ಮುಂಬಯಿ: ಕೆಲವು ದಿನಗಳ ಹಿಂದಷ್ಟೇ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ(Rohit Sharma) ಅವರು ಐಪಿಎಲ್ನಲ್ಲಿ ಜಾರಿಯಲ್ಲಿರುವ ಇಂಪ್ಯಾಕ್ಟ್ ನಿಯಮದ(Impact Player) ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ನಿಯಮದಿಂದ ಭಾರತೀಯ ಕ್ರಿಕೆಟ್‌ಗೆ ದೊಡ್ಡ ನಷ್ಟವಾಗುತ್ತಿದೆ ಎಂದು ಹೇಳಿದ್ದರು. ಇದೀಗ ಈ ವಿಚಾರವನ್ನು ಬಿಸಿಸಿಐ(BCCI) ಮತ್ತು ಐಪಿಎಲ್(IPL 2024) ಮಂಡಳಿ ಗಂಭೀರವಾಗಿ ಪರಿಗಣಿಸಿದ್ದು ಈ ನಿಯಮದ ಬಗ್ಗೆ ಚರ್ಚಿಸುವ ಅಗತ್ಯವಿದೆ ಎಂದು ಹೇಳಿದೆ.
ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಧ್ಯಕ್ಷ ಅರುಣ್ ಧುಮಾಲ್ (Arun Dhumal), ರೋಹಿತ್ ಶರ್ಮಾ ಈ ಹಿಂದೆಯೂ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ನ್ಯೂನತೆಗಳನ್ನ ತೋರಿಸಿದ್ದರು. 2ನೇ ಬಾರಿಗೆ ಅವರು ಈ ವಿಚಾರದ ಬಗ್ಗೆ ಮಾತನಾಡುತ್ತಾರೆ ಎಂದರೆ ಈ ವಿಚಾರವಾಗಿ ಗಂಭೀರ ಚರ್ಚೆ ನಡೆಸುವ ಅಗತ್ಯವಿದೆ. ಪ್ರತಿಯೊಂದು ನಿಯಮಕ್ಕೂ ಸಾಧಕ ಬಾಧಕಗಳಿವೆ. ಇದನ್ನು ಯಾರಾದರು ಹೇಳಿದರೆ ಆಗ ತಿದ್ದಿಕೊಳ್ಳಬಹುದು. ಈ ಆವೃತ್ತಿ ಮುಗಿದ ಬಳಿಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈ ನಿಯಮದ ಕುರಿತು ಪರಿಶೀಲಿಸಲಿದೆ ಎಂದು ಧುಮಾಲ್ ಹೇಳಿದರು.
“Now that such an observation has been made, we will definitely look into it. We will discuss this with all parties involved and then take a call,” IPL Chairman, @ThakurArunS said on the much talked about impact player rule. #IPL2024 https://t.co/moOEWca5nz
— Circle of Cricket (@circleofcricket) April 21, 2024
ರೋಹಿತ್ ಶರ್ಮ ಮಾತ್ರವಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಸೇರಿ ಇನ್ನು ಅನೇಕರು ಈ ನಿಯಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಅರುಣ್ ಧುಮಾಲ್ ಹೇಳಿದ ಮಾತುಗಳನ್ನು ಗಮನಿಸುವಾಗ ಮುಂದಿನ ಆವೃತ್ತಿಯಲ್ಲಿ ಈ ನಿಯಮ ಕೈಬಿಡುವ ಸೂಚನೆಯೊಂದು ಲಭಿಸಿದಂತಿದೆ.
ಇದನ್ನೂ ಓದಿ IPL 2024: ಬ್ಯಾಟ್ ಮುರಿದ ರಿಂಕುಗೆ ಬೈದ ವಿರಾಟ್ ಕೊಹ್ಲಿ; ವಿಡಿಯೊ ವೈರಲ್
ರೋಹಿತ್ ಹೇಳಿದ್ದೇನು?
