಚಿ: ಭಾರತ(IND vs PAK) ವಿರುದ್ಧದ ಪಂದ್ಯದಲ್ಲಿ ಸೋಲಿನ ಬಳಿಕ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ(Babar Azam) ಅವರು ವಿರಾಟ್ ಕೊಹ್ಲಿಯ ಹಸ್ತಾಕ್ಷರವುಳ್ಳ ಟೀಮ್ ಇಂಡಿಯಾದ ಜೆರ್ಸಿಯನ್ನು ಪಡೆದಿದ್ದರು. ಉಭಯ ದೇಶಗಳ ಮಧ್ಯೆ ರಾಜಕೀಯ ಸಂಬಂಧ ಹದಗೆಟ್ಟಿದ್ದರೂ, ಎರಡು ತಂಡಗಳ ಆಟಗಾರರ ಈ ಉತ್ತಮ ಸ್ನೇಹ ಬಾಂಧವ್ಯಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದ್ದವು. ಆದರೆ ಇದನ್ನು ಪಾಕ್ನ ಮಾಜಿ ಆಟಗಾರ ವಾಸಿಂ ಅಕ್ರಮ್(Wasim Akram) ಖಂಡಿಸಿದ್ದಾರೆ.
ಪಂದ್ಯ ಬಳಿಕ ಸಂದರ್ಶನದಲ್ಲಿ ಮಾತನಾಡಿದ ಅಕ್ರಮ್ ಅವರು, ನಾನು ಚಿತ್ರವನ್ನು ನೋಡುವಾಗ ನಿಖರವಾಗಿ ಹೇಳುತ್ತೇನೆ. ಇದು ಬಾಬರ್ ಮಾಡಿದ್ದು ನಿಜಕ್ಕೂ ತಪ್ಪು. ಅದರಲ್ಲೂ ಈ ಪರಿಸ್ಥಿತಿಯಲ್ಲಿ ಆತ ಹೀಗೆ ಮಾಡಬಾರದಿತ್ತು. ಜೆರ್ಸಿ ಪಡೆದಿರುವ ಬಗ್ಗೆ ನನಗೆ ಏನು ಆಕ್ಷೇಪ ಇಲ್ಲ. ಆದರೆ ಇದನ್ನೂ ಸಾರ್ವಜನಿಕವಾಗಿ ಪಡೆದದ್ದು ನಿಜಕ್ಕೂ ತಪ್ಪು” ಎಂದಿದ್ದಾರೆ.
“ಬಾಬರ್ ಅವರು ಕೊಹ್ಲಿಯಿಂದ ಶರ್ಟ್‌ಗಳನ್ನು ಕ್ಯಾಮೆರಾಗಳ ಮುಂದೆ ಪಡೆಯುವ ಬದಲು ಡ್ರೆಸ್ಸಿಂಗ್ ರೂಮ್‌ನಲ್ಲಿ ಪಡೆಯಬೇಕಿತ್ತು. ಅವರ ಚಿಕ್ಕಪ್ಪನ ಮಗ ಕೊಹ್ಲಿಯ ಟಿ ಶರ್ಟ್ ಪಡೆದುಕೊಂಡು ಬರಲು ಹೇಳಿದ್ದಾರೆ. ಇದನ್ನು ಡ್ರೆಸ್ಸಿಂಗ್ ರೂಮ್‌ಗೆ ಹೋಗಿ ಪಡೆದುಕೊಳ್ಳಲಿ ಸಾರ್ವಜನಿಕವಾಗಿ ಹೀಗೆ ಮಾಡಬಾರದು. ನಾನು ಏಕೆ ಈ ಮಾತನ್ನು ಹೇಳುತ್ತಿದ್ದೇನೆ ಎಂದರೆ ಒಂದೆಡೆ ಪಂದ್ಯ ಸೋತ ನೋವು ಪಾಕಿಸ್ತಾನದ ಜನತೆಯಲ್ಲಿ ಕಾಡುತ್ತಿರುತ್ತದೆ. ಅಲ್ಲದೆ ಎಲ್ಲರು ತಾಳ್ಮೆಯನ್ನು ಕಳೆದುಕೊಂಡಿರುತ್ತಾರೆ. ಇಂತಹ ಸಂದರ್ಭದಲ್ಲಿ ಬಾಬರ್ ಈ ರೀತಿ ಮಾಡಿದ್ದು ಪಾಕ್ ಅಭಿಮಾನಿಗಳಿಗೆ ಇನ್ನಷ್ಟು ಕೆರಳಿಸುಂತೆ ಮಾಡುತ್ತದೆ. ಬಾಬರ್ ಅವರ ಈ ನಡೆಗೆ ನಾನು ಕೂಡ ವಿರೋಧ ವ್ಯಕ್ತಪಡಿಸುತ್ತೇನೆ ಎಂದು ಬಹಿರಂಗವಾಗಿಯೇ ತಿವಿದಿದ್ದಾರೆ.
