Site icon Vistara News

ಬಾಬರ್ ಅಜಂ ಮೇಲೆ ಗಂಭೀರ ಆರೋಪ ಹೊರಿಸಿದ ಇಫ್ತಿಕರ್ ಅಹ್ಮದ್

babar azam and iftikhar ahmed

ಕರಾಚಿ: ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ(icc world cup 2023) ಪಾಕಿಸ್ತಾನ ತಂಡ(pakistan cricket team) ನಿರೀಕ್ಷಿತ ಪ್ರದರ್ಶನ ತೋರಿಲ್ಲ ಎನ್ನುವ ಕಾರಣಕ್ಕೆ ತಂಡದ ನಾಯಕ ಬಾಬರ್​ ಅಜಂ ಅವರನ್ನು ನಾಯಕತ್ವದ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದೀಗ ಬಾಬರ್​ ಅಜಂ(Babar Azam) ವಿರುದ್ಧ ಸಹ ಆಟಗಾರ ಇಫ್ತಿಕರ್ ಅಹ್ಮದ್ (Iftikhar Ahmed) ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

ಪಾಕ್​ನ ಸ್ಥಳೀಯ ಮಾಧ್ಯಮವೊಂದರಲ್ಲಿ ಮಾತನಾಡಿದ ಇಫ್ತಿಕರ್, ‘ಏಕದಿನ ವಿಶ್ವಕಪ್​ನಲ್ಲಿ ಬಾಬರ್ ನನ್ನನ್ನು ಸರಿಯಾಗಿ ಬಳಸಿಕೊಂಡಿಲ್ಲ. ಅವರಿಗೆ ನನ್ನ ಬೌಲಿಂಗ್​ ಮೇಲೆ ವಿಶ್ವಾಸವಿರಲಿಲ್ಲ ಎಂದು ಹೇಳಿದ್ದಾರೆ. ಇದು ಈಗ ಬಾರಿ ಚರ್ಚೆಗೆ ಗ್ರಾಸವಾಗಿದೆ.

ಇಫ್ತಿಕರ್​ ಬಳಿ ಸಂದರ್ಶಕ, ನೀವು ಏಷ್ಯಾಕಪ್​ ಟೂರ್ನಿಯಲ್ಲಿ ಉತ್ತಮ ಬೌಲಿಂಗ್​ ಪ್ರದರ್ಶನ ತೋರಿದ್ದರೂ, ಏಕೆ ನಿಮಗೆ ಏಕದಿನ ವಿಶ್ವಕಪ್​ನಲ್ಲಿ ಬೌಲಿಂಗ್​ ನೀಡಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಇಫ್ತಿಕರ್, ತಂಡದ ನಾಯಕ ಬಾಬರ್​ಗೆ ನನ್ನ ಬೌಲಿಂಗ್‌ ಬಗ್ಗೆ ವಿಶ್ವಾಸ ಮತ್ತು ನಂಬಿಕೆ ಇರಲಿಲ್ಲ. ನಾನು ಹಲವು ಬಾರಿ ಬೌಲಿಂಗ್​ ಕೇಳಿದರೂ ಆತ ನನ್ನಗೆ ಬೌಲಿಂಗ್​ ಅವಕಾಶವೇ ನೀಡಲಿಲ್ಲ. ಇದು ಕೇವಲ ನನ್ನ ವಿಚಾರದಲ್ಲಿ ಮಾತ್ರವಲ್ಲ ತಂಡದ ಕೆಲ ಆಟಗಾರರಿಗೂ ಇದೇ ಪರಿಸ್ಥಿತಿ ಎದುರಾಗಿತ್ತು. ಒಂದು ಚೂರು ಕೂಡ ಬಾಬರ್​ಗೆ ತಂಡದ ಆಟಗಾರರ ಮೇಲೆ ವಿಶ್ವಾಸ ಇರಲಿಲ್ಲ. ಇದೇ ಕಾರಣದಿಂದ ತಂಡ ಲೀಗ್​ ಹಂತದಲ್ಲೇ ಸೋಲು ಕಾಣುವಂತಾಯಿತು ಎಂದು ಹೇಳಿದ್ದಾರೆ.

ಏಕದಿನ ವಿಶ್ವಕಪ್‌ನಲ್ಲಿ ತಂಡದ ಇತರ ಬೌಲರ್​ಗಳಿಗೆ ಹೊಲಿಸಿಕೊಂಡರೆ ನಾನು ಅತ್ಯಂತ ಕಡಿಮೆ ರನ್ ನೀಡಿದ್ದೆ. ಅಲ್ಲದೆ ಟೂರ್ನಿಯಲ್ಲಿ ಕೇವಲ 5.59ರ ಎಕಾನಮಿಯಲ್ಲಿ ರನ್ ನೀಡಿ 16 ವಿಕೆಟ್ ಪಡೆದಿದ್ದೆ. ಆದರೆ ಬಾಬರ್ ನನಗೆ ಹೆಚ್ಚಿನ ಬೌಲಿಂಗ್ ನೀಡಲಿಲ್ಲ. ಸಂಪೂರ್ಣ 10 ಓವರ್ ಬೌಲ್ ಮಾಡಲು ಅವಕಾಶ ನೀಡಲಿಲ್ಲ ಎಂದು ಇಫ್ತಿಕರ್ ಹೇಳಿದ್ದಾರೆ.

ಬಾಬರ್​ ರಾಜೀನಾಮೆ ಬೆನ್ನಲ್ಲೇ ಪಾಕ್ ಕ್ರಿಕೆಟ್ ಮಂಡಳಿ ಶಾನ್ ಮಸೂದ್ ಅವರನ್ನು ಟೆಸ್ಟ್ ತಂಡದ ನಾಯಕನಾಗಿ, ಶಾಹೀನ್ ಅಫ್ರಿದಿ ಅವರನ್ನು ಟಿ 20 ನಾಯಕನಾಗಿ ಮತ್ತು ಮೊಹಮ್ಮದ್ ಹಫೀಜ್ ಅವರನ್ನು ಪಾಕಿಸ್ಥಾನ ಪುರುಷರ ತಂಡದ ಹೊಸ ನಿರ್ದೇಶಕರಾಗಿ ಮಿಕ್ಕಿ ಆರ್ಥರ್ ಬದಲಿಗೆ ಘೋಷಿಸಿತ್ತು.

ಇದನ್ನೂ ಓದಿ Pakistan Cricket Team : ಬಾಬರ್​ ಗೇಟ್​ಪಾಸ್​, ಹೊಸಬರಿಗೆ ಪಟ್ಟ ಕಟ್ಟಿದ ಪಿಸಿಬಿ

2019 ರಲ್ಲಿ ಸರ್ಫರಾಜ್ ಅಹ್ಮದ್ ಬದಲಿಗೆ ಬಾಬರ್ ಪಾಕ್ ತಂಡದ ಏಕದಿನ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರು 2021 ರಲ್ಲಿ ಟೆಸ್ಟ್ ನಾಯಕನಾಗಿದ್ದರು. ಅವರ ನಾಯಕತ್ವದಲ್ಲಿ, ಪಾಕಿಸ್ಥಾನವು ಏಷ್ಯಾ ಕಪ್ ಮತ್ತು 2022 ರಲ್ಲಿ ಟಿ20 ವಿಶ್ವಕಪ್‌ನ ಫೈನಲ್ ತಲುಪಿತ್ತು.

Exit mobile version