‘ಕ್ರಿಕೆಟ್ 11 ಜನ ಆಡುವ ಆಟ, 12 ಜನರಿಂದಲ್ಲ, ಇಂಪ್ಯಾಕ್ಟ್ ಆಟಗಾರ ನಿಯಮದಿಂದಾಗಿ ನೈಜ ಕ್ರಿಕೆಟ್‌ಗೆ ಹಾನಿಯಾಗಿದೆ. ಇದು ಮನರಂಜನೆ ಒದಗಿಸಬಹುದೇ ಹೊರತು ಕ್ರಿಕೆಟ್ ಬೆಳವಣಿಗೆಗೆ ಅಪಾಯಕಾರಿ. ಈ ನಿಯಮದಿಂದ ಓರ್ವ ಆಟಗಾರನಿಗೆ ತನ್ನ ಸಾಮರ್ಥ್ಯವನ್ನು ತೋರ್ಪಡಿಸುವ ಅವಕಾಶ ಸಿಗುತಿಲ್ಲ. ಉದಾಹರಣೆಗೆ ಶಿವಂ ದುಬೆ, ವಾಷಿಂಗ್ಟನ್ ಸುಂದರ್ ಸೇರಿದಂತೆ ಅನೇಕ ಆಲ್ರೌಂಡರ್‌ಗಳಿಗೆ ಬ್ಯಾಟಿಂಗ್ ಸಿಕ್ಕರೆ ಬೌಲಿಂಗ್ ಸಿಗುತ್ತಿಲ್ಲ. ಬೌಲಿಂಗ್ ಸಿಕ್ಕರೆ ಬ್ಯಾಟಿಂಗ್ ಸಿಗುತ್ತಿಲ್ಲ” ಎಂದು ರೋಹಿತ್ ಕಳವಳ ವ್ಯಕ್ತಪಡಿಸಿದ್ದರು.
Rohit Sharma on Impact Player Rule pic.twitter.com/ATOAxmIZaF
— RVCJ Media (@RVCJ_FB) April 18, 2024
ಇಂಪ್ಯಾಕ್ಟ್ ನಿಯಮ ಎಂದರೇನು?
ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಆಟದ ಸಮಯದಲ್ಲಿ ಯುದ್ಧತಂತ್ರದ ಬದಲಾವಣೆಯನ್ನು ಮಾಡಲು ತಂಡಕ್ಕೆ ಅವಕಾಶವನ್ನು ನೀಡುತ್ತದೆ. ಟಾಸ್ ಸಮಯದಲ್ಲಿ, ನಾಯಕನು ಆರಂಭಿಕ 11 ಆಟಗಾರರ ಜೊತೆಗೆ ನಾಲ್ಕು ಬದಲಿ ಆಟಗಾರರನ್ನು ಉಲ್ಲೇಖಿಸಬೆಕು. ಈ ಬದಲಿ ಆಟಗಾರನು (ಇಂಪ್ಯಾಕ್ಟ್ ಪ್ಲೇಯರ್) ಇನ್ನಿಂಗ್ಸ್ ನ 14 ನೇ ಓವರ್ ನ ಮುಕ್ತಾಯದ ಮೊದಲು ಯಾವುದೇ ನಿರ್ದಿಷ್ಟ ಹಂತದಲ್ಲಿ ಆರಂಭಿಕ 11 ನ ಸದಸ್ಯರನ್ನು ಬದಲಾಯಿಸಬಹುದು. ಆಟಗಾರನು ಬ್ಯಾಟಿಂಗ್ ಮಾಡಲು ಹಾಗೂ ತನ್ನ ಸಂಪೂರ್ಣ ಕೋಟಾದ (ನಾಲ್ಕು) ಓವರ್‌ಗಳನ್ನು ಪೂರ್ಣಗೊಳಿಸಲು ಅವಕಾಶವಿದೆ.
