Site icon Vistara News

ಆಸ್ಟ್ರೇಲಿಯಾ ವಿರುದ್ಧ 5 ರನ್​ ಸೋಲು; ವಿಶ್ವ ಕಪ್​ನ ಸೆಮಿ ಫೈನಲ್ಸ್​ ಹಂತದಲ್ಲಿ ಮುಗ್ಗರಿಸಿದ ವನಿತೆಯರ ತಂಡ

In Assam, 250 people from 35 families converted from Christianity to Sanatan religion

#image_title

ಕೇಪ್​ಟೌನ್​ (ದಕ್ಷಿಣ ಆಫ್ರಿಕಾ): ಮಹಿಳೆಯರ ಟಿ20 ವಿಶ್ವ ಕಪ್​ನಲ್ಲಿ (Women’s T20 World Cup) ಭಾರತ ತಂಡ ಸೆಮಿ ಫೈನಲ್ಸ್​ ಹಂತದಲ್ಲಿ ಅಭಿಯಾನ ಮುಗಿಸಿದೆ. ಫೆಬ್ರವರಿ 23ರಂದು ನಡೆದ ಉಪಾಂತ್ಯದ ಹಣಾಹಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ರನ್​ಗಳಿಂದ ಸೋತ ಹರ್ಮನ್​ಪ್ರೀತ್​ ಕೌರ್​ ಬಳಗ ನಿರಾಸೆ ಎದುರಿಸಿತು. 173 ರನ್​ಗಳ ಬೃಹತ್ ಗುರಿಯನ್ನು ಬೆನ್ನಟ್ಟಲು ವಿಫಲಗೊಂಡ ಭಾರತದ ವನಿತೆಯರ ವಿಶ್ವ ಕಪ್​ ಕನಸು ನುಚ್ಚುನೂರಾಯಿತು. ಅಗ್ರ ಕ್ರಮಾಂಕದ ಬ್ಯಾಟರ್​ಗಳ ವೈಫಲ್ಯವೇ ಭಾರತದ ಸೋಲಿಗೆ ಕಾರಣವಾಯಿತು.

ನ್ಯೂಲ್ಯಾಂಡ್ಸ್​ ಕ್ರಿಕೆಟ್​​ ಮೈದಾನದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 172 ರನ್​ ಪೇರಿಸಿತು. ಗುರಿ ಬೆನ್ನಟ್ಟಲು ಹೊರಟ ಭಾರತೀಯ ಬಳಗ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ ನಷ್ಟಕ್ಕೆ 167 ರನ್ ಬಾರಿಸಿ ಸೋಲು ಕಂಡಿತು.

ದೊಡ್ಡ ಗುರಿಯನ್ನು ಬೆನ್ನಟ್ಟುವ ದಾರಿಯಲ್ಲಿ ನಾಯಕ ಹರ್ಮನ್​ಪ್ರೀತ್​ ಕೌರ್​ (52) ಸ್ಫೋಟಕ ಅರ್ಧ ಶತಕ ಬಾರಿಸಿದರೆ, ಜೆಮಿಮಾ ರೋಡ್ರಿಗಸ್​ (43) ಕೂಡ ಉತ್ತಮ ನೆರವು ಕೊಟ್ಟರು. ಆದರೆ, ಶಫಾಲಿ ವರ್ಮಾ (9) ಹಾಗೂ ಸ್ಮೃತಿ ಮಂಧಾನಾ (2) ಹಾಗೂ ಯಸ್ತಿಕಾ ಭಾಟಿಯಾ (4) ವೈಫಲ್ಯ ಕಂಡ ಕಾರಣ ಭಾರತ ತಂಡ ಉತ್ತಮ ಆರಂಭ ಪಡೆಯಲಿಲ್ಲ. ರಿಚಾ ಘೋಷ್​ (14), ದೀಪ್ತಿ ಶರ್ಮಾ (20) ಹಾಗೂ ಸ್ನೇಹಾ ರಾಣಾ (11) ಕೊನೆಯಲ್ಲಿ ಹೋರಾಟ ನಡೆಸಿದರೂ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ.

ಅದಕ್ಕಿಂತ ಮೊದಲು ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ಅಲಿಸಾ ಹೀಲಿ (25) ಹಾಗೂ ಬೆತ್​ ಮೂನಿ (54) ಅವರ ಜತೆಯಾಟದ ಮೂಲಕ ಮೊದಲ ವಿಕೆಟ್​ಗೆ 52 ರನ್​ ಗಳಿಸಿತು. ಬಳಿಕ ಮೆಗ್ ಲ್ಯಾನಿಂಗ್​ (39) ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಆಶ್ಲೇ ಗಾರ್ಡ್ನರ್​ ಕೂಡ 31 ರನ್​ ಕೊಡುಗೆ ಕೊಟ್ಟರು.

ಇದನ್ನೂ ಓದಿ : T20 World Cup : ಐರ್ಲೆಂಡ್ ವಿರುದ್ಧ 5 ರನ್​ ಜಯ, ವಿಶ್ವ ಕಪ್​ನ ಸೆಮಿ ಫೈನಲ್​ಗೇರಿದ ಭಾರತ ಮಹಿಳೆಯರ ತಂಡ

ಭಾರತ ತಂಡದ ಪರ ಬೌಲಿಂಗ್​ನಲ್ಲಿ ಶಿಖಾ ಪಾಂಡೆ 32 ರನ್​ಗಳಿಗೆ 2 ವಿಕೆಟ್​ ಕಬಳಿಸಿದರು.

Exit mobile version