Site icon Vistara News

IND | ಭಾರತ-ನೆದರ್ಲೆಂಡ್ಸ್​ ಪಂದ್ಯಕ್ಕೆ ಪಿಚ್ ಹೇಗಿದೆ, ಪಂದ್ಯ ಎಷ್ಟು ಗಂಟೆಗೆ ಆರಂಭ? ಇಲ್ಲಿದೆ ಸಂಪೂರ್ಣ ಮಾಹಿತಿ

t 20

ಸಿಡ್ನಿ: ಟಿ20 ವಿಶ್ವ ಕಪ್​ ಅಂಕ ಪಟ್ಟಿಯಲ್ಲಿ ಸದ್ಯ ಒಂದು ಗೆಲುವಿನೊಂದಿಗೆ 2ನೇ ಸ್ಥಾನದಲ್ಲಿರುವ ಟೀಮ್​ ಇಂಡಿಯಾ(IND) ಗುರುವಾರ ನೆದರ್ಲೆಂಡ್ಸ್​ ವಿರುದ್ಧ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ರೋಹಿತ್​ ಪಡೆ ಗೆಲುವು ಸಾಧಿಸಿದರೆ 2ನೇ ಗುಂಪಿನಲ್ಲಿ ಮೊದಲನೇ ಸ್ಥಾನಕ್ಕೇರುವ ಅವಕಾಶ ಹೊಂದಿದೆ. ಆದ್ದರಿಂದ ಭಾರತ ದೊಡ್ಡ ಅಂತರದಲ್ಲಿ ಗೆದ್ದು ಅಂಕದ ಜತೆಗೆ ರನ್​ರೇಟ್​ ಕೂಡ ಸುಧಾರಿಸಬೇಕಿದೆ.

ಪಿಚ್​ ರಿಪೋರ್ಟ್​: ಈ ಪಿಚ್​ ಹೆಚ್ಚಾಗಿ ಸ್ಪಿನ್​ ಬೌಲಿಂಗ್​ಗೆ ನೆರವಾಗಲಿದೆ. ಟಿ20 ವಿಶ್ವ ಕಪ್​ನ ಉದ್ಘಾಟನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್​ ತಂಡದ ಸ್ಪಿನ್ನರ್​ಗಳು ಮೇಲುಗೈ ಸಾಧಿಸಿದ್ದೇ ಇದಕ್ಕೆ ಉತ್ತಮ ನಿದರ್ಶನ. ಹೀಗಾಗಿ ಭಾರತವೂ ಸ್ಪಿನ್​ ಅಸ್ತ್ರವನ್ನು ಬಳಸಬೇಕಿದೆ. ಆದರೆ ಅಕ್ಷರ್​ ಪಟೇಲ್​ ಕಳೆದ ಪಾಕ್​ ವಿರುದ್ಧದ ಪಂದ್ಯದಲ್ಲಿ ದುಬಾರಿಯಾಗಿದ್ದರು. ಅವರ ಸ್ಥಾನಕ್ಕೆ ಯಜುವೇಂದ್ರ ಚಹಲ್​ ಅವರನ್ನು ಬಳಸಿಕೊಂಡರೆ ಸ್ಪಿನ್​ ವಿಭಾಗ ಮತ್ತಷ್ಟು ಬಲಿಷ್ಠ ಗೊಳ್ಳಲಿದೆ. ಉಳಿದಂತೆ ಬ್ಯಾಟರ್​ಗಳಿಗೂ ಈ ಪಿಚ್​ ನೆರವಾಗಲಿದೆ.

ಮಳೆ ಮುನ್ಸೂಚನೆ

ಸಿಡ್ನಿಯಲ್ಲಿ ಗುರುವಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಭಾರತ ಮತ್ತು ನೆದರ್ಲೆಂಡ್ಸ್​ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಭಾನುವಾರ ಮೆಲ್ಬೋರ್ನ್​ನಲ್ಲಿಯೂ ಇದ್ದ ಮಳೆ ಭೀತಿ ಕೊನೆಗೆ ಠುಸ್​ ಪಟಾಕಿಯಾಗಿತ್ತು. ಇದೀಗ ಸಿಡ್ನಿಯಲ್ಲೂ ಇದೇ ರೀತಿ ಆದರೆ ಅಚ್ಚರಿ ಪಡಬೇಕಿಲ್ಲ. ಆದರೆ ಪಂದ್ಯದ ವೇಳೆ ಮೋಡ ಕವಿದ ವಾತಾವರಣವಂತೂ ಇರಲಿದೆ.

ಮೆಲ್ಬೋರ್ನ್​ನಲ್ಲಿ ಬುಧವಾರ ಮಳೆಯಾದ ಕಾರಣ ಇಂಗ್ಲೆಂಡ್​ ಮತ್ತು ಐರ್ಲೆಂಡ್ ವಿರುದ್ಧ ಪಂದ್ಯವನ್ನು ಡಕ್ವರ್ತ್‌ ಲೂಯಿಸ್​ ನಿಯಮದ ಮೂಲಕ ಫಲಿತಾಂಶ ಪಡೆಯಲಾಯಿತು. ಆದರೆ ದಿನದ ಮತ್ತೊಂದು ಪಂದ್ಯವಾದ ನ್ಯೂಜಿಲೆಂಡ್​-ಅಫಘಾನಿಸ್ತಾನ ಪಂದ್ಯ ಮಳೆಯಿಂದಾಗಿ ಒಂದೂ ಎಸೆತವನ್ನು ಕಾಣದೆ ರದ್ದುಗೊಂಡಿತು. ಸಿಡ್ನಿ ನಗರದಲ್ಲಿಯೂ ಮಂಗಳವಾರ ಸಣ್ಣ ಪ್ರಮಾಣದ ಮಳೆಯಾಗಿದೆ.

ಪಂದ್ಯ ಆರಂಭ: ಮಧ್ಯಾಹ್ನ 12.30(ಭಾರತೀಯ ಕಾಲಮಾನ)

ಸ್ಥಳ: ಸಿಡ್ನಿ

ನೇರ ಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​

ಇದನ್ನೂ ಓದಿ | T20 World Cup | ಮಳೆ ಪಂದ್ಯದಲ್ಲಿ ಮೇಲುಗೈ ಸಾಧಿಸಿದ ಐರ್ಲೆಂಡ್​; ಇಂಗ್ಲೆಂಡ್ ವಿರುದ್ಧ 5 ರನ್ ಜಯ

Exit mobile version