ಮತ್ತೊಂದು ವಿಶೇಷವೆಂದರೆ ಇಂಪ್ಯಾಕ್ಟ್ ಪ್ಲೇಯರ್ ಈಗಾಗಲೇ ಔಟ್ ಆಗಿರುವ ಆಟಗಾರನ ಬದಲಿಯಾಗಿ ಬಂದು ಮತ್ತೊಮ್ಮೆ ಬ್ಯಾಟಿಂಗ್ ಮಾಡಬಹುದು. ಆದರೆ ತಂಡದಲ್ಲಿ ಕೇವಲ 11 ಬ್ಯಾಟರ್ ಗಳಿಗೆ ಬ್ಯಾಟಿಂಗ್ ಗೆ ಅವಕಾಶವಿದೆ. ಮತ್ತೊಂದೆಡೆ, ಈಗಾಗಲೇ ಕೆಲವು ಓವರ್ ಗಳನ್ನು ಬೌಲ್ ಮಾಡಿದ ಬೌಲರ್ ಬದಲಿಗೆ ಬಂದು ನಾಲ್ಕು ಓವರ್ ಗಳ ಪೂರ್ಣ ಕೋಟಾ ಬೌಲ್ ಮಾಡಬಹುದು.
ಇಂಪ್ಯಾಕ್ಟ್ ಪ್ಲೇಯರ್ ಸೇರ್ಪಡೆಯಿಂದ ಆಟಕ್ಕೆ ಹೊಸತನ ಬಂದಂತಾದರೂ ಈ ನಿಯಮವು ಕೆಲವು ಮಿತಿಗಳನ್ನು ಹೊಂದಿದೆ. 10 ಓವರ್ ಗಳಿಗಿಂತ ಕಡಿಮೆಯಿರುವ ಆಟದಲ್ಲಿ (ಮಳೆ ಸೇರಿದಂತೆ ಹಲವು ಕಾರಣದಿಂದ) ಈ ನಿಯಮ ಅನ್ವಯಿಸುವುದಿಲ್ಲ. ಅಲ್ಲದೆ, ಪ್ರತಿ ಪಂದ್ಯದಲ್ಲೂ ಇಂಪ್ಯಾಕ್ಟ್ ಪ್ಲೇಯರ್ ನನ್ನು ಬಳಸಲೇ ಬೇಕು ಎಂಬ ಒತ್ತಾಯವಿಲ್ಲ. ಆದರೆ ಇಂಪ್ಯಾಕ್ಟ್ ಪ್ಲೇಯರ್ ನನ್ನು ಬಳಸುವ ಮೊದಲು ನಾಯಕ ಅಥವಾ ಮುಖ್ಯ ಕೋಚ್ ಅಥವಾ ಮ್ಯಾನೇಜರ್ ಅದನ್ನು ಆನ್-ಫೀಲ್ಡ್ ಅಂಪೈರ್ ಗೆ ತಿಳಿಸಬೇಕು.
ಇಂಪ್ಯಾಕ್ಟ್ ಪ್ಲೇಯರ್ ಓವರ್ ನಡುವಿನಲ್ಲಿ ಬರುವಂತಿಲ್ಲ. ಓವರ್ ಮುಗಿದ ಬಳಿಕವಷ್ಟೇ ಆಟಕ್ಕೆ ಬರಬಹುದು. ಆದಾಗ್ಯೂ, ಕೆಲವು ವಿನಾಯಿತಿಗಳಿದ್ದು, ಬ್ಯಾಟಿಂಗ್ ತಂಡವು ವಿಕೆಟ್ ಪತನದ ಸಮಯದಲ್ಲಿ ಅದರ ಇಂಪ್ಯಾಕ್ಟ್ ಪ್ಲೇಯರ್ ಕಾರ್ಡ್ ಅನ್ನು ಓವರ್ ನಡುವೆ ಬಳಸಿಬಹುದು, ಫೀಲ್ಡಿಂಗ್ ತಂಡದಲ್ಲಿ ಗಾಯಗೊಂಡ ಫೀಲ್ಡರ್ ಬದಲು ಓವರ್ ನ ನಡುವೆ ಇಂಪ್ಯಾಕ್ಟ್ ಪ್ಲೇಯರ್ ನನ್ನು ಆಟಕ್ಕೆ ಕರೆಯಬಹುದು