Site icon Vistara News

Women’s World Cup : ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ 44 ರನ್​ ಹೀನಾಯ ಸೋಲು

womens T20 world cup

#image_title

ಕೇಪ್​ಟೌನ್: ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ಮಹಿಳೆಯರ ತಂಡ ಮಹಿಳೆಯರ ಟಿ20 ವಿಶ್ವ ಕಪ್​ನ (Women’s World Cup) ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 44 ರನ್​ಗಳ ಹೀನಾಯ ಸೋಲಿಗೆ ಒಳಗಾಗಿದೆ. ಈ ಮೂಲಕ ಹರ್ಮನ್​ಪ್ರೀತ್​ ಕೌರ್ ನೇತೃತ್ವದ ಭಾರತದ ಪಡೆ ವಿಶ್ವ ಕಪ್​ ಆರಂಭಕ್ಕೆ ಮೊದಲೇ ಅಭಿಮಾನಿಗಳಿಗೆ ಬ್ಯಾಟಿಂಗ್ ವೈಫಲ್ಯದ ಮೂಲಕ ನಿರಾಸೆ ಮೂಡಿಸಿದ್ದಾರೆ.

ಇಲ್ಲಿನ ನ್ಯೂಲ್ಯಾಂಡ್ಸ್​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಅಸ್ಟ್ರೇಲಿಯಾ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 129 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ಭಾರತದ ಮಹಿಳೆಯರ ಬಳಗ 16 ಓವರ್​ಗಳಲ್ಲಿ 85 ರನ್​ಗಳಿಗೆ ಆಲ್​ಔಟ್ ಆಗಿ ಹೀನಾಯ ಸೋಲು ಕಂಡಿತು.

ಭಾರತ ತಂಡದ ಆರಂಭಿಕ ಬ್ಯಾಟರ್​ಗಳಲ್ಲಿ ಒಬ್ಬರೂ ಎರಡಂಕಿ ಮೊತ್ತ ಗಳಿಸಲಿಲ್ಲ. ಹೀಗಾಗಿ 41 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡಿತು. ಹರ್ಲಿನ್​ ಡಿಯೋಲ್ (12) ಹಾಗೂ ದೀಪ್ತಿ ಶರ್ಮಾ (19) ಭಾರತ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಆಸೀಸ್​ ಬೌಲರ್ ಡಾರ್ಸಿ ಬ್ರೌನ್ 17 ರನ್​ಗಳ ವೆಚ್ಚದಲ್ಲಿ 4 ವಿಕೆಟ್​ ಕಬಳಿಸಿದರು.

ಇದನ್ನೂ ಓದಿ : Women’s IPL | ಮಹಿಳೆಯರ ಐಪಿಎಲ್​ನಲ್ಲಿ ಐದು ವಿದೇಶಿ ಆಟಗಾರರಿಗೆ ಅವಕಾಶ ನೀಡಿದ ಬಿಸಿಸಿಐ

ಅದಕ್ಕಿಂತ ಮೊದಲು ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡದ ಪರ ಬೆತ್ ಮೂನಿ (28), ಆಶ್ಲೇ ಗಾರ್ಡ್ನರ್​ (22), ಜಾರ್ಜಿಯಾ ವಾರ್ಹೇಮ್​ (32), ಜೆಸ್ ಜೊನಾಸೆನ್​ (22) ಸಾಧಾರಣ ಮೊತ್ತ ಪೇರಿಸಲು ನೆರವಾದರು.

Exit mobile version