ಕೇಪ್ ಟೌನ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 2 ಪಂದ್ಯಗಳ(India vs South Africa 2nd Test) ಟೆಸ್ಟ್ ಸರಣಿಯಲ್ಲಿ ಈಗಾಗಲೇ ಮೊದಲ ಪಂದ್ಯವನ್ನು ಹೀನಾಯವಾಗಿ ಸೋತಿರುವ ಭಾರತ ಇದೀಗ ದ್ವಿತೀಯ ಪಂದ್ಯದಲ್ಲಿ ಕಣಕ್ಕಿಳಿಯಲು ಸಿದ್ಧವಾಗಿದೆ. ಬುಧವಾರ ಆರಂಭಗೊಳ್ಳಲಿರುವ ದ್ವಿತೀಯ ಟೆಸ್ಟ್ ಪಂದ್ಯ ರೋಹಿತ್ ಪಡೆಗೆ ಸರಣಿ ಸೋಲು ತಪಿಸುವ, ಜತೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಮತ್ತೆ ಮೇಲೇರುವ 2 ಸವಾಲುಗಳಿವೆ.
ಸುಧಾರಿಸಬೇಕು ಬ್ಯಾಟಿಂಗ್…
ಭಾರತದ ಬ್ಯಾಟಿಂಗ್ ವಿಭಾಗ ದೊಡ್ಡ ಮಟ್ಟದಲ್ಲಿ ಸುಧಾರಣೆ ಕಾಣದ ಹೊರತು ಈ ಪಂದ್ಯವನ್ನು ಗೆಲ್ಲುವುದು ಅಸಾಧ್ಯ. ಬೌನ್ಸ್ ಎಸೆತಗಳನ್ನು ಅನಗತ್ಯವಾಗಿ ಹೊಡೆಯುವ ಪ್ರಯತ್ನಕ್ಕೆ ಕೈ ಹಾಕಬಾರದು. ಮೊದಲ ಪಂದ್ಯದಲ್ಲಿಯೂ ಶ್ರೇಯಸ್ ಅಯ್ಯರ್, ಜೈಸ್ವಾಲ್, ರೋಹಿತ್ ಶರ್ಮ ಬೌನ್ಸ್ ಎಸೆತವನ್ನು ಎದುರಿಸಲು ವಿಫಲವಾಗಿ ವಿಕೆಟ್ ಕೈಚೆಲ್ಲಿದ್ದರು. ಆದ್ದರಿಂದ ಈ ಪಂದ್ಯದಲ್ಲಿ ಎಚ್ಚರಿಕೆಯ ಆಟವಾಡುವುದು ಅಗತ್ಯ.
ವಿಕೆಟ್ ಕೀಪಿಂಗ್ ಜವಾಬ್ದಾರಿ ಹೊತ್ತಿರುವ ಕನ್ನಡಿಗ ಕೆ.ಎಲ್ ರಾಹುಲ್ ಮೊದಲ ಇನಿಂಗ್ಸ್ನಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಿ ಶತಕ ಬಾರಿಸುವ ಮೂಲಕ ತಂಡಕ್ಕೆ ನರೆವಾಗಿದ್ದರು. ಆದರೆ, ದ್ವಿತೀಯ ಇನಿಂಗ್ಸ್ನಲ್ಲಿ ವಿಫರಾಗಿದ್ದರು. ಈ ಪಂದ್ಯದಲ್ಲಿಯೂ ಅವರ ಬ್ಯಾಟಿಂಗ್ ಮೇಲೆ ತಂಡ ಹೆಚ್ಚಿನ ಬರವಸೆ ಇರಿಸಿದೆ. ವಿರಾಟ್ ಕೊಹ್ಲಿ ಎಡಗೈ ವೇಗಿ ಬರ್ಗರ್ ಎಸೆತವನ್ನು ಸಮರ್ಥವಾಗಿ ಎದುರಿಸಿ ನಿಲ್ಲಲು ಸೋಮವಾರ ಹೆಚ್ಚುವರಿ ಬ್ಯಾಟಿಂಗ್ ಅಭ್ಯಾಸ ಕೂಡ ನಡೆಸಿದ್ದಾರೆ. ಒಟ್ಟಾರೆ ಬ್ಯಾಟಿಂಗ್ ಮೇಲೆ ಭಾರತೀಯ ಬ್ಯಾಟರ್ಗಳು ಹೆಚ್ಚಿನ ಫೋಕಸ್ ಮಾಡಿದಂತಿದೆ.
