Site icon Vistara News

ಚೆನ್ನೈ, ಅಹಮದಾಬಾದ್​ ಪಿಚ್​ ಸರಿಯಿಲ್ಲ ಎಂದ ಐಸಿಸಿಗೆ ತಕ್ಕ ಉತ್ತರ ನೀಡಿದ ದ್ರಾವಿಡ್​

Rahul Dravid

ಧರ್ಮಶಾಲಾ: ಅಹಮದಾಬಾದ್(Ahmedabad) ಮತ್ತು ಚೆನ್ನೈ(Chennai) ಪಿಚ್‌ಗಳು ಸಾಧಾರಣಮಟ್ಟದಿಂದ ಕೂಡಿದೆ ಎಂದು ರೇಟಿಂಗ್​ ನೀಡಿದ ಐಸಿಸಿ(ICC’s Average Pitch Ratings) ನಿರ್ಧಾರಕ್ಕೆ ಟೀಮ್​ ಇಂಡಿಯಾದ ಹೆಡ್​ ಕೋಚ್​ ರಾಹುಲ್​ ದ್ರಾವಿಡ್(Rahul Dravid) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ರೇಟಿಂಗ್​ ಯಾವುದೇ ಕಾರಣಕ್ಕೂ ನಾನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

“ಐಸಿಸಿ ಎರಡು ಪಿಚ್‌ಗಳಿಗೆ ನೀಡಲಾದ ಸಾಧಾರಣ ರೇಟಿಂಗ್​ಗೆ ನನ್ನ ವಿರೀಧವಿದೆ. ಖಂಡಿತವಾಗಿಯೂ ನಾನು ಇದನ್ನು ಒಪ್ಪುವುದಿಲ್ಲ. ಅವರೆಡು ಅತ್ಯುತ್ತಮ ಪಿಚ್ ಎಂದು ನಾನು ಭಾವಿಸುತ್ತೇನೆ. 350 ರನ್‌ಗಳು ದಾಖಲಾದ ಪಿಚ್​ಗಳನ್ನು ಮಾತ್ರ ಉತ್ತಮ ಪಿಚ್ ಎಂದು ರೇಟಿಂಗ್ ನೀಡಲು ಬಯಸುವುದಾದರೆ ಅದನ್ನು ನಾನು ಒಪ್ಪುವುದಿಲ್ಲ. ನನ್ನ ಪ್ರಕಾರ ಆಟಗಾರರ ಕೌಶಲ್ಯಗಳ ಪ್ರದರ್ಶನವೂ ಆಗಬೇಕು” ಎಂದು ಹೇಳಿದ್ದಾರೆ.

ಐಸಿಸಿಗೆ ಪ್ರಶ್ನೆ ಮಾಡಿದ ದ್ರಾವಿಡ್​

ಕ್ರಿಕೆಟ್​ ಎಂದರೆ ಕೇವಲ ಬೌಂಡರಿ, ಸಿಕ್ಸರ್‌ ಹೊಡೆಯುವುದನ್ನು ಮಾತ್ರ ನೋಡಲು ಬಯಸುವುದಾದರೆ ಅದಕ್ಕೆ ಹೇಳಿ ಮಾಡಿಸಿದಂತಹ ಟಿ20 ಪಿಚ್‌ಗಳಿವೆ. ರನ್​ ಆಗಲಿಲ್ಲ ಎಂದು ಇದನ್ನು ಕೆಟ್ಟ ಪಿಚ್​ ಎನ್ನುವುದು ಸರಿಯಲ್ಲ. ರನ್​ ಬರಬೇಕೆಂದರೆ ಇಲ್ಲಿ ಬೌಲರ್‌ಗಳು ಯಾಕೆ ? ಸ್ಪಿನ್ನರ್‌ಗಳು ಯಾತಕ್ಕಾಗಿ ತಂಡದಲ್ಲಿದ್ದಾರೆ? ಎಂದು ಐಸಿಸಿಗೆ ಪ್ರಶ್ನೆ ಮಾಡಿದ್ದಾರೆ. ರನ್​ ಗಳಿಸಲು ಸಾಧ್ಯವಾಗಿಲ್ಲ ಎಂದರೆ ಪಿಚ್​ ಸರಿಯಿಲ್ಲ ಎಂದು ಅರ್ಥವಲ್ಲ ಬದಲಾಗಿ ಇಲ್ಲಿ ಬೌಲರ್​ಗಳು ಶ್ರೇಷ್ಠಮಟ್ಟದ ಬೌಲಿಂಗ್​ ಪ್ರದರ್ಶನ ತೋರಿದ್ದಾರೆ ಎಂದು. ಇದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಕೇವಲ ರನ್​ ಬರಲಿಲ್ಲ ಎಂಬ ಒಂದೇ ಕಾರಣಕ್ಕೆ ಪಿಚ್​ ಸಾಧಾರಣಮಟ್ಟದಿಂದ ಕೂಡಿದೆ ಎಂಬ ನಿಮ್ಮ ನಿಲುವನ್ನು ಯಾವುದೇ ಕಾರಣಕ್ಕೂ ನಾನು ಒಪ್ಪುವುದಿಲ್ಲ ಎಂದು ದ್ರಾವಿಡ್​ ಐಸಿಸಿಗೆ ಖಡಕ್​ ಉತ್ತರ ನೀಡಿದ್ದಾರೆ.

