Site icon Vistara News

Igor Stimac sacked: ಭಾರತದ ಫುಟ್ಬಾಲ್​ ಕೋಚ್​ ಹುದ್ದೆಯಿಂದ ಸ್ಟಿಮಾಕ್‌ ಕಿಕ್​ ಔಟ್​; ಕಾರಣವೇನು?​

Igor Stimac sacked

Igor Stimac sacked: AIFF sacks Igor Stimac as head coach after India fails to qualify for 2026 FIFA World Cup

ನವದೆಹಲಿ: ಭಾರತ ಫುಟ್​ಬಾಲ್​ ತಂಡದ ಮುಖ್ಯ ಕೋಚ್​ ಐಗರ್‌ ಸ್ಟಿಮಾಕ್‌(Igor Stimac sacked) ಅವರನ್ನು ಈ ಹುದ್ದೆಯಿಂದ ಕೆಳಗಿಳಿಸಲಾಗಿದೆ. 2026ರ ಫಿಫಾ ವಿಶ್ವಕಪ್‌ ಅರ್ಹತಾ ಟೂರ್ನಿಯಲ್ಲಿ ಭಾರತ ತಂಡ ಕಳಪೆ ಪ್ರದರ್ಶನ ನೀಡಿ ಅರ್ಹತೆ ಪಡೆಯುವಲ್ಲಿ ವಿಫಲವಾದ ನಿಟ್ಟಿನಲ್ಲಿ ಅಖಿಲ ಭಾರತ ಫುಟ್ಬಾಲ್‌ ಫೆಡರೇಶನ್‌ (ಎಐಎಫ್‌ಎಫ್) ಈ ನಿರ್ಧಾರ ಕೈಗೊಂಡಿದೆ. ಈ ಸಂಬಂಧ ಎಐಎಫ್‌ಎಫ್ ಮಾಧ್ಯಮ ಪ್ರಕಟಣೆ ನೀಡಿದ್ದು, ತಕ್ಷಣದಿಂದಲೇ ಸ್ಟಿಮಾಕ್‌ರ ಸೇವೆ ರದ್ದುಗೊಳಿಸುತ್ತಿರುವುದಾಗಿ ಸ್ಪಷ್ಟಪಡಿಸಿದೆ.

2019ರಲ್ಲಿ ಪ್ರಧಾನ ಕೋಚ್‌ ಆಗಿ ನೇಮಕಗೊಂಡಿದ್ದ ಸ್ಟಿಮಾಕ್‌ ಅವರ ಕೋಚಿಂಗ್​ ಅವಧಿ ಕಳೆದ ವರ್ಷವೇ ಮುಕ್ತಾಯಗೊಂಡಿತ್ತು. ಆದರೆ, ಎಐಎಫ್‌ಎಫ್(All India Football Federation) ಅವರ ಗುತ್ತಿಗೆ ಅವಧಿಯನ್ನು ಒಂದು ವರ್ಷ ಸಮಯಕ್ಕೆ ವಿಸ್ತರಿಸಿತ್ತು. ಸ್ಟಿಮಾಕ್‌ರ 5 ವರ್ಷದ ಮಾರ್ಗದರ್ಶನದಲ್ಲಿ ಭಾರತ ಎರಡು ಸ್ಯಾಫ್‌ ಚಾಂಪಿಯನ್‌ಶಿಪ್‌, ಒಂದು ಇಂಟರ್‌ ಕಾಂಟಿನೆಂಟಲ್‌ ಕಪ್‌ ಹಾಗೂ ಒಂದು ತ್ರಿಕೋನ ಸರಣಿಯನ್ನು ಜಯಿಸಿದೆ. ಜತೆಗೆ 5 ವರ್ಷಗಳ ಬಳಿಕ ಫಿಫಾ ಶ್ರೇಯಾಂಕದಲ್ಲಿ ಭಾರತ 100ರ ಒಳಗಡೆ ಸ್ಥಾನ ಪಡೆಯುವಂತಾಗಿತ್ತು. 2 ವಾರ ಹಿಂದೆ ನಡೆದಿದ್ದ ಕತಾರ್‌ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ಸೋತು, ವಿಶ್ವಕಪ್‌ ಅರ್ಹತಾ ಟೂರ್ನಿಯ 3ನೇ ಸುತ್ತಿಗೆ ಪ್ರವೇಶಿಸಲು ವಿಫಲವಾಗಿತ್ತು. ಹೀಗಾಗಿ ಸ್ಟಿಮಾಕ್‌ ತಲೆದಂಡವಾಗಿದೆ. ನೂತನ ಕೋಚ್​ಗಾಗಿ ಎಐಎಫ್‌ಎಫ್ ಹುಟುಕಾಟ ಆರಂಭಿಸಿದೆ. ಶೀಘ್ರದಲ್ಲೇ ನೂತನ ಕೋಚ್​ ಆಯ್ಕೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ Sunil Chhetri : ಕಣ್ಣೀರು ಹಾಕುತ್ತಲೇ ಕೊನೇ ಅಂತಾರಾಷ್ಟ್ರೀಯ ಪಂದ್ಯವಾಡಿ ವಿದಾಯ ಹೇಳಿದ ಸುನಿಲ್​ ಛೆಟ್ರಿ