ಇದನ್ನೂ ಓದಿ Rachin Ravindra: ಕಾರಿನಿಂದ ಇಳಿದು ಸಿಎಸ್ಕೆ ಅಭಿಮಾನಿಗೆ ಆಟೋಗ್ರಾಫ್ ನೀಡಿದ ರಚಿನ್
#TeamIndia are back in the nets and prepping 🆙 for the 2nd Test in Cape Town👌👌#SAvIND pic.twitter.com/zcY5J0FafW
— BCCI (@BCCI) December 31, 2023
ಬೌಲಿಂಗ್ ಕೂಡ ಹರಿತಗೊಳ್ಳಬೇಕಿದೆ
ಬೌಲಿಂಗ್ ವಿಭಾಗದಲ್ಲಿಯೂ ಕೂಡ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಮತ್ತು ಶಾರ್ದೂಲ್ ಠಾಕೂರ್ ತಮ್ಮ ಎಸೆತಗಳಿಗೆ ಹರಿತ ಮುಟ್ಟಿಸಬೇಕಿದೆ. ಲೋ ಲೆಂತ್ನಲ್ಲಿ ಬೌಲಿಂಗ್ ನಡೆಸುವ ಬದಲು ಹೆಚ್ಚು ಬೌನ್ಸಿ ಎಸೆತಗಳನ್ನು ಎಸೆಯಬೇಕಿದೆ. ಶಮಿಯ ಬದಲು ತಂಡಕ್ಕೆ ಬದಲಿಯಾಗಿ ಸೇರ್ಪಡೆಗೊಂಡ ಆವೇಶ್ ಖಾನ್ ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ಅವರ ಆಗಮನದಿಂದ ಯಾರನ್ನು ತಂಡದಿಂದ ಕೈ ಬಿಡಲಾಗುತ್ತದೆ ಎನ್ನುವುದು ಸದ್ಯದ ಪ್ರಶ್ನೆ.
ಬೆನ್ನುನೋವಿನ ಸಮಸ್ಯೆಯಿಂದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ(Ravindra Jadeja) ಇದೀಗ ಸಂಪೂರ್ಣವಾಗಿ ಗುಣಮುಖರಾಗಿ ದ್ವಿತೀಯ ಪಂದ್ಯಕ್ಕೆ ಲಭ್ಯರಿದ್ದಾರೆ. ಅವರ ಆಗಮನದಿಂದ ರವಿಚಂದ್ರನ್ ಅಶ್ವಿನ್ ಜಾಗ ಬಿಡಬೇಕಿದೆ.
ಇದನ್ನೂ ಓದಿ IND VS AUS: ಭಾರತ-ಆಸ್ಟ್ರೇಲಿಯಾ ಮೊದಲ ಟೆಸ್ಟ್ ಪಂದ್ಯದ ಪಿಚ್ ರಿಪೋಟ್, ಸಂಭಾವ್ಯ ತಂಡ
ದಕ್ಷಿಣ ಆಫ್ರಿಕಾ ಬಲಿಷ್ಠ
ಖಾಯಂ ನಾಯಕ ತೆಂಬಾ ಬವುಮಾ ಮೊದಲ ಪಂದ್ಯದಲ್ಲಿ ಫೀಲ್ಡಿಂಗ್ ನಡೆಸುವ ವೇಳೆ ಗಾಯಗೊಂಡು ಪಂದ್ಯದಿಂದ ಹೊರಗುಳಿದಿದ್ದರೂ 9 ಮಂದಿ ಬ್ಯಾಟಿಂಗ್ ನಡೆಸಿ ಭಾರತಕ್ಕೆ ಇನಿಂಗ್ಸ್ ಸೋಲುಣಿಸಿದ್ದ ಹರಿಣ ಪಡೆಯ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಬಲಿಷ್ಠವಾಗಿದೆ. ಮಾರ್ಕೊ ಜಾನ್ಸೆನ್ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿಯೂ ಮಿಂಚುತ್ತಿದ್ದಾರೆ. ಯುವ ವೇಗಿ ಬರ್ಗರ್ ಮತ್ತು ಅನುಭವಿ ಕಗಿಸೊ ರವಾಡ ಎಸೆತವಂತೂ ತುಂಬಾನೆ ಘಾತಕ. ಇವರನೆಲ್ಲ ಎದುರಿಸಿ ನಿಲ್ಲಬೇಕಾದ ಒತ್ತಡ ಭಾರತೀಯ ಬ್ಯಾಟರ್ಗಳು ಯಶಸ್ಸು ಕಾಣಬೇಕಿದೆ.