ಮೀರ್‌ಪುರ : ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾ ಪರ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಅವರೀಗ ಏಕ ದಿನ ಮಾದರಿಯಲ್ಲಿ ಅತಿವೇಗದಲ್ಲಿ ೧೫೦೦ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ವೇಳೆ ಅವರು ಕೆ. ಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿಯ ದಾಖಲೆಗಳನ್ನು ಮುರಿದಿದ್ದಾರೆ.
ಶ್ರೇಯಸ್ ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ ೮೨ ರನ್‌ಗಳನ್ನು ಬಾರಿಸಿದ್ದಾರೆ. ಇದೇ ವೇಳೆ ಅವರು ಏಕ ದಿನ ಮಾದರಿಯಲ್ಲಿ ೧೫೦೦ ರನ್‌ಗಳ ಗಡಿ ದಾಟಿದರು. ಇದು ಅವರ ೩೪ನೇ ಇನಿಂಗ್ಸ್ ಆಗಿರುವ ಕಾರಣ ಅತಿ ವೇಗದಲ್ಲಿ ೧೫೦೦ ರನ್ ಬಾರಿಸಿದ ಭಾರತೀಯ ಆಟಗಾರ ಎನಿಸಿಕೊಂಡರು.
ಅತಿ ವೇಗದಲ್ಲಿ ೧೫೦೦ ಬಾರಿಸಿದ ದಾಖಲೆ ಈ ಹಿಂದೆ ಕೆ. ಎಲ್ ರಾಹುಲ್ ಹೆಸರಿನಲ್ಲಿತ್ತು. ಅವರು ೩೬ ಇನಿಂಗ್ಸ್‌ಗಳಲ್ಲಿ ಈ ಗಡಿಯನ್ನು ದಾಟಿದ್ದರು. ಹೀಗಾಗಿ ಕೆ. ಎಲ್ ರಾಹುಲ್ ಎರಡನೇ ಸ್ಥಾನಕ್ಕೆ ಇಳಿದರು. ಇದೇ ವೇಳೆ ೩೮ ಇನಿಂಗ್ಸ್‌ಗಳಲ್ಲಿ ದಾಖಲೆ ಬರೆದಿದ್ದ ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಅವರನ್ನೂ ಹಿಂದಿಕ್ಕಿದರು.
ಇದನ್ನೂ ಓದಿ | INDvsBAN | ಏಳು ವರ್ಷದ ಬಳಿಕ ಭಾರತ ವಿರುದ್ಧ ಸರಣಿ ಗೆದ್ದ ಆತಿಥೇಯ ಬಾಂಗ್ಲಾದೇಶ ತಂಡ