ಬೆಂಗಳೂರು: ಈ ಬಾರಿಯ ಐಪಿಎಲ್(IPL 2024) ಆಟಗಾರರ ಮಿನಿ ಹರಾಜಿನಲ್ಲಿ(IPL 2024 auction) ಕೆಲ ಅಚ್ಚರಿಯ ಆಯ್ಕೆಗಳು ನಡೆದವು. ಸ್ಟಾರ್ ಆಟಗಾರರು ಅನ್ಸೋಲ್ಡ್ ಆದರೆ, ಅನ್ಕ್ಯಾಪ್ಡ್ ಆಟಗಾರರು ನಿರೀಕ್ಷೆಯೇ ಮಾಡದ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಅಚ್ಚರಿ ಎಂದರೆ ಟಿ20 ನಂ.1 ಬೌಲರ್(No.1 bowler in ICC T20 rankings) ಆದೀಲ್ ರಶೀದ್(Adil Rashid) ಅವರು ಅನ್ಸೋಲ್ಡ್ ಆಗಿರುವುದು.
ಹೌದು, ಆಟಗಾರರ ಹರಾಜಿನಲ್ಲಿ ಇಂಗ್ಲೆಂಡ್ನ ಅನುಭವಿ ಸ್ಪಿನ್ನರ್ ಆದೀಲ್ ರಶೀದ್ ಅವರನ್ನು ಯಾವುದೇ ತಂಡ ಖರೀದಿ ಮಾಡಲಿಲ್ಲ. 2 ಸುತ್ತುಗಳ ಹರಾಜಿನಲ್ಲಿಯೂ ಅವರು ಸೇಲ್ ಆಗುವಲ್ಲಿ ವಿಫಲರಾದರು. ಆದರೆ ಹರಾಜು ಮುಗಿದ ಮುರು ದಿನವೇ ಅವರು ಟಿ20 ಕ್ರಿಕೆಟ್ನ ಬೌಲಿಂಗ್ ಶ್ರೇಯಾಂಕದಲ್ಲ ನಂ.1 ಸ್ಥಾನಕ್ಕೇರಿದ್ದಾರೆ. ಇದೀಗ ಕೆಲ ಫ್ರಾಂಚೈಸಿಗಳು ಅವರನ್ನು ಖರೀದಿ ಮಾಡಬಹುದಿತ್ತಲ್ಲ ಚಿಂತೆ ಮಾಡುತ್ತುವೆ. ಐಪಿಎಲ್ 2024 ರ ಹರಾಜಿನಲ್ಲಿ ಆದೀಲ್ ರಶೀದ್ 2 ಕೋಟಿ ರೂ. ಮೂಲಬೆಲೆಗೆ ತಮ್ಮ ಹೆಸರನ್ನು ನೋಂದಾಯಿಸಿದ್ದರು.
Adil Rashid becomes the new No.1 Ranked T20i spinner. pic.twitter.com/EExebqDKVc
— Mufaddal Vohra (@mufaddal_vohra) December 21, 2023
ಸಾಲ್ಟ್ ವಿಸ್ಫೋಟಕ ಬ್ಯಾಟಿಂಗ್
ಇನ್ನೊಂದು ಅಚ್ಚರಿ ಎಂದರೆ ಸ್ಫೋಟಕ ಆಟಕ್ಕೆ ಖ್ಯಾತಿ ಪಡೆದ ಫಿಲ್ ಸಾಲ್ಟ್ ಹರಾಜಿನಲ್ಲಿ 1.5 ಕೋಟಿ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದರು. ಆದರೆ ಇವರನ್ನು ಕೂಡ ಯಾವುದೇ ಫ್ರಾಂಚೈಸಿ ಖರೀದಿ ಮಾಡಿರಲಿಲ್ಲ. ಮರು ದಿನವೇ ಅವರು ವಿಂಡೀಸ್ ವಿರುದ್ಧದ ಟಿ20 ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 57 ಎಸೆತಗಳಲ್ಲಿ 10 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 119 ರನ್ ಚಚ್ಚಿದ್ದರು. ಇದಕ್ಕೂ ಮುನ್ನ ಸಾಲ್ಟ್ ವಿಂಡೀಸ್ ವಿರುದ್ಧ 3ನೇ ಟಿ20 ಪಂದ್ಯದಲ್ಲಿಯೂ ಅಜೇಯ 109 ರನ್ ಬಾರಿಸಿ ಮಿಂಚಿದ್ದರು.
