ಸಿಡ್ನಿ: ಟಿ೨೦ ವಿಶ್ವ ಕಪ್‌ನ ಸೂಪರ್-೧೨ ಹಂತದ ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ವಿರುದ್ಧ ಹೀನಾಯ ೮೯ ರನ್‌ಗಳ ಹೀನಾಯ ಸೋಲಿಗೆ ಒಳಗಾಗಿದೆ. ನ್ಯೂಜಿಲೆಂಡ್ ತಂಡ ಪರ ಡೆವೋನ್ ಕಾನ್ವೆ ೫೮ ಎಸೆತಗಳಿಗೆ ಅಜೇಯ ೯೨ ರನ್ ಬಾರಿಸಿದರೆ, ಟಿಮ್ ಸೌಥಿ ಹಾಗೂ ಮಿಚೆಲ್ ಸ್ಯಾಂಟ್ನರ್ ತಲಾ ಮೂರು ವಿಕೆಟ್ ಪಡೆಯುವ ಮೂಲಕ ಗೆಲುವಿನ ರೂವಾರಿಗಳೆನಿಸಿಕೊಂಡರು.
ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ ೨೦ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೨೦೦ ರನ್ ಬಾರಿಸಿದರೆ, ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಬಳಗ ೧೭.೧ ಓವರ್‌ಗಳಲ್ಲಿ ೧೧೧ ರನ್‌ಗಳಿಗೆ ಸರ್ವಪತನ ಕಂಡಿತು.
ದೊಡ್ಡ ಮೊತ್ತ ಗುರಿ ಬೆನ್ನಟ್ಟಲು ಹೊರಟ ಆಸ್ಟ್ರೇಲಿಯಾ ತಂಡದ ಪರ ಗ್ಲೆನ್ ಮ್ಯಾಕ್ಸ್‌ವೆಲ್ ೨೮ ರನ್ ಬಾರಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಉಳಿದಂತೆ ಎಲ್ಲರೂ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡರು. ಪ್ಯಾಟ್ ಕಮಿನ್ಸ್ ೨೧ ರನ್ ಬಾರಿಸಿದರು. ನ್ಯೂಜಿಲೆಂಡ್ ದಾಳಿಗೆ ತತ್ತರಿಸಿದ ಆಸೀಸ್ ಬ್ಯಾಟರ್‌ಗಳು ನಿರುತ್ತರರಾದರು. ಟ್ರೆಂಟ್ ಬೌಲ್ಟ್ ೨ ವಿಕೆಟ್ ಪಡೆದರೆ, ಲಾಕಿ ಫರ್ಗ್ಯೂಸನ್ ಹಾಗೂ ಇಶ್ ಸೋಧಿ ತಲಾ ಒಂದು ವಿಕೆಟ್ ಪಡೆದರು..
ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ ಡೆವೋನ್ ಕಾನ್ವೆ ಅವರ ಅರ್ಧ ಶತಕ ಹಾಗೂ ಫಿನ್ ಅಲೆನ್ (೧೨ ಎಸೆತಗಳಲ್ಲಿ ೪೨ ರನ್) ಅವರು ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಉತ್ತಮ ಆರಂಭ ಪಡೆಯಿತು. ಕೇನ್ ವಿಲಿಯಮ್ಸನ್ (೨೩), ಜೇಮ್ಸ್ ನೀಶಮ್ (೨೬) ತಮ್ಮ ಕೊಡುಗೆಗಳನ್ನು ಕೊಟ್ಟರು.
ಸ್ಕೋರ್ ವಿವರ
ನ್ಯೂಜಿಲೆಂಡ್: ೨೦ ಓವರ್‌ಗಳಲ್ಲಿ ೩ ವಿಕೆಟ್‌ಗೆ ೨೦೦ (ಡೆವೋನ್ ಕಾನ್ವೆ ೯೨, ಫಿನ್ ಅಲೆನ್ ೪೨; ಜೋಶ್ ಹೇಜಲ್‌ವುಡ್ ೪೨ಕ್ಕೆ೨).
ಆಸ್ಟ್ರೇಲಿಯಾ : ೧೭.೧ ಓವರ್‌ಗಳಲ್ಲಿ ೧೧೧ (ಗ್ಲೆನ್ ಮ್ಯಾಕ್ಸ್‌ವೆಲ್ ೨೮, ಪ್ಯಾಟ್ ಕಮಿನ್ಸ್ ೨೧, ಟಿಮ್ ಸೌಥಿ ೬ಕ್ಕೆ೩).
ಇದನ್ನೂ ಓದಿ | IND vs Pak | ಪಾಕಿಸ್ತಾನಕ್ಕೆ ಭಾರತ ತಂಡ ಪ್ರವಾಸ ಮಾಡುವ ಬಗ್ಗೆ ರೋಹಿತ್ ಶರ್ಮ ಅವರ ಪ್ರತಿಕ್ರಿಯೆ ಹೀಗಿದೆ