ಕತಾರ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಭಾರತ 2-1 ಗೋಲುಗಳಿಂದ ಸೋಲನುಭವಿಸಿದ್ದು, ಇದರ ಪರಿಣಾಮವಾಗಿ ರಾಷ್ಟ್ರೀಯ ತಂಡವು ಕುವೈತ್ ಮತ್ತು ಅಫ್ಘಾನಿಸ್ತಾನವನ್ನ ಒಳಗೊಂಡ ಗುಂಪಿನಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಕತಾರ್​ ವಿರುದ್ಧದ ಪಂದ್ಯ ಸುನೀಲ್​ ಛೆಟ್ರಿಗೆ ವಿದಾಯದ ಪಂದ್ಯವಾಗಿತ್ತು.

ಗಂಭೀರ ಗಾಯಗೊಂಡ ಎಂಬಾಪೆ


ಡಸೆಲ್ಡಾರ್ಫ್ ಅರೆನಾದಲ್ಲಿ ಮಂಗಳವಾರ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ಫ್ರಾನ್ಸ್ 1-0 ಗೋಲುಗಳಿಂದ ಆಸ್ಟ್ರಿಯಾ ವಿರುದ್ಧ ಗೆದ್ದು ಯುರೋ ಕಪ್​ ಫುಟ್ಬಾಲ್(Euro 2024)​ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಕಂಡಿದೆ. ಆದರೆ, ಇದೇ ಪಂದ್ಯದಲ್ಲಿ ಫ್ರಾನ್ಸ್(Austria vs France)​ ತಂಡದ ಸ್ಟಾರ್​ ಆಟಗಾರ ಹಾಗೂ ನಾಯಕ ಕಿಲಿಯನ್‌ ಎಂಬಾಪೆ(Kylian Mbappe) ಅವರು ಮೂಗಿನ ಗಂಭೀರ ಗಾಯಕ್ಕೆ(Mbappe suffers nose injury) ತುತ್ತಾಗಿದ್ದು ಮುಂದಿನ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.

ಪಂದ್ಯದ 86ನೇ ನಿಮಿಷದಲ್ಲಿ ಎದುರಾಳಿ ತಂಡದ ಕೆವಿನ್ ಡಾನ್ಸೊ ಅವರ ಕಾಲು ಮೂಗಿಗೆ ಬಡಿದ ಪರಿಣಾಮ ಎಂಬಪೆ ಗಾಯಗೊಂಡರು. ಈ ವೇಳೆ ಅವರ ಮೂಗಿನಿಂದ ರಕ್ತಸ್ರಾವ ಉಂಟಾಗಿದೆ. ತಕ್ಷಣ ವೈದ್ಯರು ಅವರನ್ನು ಮೈದಾನದಿಂದ ಹೊರಗಡೆ ತಂದು ಚಿಕಿತ್ಸೆ ನೀಡಿದ್ದಾರೆ. ಸದ್ಯ ಅವರಿಗೆ ಯಾವುದೇ ದೊಡ್ಡ ಪ್ರಮಾಣದ ಗಾಯ ಸಂಭವಿಸಿಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ. ಆಸ್ಟ್ರೀಯಾ ವಿರುದ್ಧದ ಪಂದ್ಯದಲ್ಲಿ ಎಂಬಾಪೆಗೆ 2 ಗೋಲು ಬಾರಿಸುವ ಅವಕಾಶವಿದ್ದರೂ ಕೂಡ ಇದರಲ್ಲಿ ಅವರು ಯಶಸ್ಸು ಕಾಣಲಿಲ್ಲ.

Exit mobile version