ದುಬೈ: ಮುಂದಿನ ವರ್ಷ ಜನವರಿ 13 ರಿಂದ ಯುಎಇಯಲ್ಲಿ ಆರಂಭವಾಗಲಿರುವ ಚೊಚ್ಚಲ ಆವೃತ್ತಿಯ ಅಂತಾರಾಷ್ಟ್ರೀಯ ಲೀಗ್ ಟಿ20(ILT20) ಟೂರ್ನಿಯಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ತಮ್ಮ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಉತ್ತಪ್ಪ ದುಬೈ ಕ್ಯಾಪಿಟಲ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ.
ರಾಬಿನ್ ಉತ್ತಪ್ಪ ಯುಎಇ ಟಿ20 ಲೀಗ್ನಲ್ಲಿ ದುಬೈ ಕ್ಯಾಪಿಟಲ್ಸ್ ಪರ ಆಡುವುದನ್ನು ತಂಡ ಟ್ವಿಟರ್ನಲ್ಲಿ ಅಧಿಕೃತಗೊಳಿಸಿದೆ. “ರಾಬಿನ್ ಉತ್ತಪ್ಪ ಅವರಿಗೆ ನಮ್ಮ ತಂಡದ ಪರವಾಗಿ ಹಾರ್ದಿಕ ಸ್ವಾಗತ. ನಿಮ್ಮ ಉಪಸ್ಥಿತಿಯಲ್ಲಿ ತಂಡ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ” ಎಂದು ಫ್ರಾಂಚೈಸಿ ಟ್ವೀಟ್ ಮಾಡಿದೆ.
ಇತ್ತೀಚೆಗಷ್ಟೆ ಎಲ್ಲ ಮಾದರಿಯ ಕ್ರಿಕೆಟ್ಗೆ ಗುಡ್ಬೈ ಹೇಳಿರುವ 37 ವರ್ಷದ ಉತ್ತಪ್ಪ ಇದೀಗ ದುಬೈ ಲೀಗ್ ಮೂಲಕ ಮತ್ತೊಮ್ಮೆ ಕ್ರಿಕೆಟ್ ಪ್ರಿಯರನ್ನು ರಂಜಿಸಲು ಸಿದ್ಧರಾಗಿದ್ದಾರೆ. ಟೀಮ್ ಇಂಡಿಯಾ ಪರ 46 ಏಕ ದಿನ ಆಡಿದ್ದ ಉತ್ತಪ್ಪ 934 ರನ್ ಗಳಿಸಿದ್ದಾರೆ. ಉಳಿದಂತೆ 13 ಟಿ20 ಪಂದ್ಯಗಳಲ್ಲಿ 249 ರನ್ ಕಲೆ ಹಾಕಿದ್ದಾರೆ. ಐಪಿಎಲ್ನಲ್ಲಿ 205 ಪಂದ್ಯಗಳನ್ನಾಡಿ 4952 ರನ್ ಪೇರಿಸಿದ್ದಾರೆ.
ಇದನ್ನೂ ಓದಿ | IPL 2023 | 16ನೇ ಆವೃತ್ತಿಯ ಐಪಿಎಲ್; ನೂತನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕ್ರಿಸ್ ಗೇಲ್!