ಇದೇ ವರ್ಷ ನಡೆದಿದ್ದ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಫಿಲ್ ಸಾಲ್ಟ್ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದರು. ಅವರು ಒಟ್ಟು 9 ಇನಿಂಗ್ಸ್ ಆಡಿ 163.91 ಸ್ಟ್ರೈಕ್ರೇಟ್ನಲ್ಲಿ 218 ರನ್ ಬಾರಿಸಿದ್ದರು. ಆದ್ಯಾಗೂ ಈ ಬಾರಿ ಯಾವುದೇ ಫ್ರಾಂಚೈಸಿ ಅವರನ್ನು ಖರೀದಿಸದೇ ಇರುವುದು ಅಚ್ಚರಿಗೆ ಕಾರಣವಾಗಿತ್ತು.
ಇದನ್ನೂ ಓದಿ IPL 2024: ಮಿನಿ ಹರಾಜಿನಲ್ಲಿ ಅನ್ಸೋಲ್ಡ್ ಆದ ಕರ್ನಾಟಕದ ಆಟಗಾರರ ಪಟ್ಟಿ
ಈ ಬಾರಿ ಅನ್ಸೋಲ್ಡ್ ಆದ ಆಟಗಾರರ ಪಟ್ಟಿ
ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಕರುಣ್ ನಾಯರ್ (ಭಾರತ), ಫಿಲಿಪ್ ಸಾಲ್ಟ್ (ಇಂಗ್ಲೆಂಡ್), ಜೋಶ್ ಇಂಗ್ಲಿಸ್ (ಆಸ್ಟ್ರೇಲಿಯಾ), ಕುಸಾಲ್ ಮೆಂಡಿಸ್ (ಶ್ರೀಲಂಕಾ), ಜೋಶ್ ಹ್ಯಾಝಲ್‌ವುಡ್ (ಆಸ್ಟ್ರೇಲಿಯಾ), ಕಾಲಿನ್ ಮನ್ರೊ (ನ್ಯೂಜಿಲ್ಯಾಂಡ್), ಫಿನ್ ಅಲೆನ್ (ನ್ಯೂಜಿಲ್ಯಾಂಡ್), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (ದಕ್ಷಿಣ ಆಫ್ರಿಕಾ), ಕೈಸ್ ಅಹ್ಮದ್ (ಅಫಘಾನಿಸ್ತಾನ), ಮೈಕೆಲ್ ಬ್ರೇಸ್‌ವೆಲ್ (ನ್ಯೂಜಿಲ್ಯಾಂಡ್), ಜೇಮ್ಸ್ ನೀಶಮ್ (ನ್ಯೂಜಿಲ್ಯಾಂಡ್), ಕೀಮೋ ಪಾಲ್ (ವೆಸ್ಟ್ ಇಂಡೀಸ್), ಒಡಿಯನ್ ಸ್ಮಿತ್ (ವೆಸ್ಟ್ ಇಂಡೀಸ್), ದುಷ್ಮಂತ ಚಮೀರ (ಶ್ರೀಲಂಕಾ), ಬೆನ್ ದ್ವಾರ್ಶುಯಿಸ್ (ಆಸ್ಟ್ರೇಲಿಯಾ), ಮ್ಯಾಟ್ ಹೆನ್ರಿ (ನ್ಯೂಜಿಲ್ಯಾಂಡ್), ಕೈಲ್ ಜೇಮಿಸನ್ (ನ್ಯೂಜಿಲ್ಯಾಂಡ್), ಆಡಮ್ ಮಿಲ್ನೆ (ನ್ಯೂಜಿಲ್ಯಾಂಡ್), ಲ್ಯಾನ್ಸ್ ಮೋರಿಸ್ (ಆಸ್ಟ್ರೇಲಿಯಾ), ಲ್ಯೂಕ್ ವುಡ್ (ಇಂಗ್ಲೆಂಡ್), ಮೊಹಮ್ಮದ್ ವಕಾರ್ (ಅಫಘಾನಿಸ್ತಾನ), ಮೊಹಮ್ಮದ್ ವಕಾರ್ ಸಲಾಮ್ಖೈಲ್ (ಅಫಘಾನಿಸ್ತಾನ), ಆದಿಲ್ ರಶೀದ್ (ಇಂಗ್ಲೆಂಡ್), ಅಕೇಲ್ ಹೊಸೈನ್ (ವೆಸ್ಟ್ ಇಂಡೀಸ್), ಇಶ್ ಸೋಧಿ (ನ್ಯೂಜಿಲ್ಯಾಂಡ್), ತಬ್ರೇಝ್ ಶಮ್ಸಿ (ಸೌತ್ ಆಫ್ರಿಕಾ), ರೋಹನ್ ಕುನ್ನುಮ್ಮಲ್ (ಭಾರತ), ಪ್ರಿಯಾಂಶ್ ಆರ್ಯ (ಭಾರತ), ಮನನ್ ವೋಹ್ರಾ (ಭಾರತ), ಸರ್ಫರಾಝ್ ಖಾನ್ (ಭಾರತ), ರಾಜ್ ಅಂಗದ್ ಬಾವಾ (ಭಾರತ), ವಿವ್ರಾಂತ್ ಶರ್ಮಾ (ಭಾರತ), ಅತಿತ್ ಶೇತ್ (ಭಾರತ), ಹೃತಿಕ್ ಶೋಕೀನ್ (ಭಾರತ), ಉರ್ವಿಲ್ ಪಟೇಲ್ (ಭಾರತ), ವಿಷ್ಣು ಸೋಲಂಕಿ (ಭಾರತ), ಇಶಾನ್ ಪೊರೆಲ್ (ಭಾರತ), ಮುರುಗನ್ ಅಶ್ವಿನ್ (ಭಾರತ), ಸಂದೀಪ್ ವಾರಿಯರ್ (ಭಾರತ), ರಿತಿಕ್ ಈಶ್ವರನ್ (ಭಾರತ), ಹಿಮ್ಮತ್ ಸಿಂಗ್ (ಭಾರತ), ಶಶಾಂಕ್ ಸಿಂಗ್ (ಭಾರತ), ಸುಮೀತ್ ವರ್ಮಾ (ಭಾರತ), ಹರ್ಷ ದುಬೆ (ಭಾರತ), ಕಮಲೇಶ ನಾಗರಕೋಟಿ (ಭಾರತ), ರೋಹಿತ್ ರಾಯುಡು (ಭಾರತ), ಪ್ರದೋಶ್ ಪಾಲ್ (ಭಾರತ), ಜಿ ಅಜಿತೇಶ್ (ಭಾರತ), ಗೌರವ್ ಚೌಧರಿ (ಭಾರತ), ಬಿಪಿನ್ ಸೌರಭ್ (ಭಾರತ), ಸಾಕಿಬ್ ಹುಸೇನ್ (ಭಾರತ), ಮೊಹಮ್ಮದ್ ಕೈಫ್ (ಭಾರತ), ಕೆ ಎಂ ಆಸಿಫ್ (ಭಾರತ), ಗುರ್ಜಪ್ನೀತ್ ಸಿಂಗ್ (ಭಾರತ), ಪೃಥ್ವಿ ರಾಜ್ ಯರ್ರಾ (ಭಾರತ), ಶುಭಂ ಅಗರ್ವಾಲ್ (ಭಾರತ)