ನವದೆಹಲಿ: ಟಿ20 ವಿಶ್ವ ಕಪ್ ಸೋಲಿನ ಬಳಿಕ ಟೀಮ್ ಇಂಡಿಯಾದಲ್ಲಿ ಭಾರಿ ಬದಲಾವಣೆಗಳು ಸಂಭವಿಸಿವೆ. ಕಳೆದ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಗೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಆಟಗಾರರನ್ನು ಈ ಪ್ರವಾಸಕ್ಕೆ ಕಳುಹಿಸಲಾಗಿತ್ತು. ಆದರೆ ಬಾಂಗ್ಲಾ ವಿರುದ್ಧದ ಸರಣಿಗೆ ಮತ್ತೆ ವಿಶ್ರಾಂತಿಯಲ್ಲಿದ್ದ ಆಟಗಾರರಿಗೆ ಅವಕಾಶ ನೀಡಲಾಗಿದೆ. ಇದೀಗ ಮತ್ತೆ ಶ್ರೀಲಂಕಾ(IND SL T20 Series) ವಿರುದ್ಧದ ತವರಿನ ಟಿ20 ಸರಣಿಯಿಂದ ಹಿರಿಯ ಆಟಗಾರಿಗೆ ಕೊಕ್ ನೀಡಲಾಗಿದೆ ಎಂದು ವರದಿಯಾಗಿದೆ.
ಶ್ರೀಲಂಕಾ ವಿರುದ್ಧ ಮುಂದಿನ ಜನವರಿಯಲ್ಲಿ ನಡೆಯಲಿರುವ ತವರಿನ ಮೂರು ಪಂದ್ಯಗಳ ಟಿ20 ಸರಣಿಯಿಂದ ರೋಹಿತ್ ಶರ್ಮಾ , ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ಗೆ ವಿಶ್ರಾಂತಿ ನೀಡಲಾಗಿದೆ ಎಂದು ಇನ್‌ಸೈಡ್‌ಸ್ಪೋರ್ಟ್ ತನ್ನ ವರದಿಯಲ್ಲಿ ಹೇಳಿಕೊಂಡಿದೆ. ಉಳಿದಂತೆ ದಿನೇಶ್ ಕಾರ್ತಿಕ್, ಆರ್. ಅಶ್ವಿನ್, ಮೊಹಮ್ಮದ್ ಶಮಿ ಕೂಡ ಈ ಸರಣಿಯಿಂದ ದೂರ ಉಳಿಯಲಿದ್ದಾರೆ ಎಂದು ತಿಳಿಸಿದೆ.
ಮುಂದಿನ 2024 ಟಿ20 ವಿಶ್ವ ಕಪ್ ತಯಾರಿಯ ಭಾಗವಾಗಿ ಬಿಸಿಸಿಐ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಹೊಸ ತಂಡವನ್ನು ಸಿದ್ಧಪಡಿಸುವ ಉತ್ಸಾಹದಲ್ಲಿದೆ. ಇದೇ ಕಾರಣಕ್ಕೆ ರೋಹಿತ್, ವಿರಾಟ್ ಅಥವಾ ಇತರ ಹಿರಿಯ ಆಟಗಾರರನ್ನು ಮುಂದಿನ ಟಿ20 ವಿಶ್ವಕಪ್ ತಂಡದಿಂದ ಕೈಬಿಡುವ ಸಾಧ್ಯತೆಗಳಿವೆ. ಹೀಗಾಗಿ ಶ್ರೀಲಂಕಾ ವಿರುದ್ಧದ ಸರಣಿಯಿಂದ ಎಲ್ಲ ಹಿರಿಯ ಆಟಗಾರರನ್ನು ಕೈಬಿಡಲಿದೆ ಎಂದು ವರದಿಯೊಂದು ತಿಳಿಸಿದೆ.
ಇದನ್ನೂ ಓದಿ | IND VS BANGLA | ಢಾಕಾ ತಲುಪಿದ ಟೀಮ್ ಇಂಡಿಯಾ; ಭಾನುವಾರ ಮೊದಲ ಏಕದಿನ ಕದನ