ಪಂದ್ಯ ಮುಗಿದ ನಂತರ ಕ್ರೀಡಾಂಗಣದಲ್ಲೇ ಎರಡು ತಂಡಗಳ ಆಟಗಾರರು ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದರು. ಈ ನಡುವೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಜತೆ ವಿರಾಟ್ ಕೊಹ್ಲಿ ಸ್ನೇಹಯುತವಾಗಿ ಕೆಲ ಕಾಲ ಮಾತುಕತೆ ನಡೆಸಿದರು. ಈ ವೇಳೆ ವಿರಾಟ್ ತಮ್ಮ ಜೆರ್ಸಿಯನ್ನು ಆಟೋಗ್ರಾಫ್ ಹಾಕಿ ಉಡುಗೊರೆಯಾಗಿ ನೀಡಿದರು. ಇದು ಹೃದಯಸ್ಪರ್ಶಿ ಕ್ಷಣಕ್ಕೆ ಸಾಕ್ಷಿಯಾಗಿತ್ತು.
ಇದನ್ನೂ ಓದಿ IND vs PAK: ಡಿಜಿಟಲ್ ವೀಕ್ಷಣೆಯಲ್ಲಿ ದಾಖಲೆ ಬರೆದ ಇಂಡೋ-ಪಾಕ್ ಪಂದ್ಯ
Wasim Akram says "Babar Azam shouldn't have asked Virat Kohli his Tshirt"pic.twitter.com/KREc7H41Pm#INDvsPAK #indvspak2023 #Rizwan #RohitSharma𓃵 #IndiaVsPakistan #CWC23 #ICCCricketWorldCup23 pic.twitter.com/NEhiFEzEMp
— ICT Fan (@Delphy06) October 14, 2023
ಸೋಲಿಗೆ ಕಾರಣ ತಿಳಿಸಿದ ಬಾಬರ್
ಈ ಪಂದ್ಯದಲ್ಲಿ ಅನುಭವಿಸಿದ ಸೋಲಿಗೆ ಪಾಕ್ ನಾಯಕ ಬಾಬರ್ ಕಾರಣ ತಿಳಿಸಿದ್ದಾರೆ. ‘ನಾವು ಉತ್ತಮ ಆರಂಭ ಪಡೆದೆವು. ಆದರೆ ಆ ಬಳಿಕ ಭಾರತೀಯ ಬೌಲರ್ಗಳು ಹಿಡಿ ಸಾಧಿಸಿದರು. ನಾನು ಮತ್ತು ಇಮಾಮ್ ಆ ಬಳಿಕ ರಿಜ್ವಾನ್ ನಡೆಸಿದ ಜತೆಯಾಟ ಮತ್ತೆ ತಂಡದ ನೆರವಿಗೆ ಸಿಗದೇ ಹೋಗಿದ್ದು ಸೋಲಿಗೆ ಪ್ರಮುಖ ಕಾರಣವಾಯಿತು. ಭಾರತ ತಂಡದ ನಾಯಕ ರೋಹಿತ್ ಶರ್ಮ ಅವರು ನಿಜಕ್ಕೂ ಅಮೋಘ ಬ್ಯಾಟಿಂಗ್ ನಡೆಸಿದರು” ಎಂದು ಹೇಳಿದರು.
ಇದನ್ನೂ ಓದಿ ಗೆಲುವನ್ನು ಇಸ್ರೇಲ್ ಜನತೆಗೆ ಅರ್ಪಿಸಿದರೇ ಸಿರಾಜ್? ಅಸಲಿ ಸತ್ಯ ಇಲ್ಲಿದೆ
ಗೆಲುವಿನ ಶ್ರೇಯ ಬೌಲರ್ಗಳಿಗೆ
ನಾಯಕ ರೋಹಿತ್ ಶರ್ಮ ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ ಗಮನಸೆಳೆದರು. 63 ಎಸೆತಗಳಲ್ಲಿ 86 ರನ್ ಗಳಿಸಿ ನೆರೆದಿದ್ದ ಅಭಿಮಾನಿಗಳಿಗೆ ಬರಪೂರ ರಂಜನೆ ನೀಡಿದರು. ಅವರ ಸೊಗಸಾದ ಈ ಇನಿಂಗ್ಸ್ನಲ್ಲಿ ಬರೋಬ್ಬರಿ 6 ಸಿಕ್ಸರ್ ಮತ್ತು 6 ಬೌಂಡರಿ ಸಿಡಿಯಿತು. ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ರೋಹಿತ್, ಗೆಲುವಿನ ಶ್ರೇಯವನ್ನು ಬೌಲರ್ಗಳಿಗೆ ಅರ್ಪಿಸಿದರು. “ನಮ್ಮ ತಂಡದ ಬೌಲರ್ಗಳು ಈ ಪಂದ್ಯದಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರಿದ್ದಾರೆ. ಈ ಗೆಲುವು ಅವರಿಗೆ ಸಲ್ಲುತ್ತದೆ’ ಎಂದರು.