Site icon Vistara News

IND vs AFG 1st T20: ಅಪಾಯಕಾರಿ ಆಫ್ಘನ್​ ಸವಾಲು ಎದರಿಸಲು ಸಿದ್ಧವಾದ ಟೀಮ್​ ಇಂಡಿಯಾ

Rinku Singh and Sanju Samson find a reason to smile

ಮೊಹಾಲಿ: ಭಾರತ ಮತ್ತು ಅಫಘಾನಿಸ್ತಾನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ(IND vs AFG 1st T20) ಪಂದ್ಯವನ್ನಾಡಲು ಸಜ್ಜಾಗಿ ನಿಂತಿದೆ. ಇದೇ ವರ್ಷ ಟಿ20 ವಿಶ್ವಕಪ್​ ಟೂರ್ನಿ ನಡೆಯಲಿರುವ ಕಾರಣ ಇತ್ತಂಡಗಳಿಗೂ ಈ ಸರಣಿ ಮಹತ್ವದ್ದಾಗಿದೆ. ಮೊಹಾಲಿಯಲ್ಲಿ ನಾಳೆ ಮೊದಲ ಪಂದ್ಯ ನಡೆಯಲಿದೆ.

ಕೊಹ್ಲಿ ಅಲಭ್ಯ


ವಿರಾಟ್​ ಕೊಹ್ಲಿ ಅವರು ತಮ್ಮ ಪುತ್ರಿಯ ಹುಟ್ಟುಹಬ್ಬದ ಕಾರಣದಿಂದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಅವರ ಸ್ಥಾನದಲ್ಲಿ ಶುಭಮನ್​ ಗಿಲ್​ ಆಡಲಿದ್ದಾರೆ. ನಾಯಕ ರೋಹಿತ್ ಶರ್ಮಾ ಜತೆಗೆ ಯಶಸ್ವಿ ಜೈಸ್ವಾಲ್ ಓಪನಿಂಗ್ ಮಾಡಲಿದ್ದಾರೆ ಎಂದು ಈಗಾಗಲೇ ತಂಡದ ಕೋಚ್​ ರಾಹುಲ್​ ದ್ರಾವಿಡ್​ ಖಚಿತಪಡಿಸಿದ್ದಾರೆ. ಸೂರ್ಯಕುಮಾರ್​ ಮತ್ತು ಹಾರ್ದಿಕ್​ ಪಾಂಡ್ಯ ಗಾಯದಿಂದಾಗಿ ಅಲಭ್ಯರಾದ ಕಾರಣ ಮಧ್ಯಮ ಕ್ರಮಾಂಕದಲ್ಲಿ ರಿಂಕು ಸಿಂಗ್​ ಮತ್ತು ಶಿವಂ ದುಬೆ ನಿರೀಕ್ಷಿತ ಮಟ್ಟದ ಬ್ಯಾಟಿಂಗ್​ ಪ್ರದರ್ಶನ ತೋರುವ ಅಗತ್ಯವಿದೆ.