ರಾಹುಲ್​ ಬ್ಯಾಟಿಂಗ್​-ಕೀಪಿಂಗ್​ ಪ್ರದರ್ಶನಕ್ಕೆಎ ಮೆಚ್ಚುಗೆ

ಇದೇ ವೇಳೆ ಮಾತನಾಡಿದ ದ್ರಾವಿಡ್​, “ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್​ ಬ್ಯಾಟಿಂಗ್​ ಮಾತ್ರವಲ್ಲದೆ ಕೀಪಿಂಗ್​ನಿಂದಲೂ ಗಮನ ಸೆಳೆಯುತ್ತಿದ್ದಾರೆ. ಆಡಿದ 4 ಪಂದ್ಯಗಳಿಂದ 5 ಕ್ಯಾಚ್ ಪಡೆದುಕೊಂಡಿದ್ದಾರೆ. ಅವರ ಕೀಪಿಂಗ್​ ಪ್ರದರ್ಶನ ಉತ್ತಮಗೊಂಡಿದೆ. ಅಲ್ಲದೆ ಪರಿಪೂರ್ಣ ಕೀಪಿಂಗ್​ ನಡೆಸುವ ಕೌಶಲ್ಯ ಅವರಲ್ಲಿ ಕಂಡುಬಂದಿದೆ” ಎಂದು ಹೇಳಿದರು.

ಇದನ್ನೂ ಓದಿ KL Rahul: ರಾಹುಲ್​ ಬ್ಯಾಟಿಂಗ್​,ಕೀಪಿಂಗ್​ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕೋಚ್​ ಡ್ರಾವಿಡ್​

“ವಿಶ್ವಕಪ್ ಕೂಟದಲ್ಲಿ ಕೆ.ಎಲ್.ರಾಹುಲ್ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ. ಪೂರ್ಣ ಪ್ರಮಾಣದ ವಿಕೆಟ್ ಕೀಪರ್ ಅಲ್ಲದ ಅವರು ಈಗ ತೋರುವ ಪ್ರದರ್ಶನವನ್ನು ಗಮನಿಸುವಾಗ ಅವರನ್ನು ಯಾರು ಕೂಡ ಪೂರ್ಣ ಪ್ರಮಾಣದ ಕೀಪರ್​ ಆಗಿರಲಿಲ್ಲ ಎಂದು ಹೇಳುವುದು ಕಷ್ಟವಾಗಿದೆ. ಗಾಯದ ಸಮಸ್ಯೆಯಿಂದ ಫಿಟ್ನೆಸ್ ಪಡೆದು ವಿಕೆಟ್ ಕೀಪಿಂಗ್ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ಹಿಂದಿಗಿಂತಲೂ ತುಂಬಾ ಚೆನ್ನಾಗಿ ಬ್ಯಾಟಿಂಗ್ ಮತ್ತು ಕೀಪಿಂಗ್​ ನಡೆಸುತ್ತಿದ್ದಾರೆ” ಎಂದು ರಾಹುಲ್ ದ್ರಾವಿಡ್ ಶ್ಲಾಘಿಸಿದ್ದಾರೆ.

ಪ್ರದರ್ಶನ ಕಂಡು ಸಂತಸಗೊಂಡಿದ್ದೇನೆ

ರಿಷಭ್​ ಪಂತ್​ ಅವರು ಕಾರು ಅಪಘಾತದಿಂದ ಗಾಯಗೊಂಡ ಬಳಿಕ ಕೆ.ಎಲ್​ ರಾಹುಲ್​ ಅವರನ್ನು ವಿಶ್ವಕಪ್ ಟೂರ್ನಿ‌ ದೃಷ್ಟಿಯಿಂದ ವಿಕೆಟ್ ಕೀಪರ್ ಆಗಿ ಸಾಕಷ್ಟು ಪಂದ್ಯಗಳಲ್ಲಿ ಬಳಸಿಕೊಂಡು ಅವರನ್ನು ಪರಿಪೂರ್ಣ ವಿಕೆಟ್ ಕೀಪರ್ ಆಗಿಸಬೇಕೆಂದು ನಾವು ಯೋಚಿಸಿದ್ದೆವು. ಆದರೆ ಅವರಿಗೆ ಗಾಯದ ಸಮಸ್ಯೆ ಕಾಡಿತು. ಆದರೆ ರಾಹುಲ್ ಚೇತರಿಕೆ ಕಂಡು ಬಂದ ಮರು ಪಂದ್ಯದಲ್ಲೇ ಶ್ರೇಷ್ಠ ಪ್ರದರ್ಶನ ತೋರುತ್ತಿದ್ದಾರೆ. ಅವರ ಆಟವನ್ನು ನೋಡಲು ನಿಜಕ್ಕೂ ಸಂತಸವಾಗುತ್ತಿದೆ ಎಂದು ದ್ರಾವಿಡ್ ಹೇಳಿದ್ದಾರೆ.

Exit mobile version