ರೋಹಿತ್​ಗೆ ಅಗ್ನಿಪರೀಕ್ಷೆ


2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಟೂರ್ನಿಯ ಬಳಿಕ ರೋಹಿತ್​ ಶರ್ಮ ಅವರು ಆಡುತ್ತಿರುವ ಮೊದಲ ಟಿ20 ಸರಣಿ ಇದಾಗಿದೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಆಡಿದ್ದ ರೋಹಿತ್​ ಬಳಿಕ ಭಾರತ ಪರ ಆಡಿಲ್ಲ. 14 ತಿಂಗಳ ಬಳಿಕ ಟಿ20 ತಂಡ ಸೇರಿದ ರೋಹಿತ್​ ಯುವ ಬ್ಯಾಟರ್​ಗಳ ಮುಂದೆ ತಮ್ಮ ಬ್ಯಾಟಿಂಗ್​ ಸಾಮರ್ಥ್ಯ ತೋರಬೇಕಿದೆ. ಈ ಸರಣಿಯಲ್ಲಿ ನಿರೀಕ್ಷಿತ ಬ್ಯಾಟಿಂಗ್​ ನಡೆಸದೇ ಹೋದರೆ ಜೂನ್​ನಲ್ಲಿ ನಡೆಯುವ ಟಿ20 ವಿಶ್ವಕಪ್​ ಟೂರ್ನಿಗೆ ಆಯ್ಕೆಯಾಗುವುದು ಕಷ್ಟ ಸಾದ್ಯ. ಏಕೆಂದರೆ ಹಿರಿಯ ಆಟಗಾರರನ್ನು ಬಿಸಿಸಿಐ ಈಗಾಗಲೇ ಟಿ20 ಸರಣಿಯಿಂದ ದೂರ ಇಟ್ಟಿತ್ತು. ಸದ್ಯ ಸಿಕ್ಕ ಒಂದು ಅವಕಾಶವನ್ನು ಹಿರಿಯ ಆಟಗಾರರು ಸರಿಯಾಗಿ ಬಳಸಿಕೊಳ್ಳಬೇಕಿದೆ.

ಆಫ್ಘನ್ ಸವಾಲು ಸುಲಭವಲ್ಲ


ಅಫಘಾನಿಸ್ತಾನ ತಂಡವನ್ನು ಕ್ರಿಕೆಟ್​ ಶಿಶು ಎನ್ನುವ ಕಾಲ ಬದಲಾಗಿದೆ. ಇದಕ್ಕೆ ಕಳೆದ ವರ್ಷ ಭಾರತದಲ್ಲೇ ನಡೆದ ಏಕದಿನ ವಿಶ್ವಕಪ್​ ಟೂರ್ನಿಯೇ ಉತ್ತಮ ನಿದರ್ಶನ. ಬಲಿಷ್ಠ ತಂಡವಾದ ಇಂಗ್ಲೆಂಡ್​, ಪಾಕಿಸ್ತಾನ ಸೇರಿ ಹಲವು ತಂಡಗಳಿಗೆ ಹೀನಾಯ ಸೋಲುಣಿಸಿತ್ತು. ಅಲ್ಲದೆ ಭಾರತಕ್ಕೂ ಪ್ರಬಲ ಪೈಪೋಟಿ ನೀಡಿತ್ತು. ಹೀಗಾಗಿ ಅಫಘಾನಿಸ್ತಾನದ ಸವಾಲನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಯುವ ಮತ್ತು ಹಿರಿಯ ಆಟಗಾರರಿಂದ ಕೂಡಿದೆ.

ಇದನ್ನೂ ಓದಿ Rahul Dravid: ಅಯ್ಯರ್​,ಇಶಾನ್​ ಅಶಿಸ್ತು ವಿಚಾರದಲ್ಲಿ ಸ್ಪಷ್ಟನೆ ನೀಡಿದ ಕೋಚ್​​ ದ್ರಾವಿಡ್

ಉಭಯ ತಂಡಗಳ ಆಡುವ ಸಂಭಾವ್ಯ ತಂಡ


ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ತಿಲಕ್​ ವರ್ಮ, ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಅಕ್ಷರ್​ ಪಟೇಲ್, ಕುಲದೀಪ್ ಯಾದವ್, ಶಿವಂ ದುಬೆ, ಅರ್ಶ್​ದೀಪ್​ ಸಿಂಗ್, ಮುಖೇಶ್ ಕುಮಾರ್, ಆವೇಶ್​ ಖಾನ್​.

ಅಫಘಾನಿಸ್ತಾನ: ಇಬ್ರಾಹಿಂ ಜದ್ರಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್​ ಕೀಪರ್​), ರಹಮತ್ ಶಾ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಕರೀಮ್ ಜನತ್, ಅಜ್ಮತುಲ್ಲಾ ಒಮರ್ಜಾಯ್, ಮುಜೀಬ್ ಉರ್ ರೆಹಮಾನ್, ಫಜಲ್ ಹಕ್ ಫಾರೂಕಿ, ನವೀನ್ ಉಲ್ ಹಕ್, ಕೈಸ್ ಅಹ್ಮದ್.

Exit mobile version